ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಬಳ್ಳಾರಿ: ಬಿಜೆಪಿ ಪರ ಪ್ರಚಾರಕ್ಕೆ ಪಾರಿವಾಳಗಳು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಳ್ಳಾರಿ: ಬಿಜೆಪಿ ಪರ ಪ್ರಚಾರಕ್ಕೆ ಪಾರಿವಾಳಗಳು
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕಾಗಿ ಸಾವಿರಾರು ಪಾರಿವಾಳಗಳು ಶಾಂತಿ ಸಂದೇಶ ಸಾರಲಿದೆ. ಶತಮಾನಗಳ ಹಿಂದೆ ಮಾಹಿತಿ ರವಾನೆಗಾಗಿ ಬಳಸುತ್ತಿದ್ದ ಪಾರಿವಾಳಗಳನ್ನೇ ಪಕ್ಷದ ಅಭ್ಯರ್ಥಿ ಆರೋಗ್ಯ ಸಚಿವ ಶ್ರೀರಾಮುಲು ಸಹೋದರಿ ಜೋಳದರಾಶಿ ಶಾಂತಿಯವರ ಪರ ಪ್ರಚಾರ ಕಾರ್ಯಕ್ಕೆ ಬಳಸಲು ಮುಂದಾಗಿದ್ದಾರೆ.

ಇದಕ್ಕಾಗಿ ಸುಮಾರು 10 ಜಾದೂಗಾರರು ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚರಿಸಿ, ರಾಜ್ಯ ಸರ್ಕಾರದ ಸಾಧನೆ ಹಾಗೂ ಸಚಿವ ಜನಾರ್ದನ ರೆಡ್ಡಿ ರೂಪಿಸಿರುವ ಬಳ್ಳಾರಿಯ ಅಭಿವೃದ್ದಿ ಪರ ಚಿಂತನೆಗಳನ್ನು ಜಾದೂ ಮೂಲಕ ತೋರಿಸಿ, ಮತದಾರರ ಮನವೊಲಿಸಲು ಮುಂದಾಗಿದ್ದಾರೆ.

ಅಲ್ಲದೆ, ಬೆಂಗಳೂರಿನ 4, ಹುಬ್ಬಳ್ಳಿ ಹಾಗೂ ಬಳ್ಳಾರಿಯಿಂದ ತಲಾ ಎರಡೆರಡು ನೃತ್ಯ ತಂಡಗಳು ಹಿಂದಿನಂತೆ ಬಿಜೆಪಿ ಪರ ಪ್ರಚಾರಕ್ಕಿಳಿಯಲಿವೆ. ಜಿಲ್ಲೆಯ ವಿವಿಧೆಡೆ ಸಂಚರಿಸಲಿರುವ ಈ ತಂಡಗಳು ಬಿಜೆಪಿ ಅಭ್ಯರ್ಥಿ ಶಾಂತಿಯವರನ್ನು ಗೆಲ್ಲಿಸುವಂತೆ ಗೀತೆ-ನೃತ್ಯಗಳ ಮೂಲಕ ಪ್ರಚಾರ ನಡೆಸಲಿದ್ದಾರೆ. ಒಟ್ಟಿನಲ್ಲಿ ಸರ್ವವೂ ಓಟಿಗಾಗಿ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕಾಂಗ್ರೆಸ್ ಪಟ್ಟಿಯಲ್ಲಿ ಕೃಷ್ಣ, ಧರಂ, ಖರ್ಗೆ?
ಉಡುಪಿ ಜಿಲ್ಲೆಯಲ್ಲೊಂದು ಚಾಪ್ಲಿನ್ ವಿವಾದ
ಮಾಯಾ ಪ್ರಧಾನಿಯಾಗಲು ಅಭ್ಯಂತರವಿಲ್ಲ: ಕುಮಾರ್
ಇವೆಂಟ್ಸ್ ಹೌಸ್ 'ಮುಖವಾಡ'ದ ರಂಗು
ಬೈಸಿಕಲ್ ವಿತರಣೆಗೆ ನೀತಿ ಸಂಹಿತೆ ಅಡ್ಡಿ
ಸ್ಪರ್ಧೆಗೆ ಅಪ್ಪನ ಬೆಂಬಲವಿರಲಿಲ್ಲ: ರಾಘವೇಂದ್ರ