ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಇವೆಂಟ್ಸ್ ಹೌಸ್ 'ಮುಖವಾಡ'ದ ರಂಗು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಇವೆಂಟ್ಸ್ ಹೌಸ್ 'ಮುಖವಾಡ'ದ ರಂಗು
ಲೋಕಸಭಾ ಚುನಾವಣೆ ಘೋಷಣೆಯಾಗಿದೆ. ಇದರೊಂದಿಗೆ ರಾಜಕೀಯ ರಂಗೇರುತ್ತಿದೆ. ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ರಾಜಕಾರಣಿಗಳ ಮುಖವಾಡ ತಯಾರಿಸಿ ರಾಜ್ಯಾದ್ಯಂತ ಪ್ರಸಿದ್ದಿಯಾದ ಇವೆಂಟ್ಸ್ ಹೌಸ್ ಸಂಸ್ಥೆ ಈ ಬಾರಿ ಮತ್ತೆ ಮುಖವಾಡ ತಯಾರಿಗೆ ಇಳಿದಿದೆ.
NRB

ಕಳೆದ ಬಾರಿ ಸಂಸ್ಥೆಯ ಮುಖವಾಡಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಭಾರೀ ಬೇಡಿಕೆ ಬಂದಿದ್ದು, ಅನೇಕ ಅಭ್ಯರ್ಥಿಗಳ ಗೆಲುವಿಗೂ ಇದು ಕಾರಣವಾಗಿರುವುದು ಸುಳ್ಳ್ಳಲ್ಲ. ಈ ಬಾರಿಯೂ ಲೋಕಸಭಾ ಚುನಾವಣೆಯಲ್ಲಿ ಮುಖವಾಡದ ಮೆರುಗನ್ನು ಪ್ರದರ್ಶಿಸುವ ಮೂಲಕ ಚುನಾವಣೆಯನ್ನು ರಂಗೇರಿಸಲು ಸಂಸ್ಥೆ ಸಿದ್ಧತೆ ನಡೆಸಿದೆ.

ಕಳೆದ ಬಾರಿ ಸಂಸ್ಥೆ ರಾಜ್ಯ ವ್ಯಾಪ್ತಿಯಲ್ಲಿ ರಾಜ್ಯ ನಾಯಕರ ಮುಖವಾಡವನ್ನಷ್ಟೇ ತಯಾರಿಸಿದರೆ ಈ ಬಾರಿ ತನ್ನ ಮುಖವಾಡ ವನ್ನು ರಾಷ್ಟ್ರಮಟ್ಟದಲ್ಲಿ ವಿಸ್ತರಿಸಲು ನಿರ್ಧರಿಸಿದೆ. ಈಗಾಗಲೇ ಹೊರ ರಾಜ್ಯಗಳ ಮುಖಂಡರ ಮುಖವಾಡವನ್ನು ತಯಾರಿಸಿ ಕೊಡುವಂತೆ ಕೆಲವು ಬೇಡಿಕೆಗಳು ಕೂಡಾ ಬರುತ್ತಿವೆ ಎಂದು ಸಂಸ್ಥೆ ತಿಳಿಸಿದೆ.

ಗುಜರಾತ್‌ನಲ್ಲಿ ಮುಖವಾಡದ ಮೋಡಿ ಜನರ ಮೇಲೆ ಗಾಢ ಪ್ರಭಾವ ಬೀರಿತ್ತು. ಈ ಕಲ್ಪನೆಯನ್ನು ರಾಜ್ಯದಲ್ಲಿಯೂ ಯಾಕೆ ಆರಂಭಿಸಬಾರದು ಎಂದು ಇವೆಂಟ್ಸ್ ಹೌಸ್ ಸಂಸ್ಥೆ ರಾಜ್ಯದಲ್ಲಿ ಮೊದಲ ಬಾರಿಗೆ ಮುಖವಾಡವನ್ನು ತಯಾರಿಸಿತು. ಜೊತೆಗೆ ಈ ಕಲ್ಪನೆ ಯಶಸ್ವಿಯಾಗಿದ್ದು, ರಾಷ್ಟ್ರೀಯ ಮಾಧ್ಯಮಗಳಲ್ಲಿಯೂ ಪ್ರಚಾರ ಪಡೆದಿರುವುದು ಸಂಸ್ಥೆಯ ಗರಿಮೆಗೆ ಸಾಕ್ಷಿ.

ತಯಾರಿ ಹೀಗೆ:
ಅಭ್ಯರ್ಥಿಗಳ ನಗುಮೊಗದ ಚಿತ್ರ ಲಭ್ಯವಾದರೆ ಕೇವಲ ಒಂದು ವಾರದ ಅವಧಿಯಲ್ಲಿ ಈ ಮುಖವಾಡಗಳನ್ನು ಸಂಸ್ಥೆ ಸಿದ್ಧಪಡಿಸಿಕೊಡಲಿದೆ. ಚುನಾವಣಾ ಆಯೋಗದ ಸ್ಪಷ್ಟ ನಿರ್ದೇಶನದ ಹಿನ್ನೆಲೆಯಲ್ಲಿ ಪ್ಲಾಸ್ಟಿಕ್ ಬದಲಿಗೆ ದಪ್ಪ ಕಾಗದವನ್ನು ಈ ಮುಖವಾಡ ತಯಾರಿಕೆಯಲ್ಲಿ ಬಳಸಲಾಗಿರುವುದು ಇದರ ವಿಶೇಷತೆ. ಇದಲ್ಲದೇ ಯಾವುದೇ ಮಾಧ್ಯಮಗಳ ಪೂರ್ಣ ಪ್ರಚಾರ ನಿರ್ವಹಣೆ, ಅಭ್ಯರ್ಥಿಗಳ ಸಾಕ್ಷ್ಯಚಿತ್ರ, ಕರಪತ್ರ ಹಾಗೂ ಇತರ ಲೇಖನ ಸಹಿತ ಮುದ್ರಣ, ವಿನ್ಯಾಸಗಳನ್ನೂ ಸಂಸ್ಥೆಯೂ ನಿರ್ವಹಿಸುತ್ತಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಬೈಸಿಕಲ್ ವಿತರಣೆಗೆ ನೀತಿ ಸಂಹಿತೆ ಅಡ್ಡಿ
ಸ್ಪರ್ಧೆಗೆ ಅಪ್ಪನ ಬೆಂಬಲವಿರಲಿಲ್ಲ: ರಾಘವೇಂದ್ರ
ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ
ಬಳ್ಳಾರಿಯಲ್ಲಿ ಮತಯಂತ್ರ ಬಳಸದಿರಲು ಒತ್ತಾಯ
ಅನಂತ್ ಕುಮಾರ್‌ಗೂ ಸೀಟು ಹಂಚಿಕೆ ಹೊಣೆ
ಬಿಜೆಪಿ ಬಂಡಾಯ: ಸಿಎಂ ಸಂಧಾನ ಯಶಸ್ವಿ