ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಮಾಯಾ ಪ್ರಧಾನಿಯಾಗಲು ಅಭ್ಯಂತರವಿಲ್ಲ: ಕುಮಾರ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಾಯಾ ಪ್ರಧಾನಿಯಾಗಲು ಅಭ್ಯಂತರವಿಲ್ಲ: ಕುಮಾರ್
ಬಿಎಸ್ಪಿ ವರಿಷ್ಠೆ ಪ್ರಧಾನ ಮಂತ್ರಿಯಾಗಲು ಜೆಡಿಎಸ್ ಅಭ್ಯಂತರವಿಲ್ಲ ಎಂಬುದಾಗಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. 48 ಗಂಟೆಗಳೊಳಗಾಗಿ ತೃತೀಯ ರಂಗದ ಪ್ರಧಾನಿ ಅಭ್ಯರ್ಥಿ ಯಾರು ಎಂಬುದನ್ನು ನಿರ್ಧರಿಸಬೇಕು ಎಂದು ಹೇಳಿದ್ದರು. ಅಲ್ಲದೆ, ತನ್ನನ್ನು ಪ್ರಧಾನಮಂತ್ರಿ ಪದವಿ ಅಭ್ಯರ್ಥಿ ಎಂದು ಘೋಷಿಸಿದರೆ ಮಾತ್ರವೇ ತೃತೀಯ ರಂಗ ಸೇರಿಕೊಳ್ಳುವುದಾಗಿ ಅವರು ಹೇಳಿದ್ದರು.

ಮೊದಲಿನಿಂದಲೂ ಜೆಡಿಎಸ್ ಮಾಯಾವತಿ ಅವರಿಗೆ ಬೆಂಬಲ ಸೂಚಿಸಿದೆ ಎಂದು ಕುಮಾರ ಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಕುಮಾರ್, ಮಾಯಾವತಿ ಅವರು ಪ್ರಧಾನಮಂತ್ರಿಯಾಗಲು ನಮ್ಮದೇನೂ ಅಭ್ಯಂತರವಿಲ್ಲ ಎಂದಿದ್ದಾರೆ.

ಆದರೆ ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಪರ್ಯಾಯ ಶಕ್ತಿಯ ಹುಟ್ಟು ಹಾಕುವಿಕೆಗೆ ಶತಾಯಗತಾಯ ಪ್ರಯತ್ನ ಮಾಡಿ ಭಾರಿ ಸಮಾವೇಶ ಆಯೋಜಿಸಿರುವ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಪ್ರಧಾನಿ ಪಟ್ಟದ ಮೇಲೆ ಕಣ್ಣಿಟ್ಟಿರುವುದು ಅಷ್ಟುದೊಡ್ಡ ಗುಟ್ಟೇನಲ್ಲ.

ಇದೀಗ ಬೆಹನ್‌ಜಿ ಪ್ರಧಾನಿ ಪಟ್ಟಕ್ಕೆ ರಚ್ಚೆ ಹಿಡಿದಿರುವುದಕ್ಕೆ ಪ್ರಧಾನಿ ಸ್ಥಾನದ ಇತರ ಆಕಾಂಕ್ಷಿಗಳ ಪ್ರತಿಕ್ರಿಯೆ ಏನು ಎಂಬುದು ಮಾರ್ಚ್ 15ರಂದು ಸ್ಪಷ್ಟಗೊಳ್ಳಲಿದೆ. ಮಾರ್ಚ್ 15ರಂದು ಬಿಎಸ್ಪಿ ಮಾಯಾವತಿ ಜೊತೆಗೆ ತೃತೀಯ ರಂಗದ ಮಾತುಕತೆ ನಡೆಯಲಿದ್ದು, ಈ ಸಂದರ್ಭ ಪ್ರಧಾನಿ ಅಭ್ಯರ್ಥಿ ಕುರಿತಾಗಿಯೂ ಚರ್ಚೆ ನಡೆಯಲಿದೆ ಎಂದು ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಹೇಳಿದ್ದಾರೆ. ಮಾರ್ಚ್ 15ರಂದು ಬಿಎಸ್ಪಿ ಸಂಸ್ಥಾಪಕ ಕಾನ್ಶಿರಾಂ ಅವರ ಜನ್ಮದಿನವೂ ಆಗಿದ್ದು, ಆ ದಿನ ನವದೆಹಲಿಯ ತಮ್ಮ ನಿವಾಸಕ್ಕೆ ತೃತೀಯ ರಂಗದ ಮುಖಂಡರನ್ನು ಮಾಯಾವತಿ ಆಹ್ವಾನಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಇವೆಂಟ್ಸ್ ಹೌಸ್ 'ಮುಖವಾಡ'ದ ರಂಗು
ಬೈಸಿಕಲ್ ವಿತರಣೆಗೆ ನೀತಿ ಸಂಹಿತೆ ಅಡ್ಡಿ
ಸ್ಪರ್ಧೆಗೆ ಅಪ್ಪನ ಬೆಂಬಲವಿರಲಿಲ್ಲ: ರಾಘವೇಂದ್ರ
ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ
ಬಳ್ಳಾರಿಯಲ್ಲಿ ಮತಯಂತ್ರ ಬಳಸದಿರಲು ಒತ್ತಾಯ
ಅನಂತ್ ಕುಮಾರ್‌ಗೂ ಸೀಟು ಹಂಚಿಕೆ ಹೊಣೆ