ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ
ರಾಜ್ಯದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಗಳು ಇಂದಿನಿಂದ ಪ್ರಾರಂಭಗೊಳ್ಳಲಿದ್ದು, ಈ ತಿಂಗಳ 26ರವರೆಗೂ ನಡೆಯಲಿದೆ. ಒಟ್ಟು 856 ಕೇಂದ್ರಗಳಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ನಡೆಸಲು ಸಕಲ ಸಿದ್ಧತೆ ಮಾಡಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.

ಪರೀಕ್ಷೆ ಮುಗಿದ ತಕ್ಷಣವೇ ಈ ತಿಂಗಳ 30ರಿಂದಲೇ ಮೌಲ್ಯ ಮಾಪನ ಕೆಲಸ ಆರಂಭಿಸಲು ಸಿದ್ಧತೆಗಳನ್ನು ನಡೆಸಲಾಗಿದ್ದು, ಬೆಂಗಳೂರು, ಮೈಸೂರು, ದಾವಣಗೆರೆ, ಬೆಳಗಾವಿ ಮತ್ತು ಮಂಗಳೂರು ಈ ಐದು ಸ್ಥಳಗಳನ್ನು ಕೇಂದ್ರವಾಗಿಟ್ಟುಕೊಂಡು ಒಟ್ಟು 37 ಕಡೆ ಮೌಲ್ಯ ಮಾಪನ ಕೆಲಸ ನಡೆಯಲಿವೆ. ಒಟ್ಟು 40 ಲಕ್ಷ ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ 15,000 ಉಪನ್ಯಾಸಕರನ್ನು ಬಳಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಇದೇ ವೇಳೆ ಏಪ್ರಿಲ್ ಮೊದಲ ವಾರದಲ್ಲಿ ಫಲಿತಾಂಶ ಕೊಡುವ ಉದ್ದೇಶವಿದೆ ಎಂದು ಸಚಿವರು ವಿವರಿಸಿದರು.

ಎಸ್ಸೆಸ್ಸೆಲ್ಸಿ ಪರೀಕ್ಷೆ:
ಅದೇ ರೀತಿ ಈ ತಿಂಗಳ 30ರಿಂದ ಏಪ್ರಿಲ್ 16ರವರೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಯು 2762 ಕೇಂದ್ರಗಳಲ್ಲಿ ನಡೆಯಲಿವೆ. ಮಾರ್ಚ್18 ರಂದು ಪ್ರಯೋಗಿಕ ಪರೀಕ್ಷೆ ಇರುತ್ತದೆ. ಏಪ್ರಿಲ್ 17ರಿಂದಲೇ ಮೌಲ್ಯಮಾಪನ ಕೆಲಸ ಆರಂಭವಾಗಲಿದೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಬಳ್ಳಾರಿಯಲ್ಲಿ ಮತಯಂತ್ರ ಬಳಸದಿರಲು ಒತ್ತಾಯ
ಅನಂತ್ ಕುಮಾರ್‌ಗೂ ಸೀಟು ಹಂಚಿಕೆ ಹೊಣೆ
ಬಿಜೆಪಿ ಬಂಡಾಯ: ಸಿಎಂ ಸಂಧಾನ ಯಶಸ್ವಿ
ಎಡ, ಪ್ರಾದೇಶಿಕ ಪಕ್ಷಗಳಿಂದ 'ತೃತೀಯ ಶಕ್ತಿ'ಗೆ ಚಾಲನೆ
ವಿದ್ಯುತ್ ಸಮಸ್ಯೆಯಿಂದ ನೀರಿಗೆ ಅಭಾವ: ಶೋಭಾ
ತರಾತುರಿಯಲ್ಲಿ ದೀಪಬೆಳಗಿ ಉದ್ಘಾಟಿಸಿದ ಗೌಡರು