ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಉಡುಪಿ ಜಿಲ್ಲೆಯಲ್ಲೊಂದು ಚಾಪ್ಲಿನ್ ವಿವಾದ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಉಡುಪಿ ಜಿಲ್ಲೆಯಲ್ಲೊಂದು ಚಾಪ್ಲಿನ್ ವಿವಾದ
ಚಿತ್ರವೊಂದರ ಸೆಟ್‌ಗಾಗಿ ಸಿದ್ಧವಾಗುತ್ತಿದ್ದ ವಿಶ್ವವಿಖ್ಯಾತ ಹಾಸ್ಯನಟ ಚಾರ್ಲಿ ಚಾಪ್ಲಿನ್ ಪ್ರತಿಮೆ ನಿರ್ಮಾಣಕ್ಕೆ ಆತ ಕ್ರೈಸ್ತ ಜನಾಂಗಕ್ಕೆ ಸೇರಿದವ ಎಂಬ ನೆಪವೊಡ್ಡಿ ಅಡ್ಡಿಪಡಿಸಿದರೆಂದು ಉಡುಪಿ ಜಿಲ್ಲೆಯ ಹಿಂದೂ ಸಂಘಟನೆಯೊಂದರ ಕಾರ್ಯಕರ್ತರ ಮೇಲೆ ಆರೋಪಹೊರಿಸಲಾಗಿದೆ.

"ಹೇಮಂತ್ ಹೆಗಡೆ ನಿರ್ದೇಶಿಸುತ್ತಿರುವ ಹೌಸ್ಫುಲ್ ಚಿತ್ರಕ್ಕಾಗಿ ನಿರ್ಮಾಣವಾಗುತ್ತಿರುವ 67 ಅಡಿ ಎತ್ತರದ ಚಾರ್ಲಿ ಚಾಪ್ಲಿನ್ ಪ್ರತಿಮೆ ನಿರ್ಮಾಣಕ್ಕೆ ಸ್ಥಳೀಯ ಕೆಲ ಯುವಕರು ಅಡ್ಡಿಪಡಿಸಿದರು. ಚಾರ್ಲಿ ಚಾಪ್ಲಿನ್ ಕ್ರಿಶ್ಚಿಯನ್ ಆಗಿರುವುದರಿಂದ ಈ ಪ್ರತಿಮೆ ನಿರ್ಮಿಸುವುದಕ್ಕೆ ಅವಕಾಶ ನೀಡುವುದಿಲ್ಲವೆಂದು" ಹಿಂದೂ ಸಂಘಟನೆಯ ಕಾರ್ಯಕರ್ತರು ಅಡ್ಡಿಪಡಿಸಿದರು ಎಂದು ಹೇಮಂತ್ ಆರೋಪಿಸಿದ್ದಾರೆ.

"ಈ ಘಟನೆಯ ಬಳಿಕ ನಿರ್ದೇಶಕರು ಈ ಪ್ರತಿಮೆ ಸ್ಥಾಪನೆ ಯೋಜನೆಯನ್ನು ಕೈಬಿಟ್ಟಿದ್ದಾರೆ. ಉಡುಪಿಯಂತಹ ಸುಶಿಕ್ಷಿತರ ಜಿಲ್ಲೆಯಲ್ಲಿಯೂ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಈ ರೀತಿಯ ಪ್ರತಿಕ್ರಿಯೆಗಳು ಬಂದಿರುವ ಬಗ್ಗೆ ಬೇಸರವಿದೆ. ಇದರಿಂದ ಯಾರದ್ದೇ ಭಾವನೆಗಳಿಗೆ ನೋವಾಗುತ್ತಿದೆ ಎಂದರೆ ಈ ಪ್ರತಿಮೆಯನ್ನು ಉಡುಪಿಯಲ್ಲಿ ನಿರ್ಮಿಸುವ ನಿರ್ಧಾರ ಕೈಬಿಟ್ಟಿದ್ದೇನೆ" ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮಾಯಾ ಪ್ರಧಾನಿಯಾಗಲು ಅಭ್ಯಂತರವಿಲ್ಲ: ಕುಮಾರ್
ಇವೆಂಟ್ಸ್ ಹೌಸ್ 'ಮುಖವಾಡ'ದ ರಂಗು
ಬೈಸಿಕಲ್ ವಿತರಣೆಗೆ ನೀತಿ ಸಂಹಿತೆ ಅಡ್ಡಿ
ಸ್ಪರ್ಧೆಗೆ ಅಪ್ಪನ ಬೆಂಬಲವಿರಲಿಲ್ಲ: ರಾಘವೇಂದ್ರ
ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ
ಬಳ್ಳಾರಿಯಲ್ಲಿ ಮತಯಂತ್ರ ಬಳಸದಿರಲು ಒತ್ತಾಯ