ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಕಾಂಗ್ರೆಸ್‌ಗೆ ಮರಳಿದ 'ಸಮಾಜವಾದಿ' ಬಂಗಾರಪ್ಪ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಾಂಗ್ರೆಸ್‌ಗೆ ಮರಳಿದ 'ಸಮಾಜವಾದಿ' ಬಂಗಾರಪ್ಪ
NRB
ಕಾಂಗ್ರೆಸ್ ಪಕ್ಷದ ವತಿಯಿಂದ ಶಿವಮೊಗ್ಗದಲ್ಲಿ ಲೋಕಸಭಾ ಚುನಾವಣೆಗೆ ಸ್ಫರ್ಧಿಸಲು ತುದಿಗಾಲಲ್ಲಿ ನಿಂತಿರುವ ಎಸ್. ಬಂಗಾರಪ್ಪ ಅವರು ಶನಿವಾರ ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರಿದರು. ಸೋನಿಯಾ ಭೇಟಿಗಾಗಿ ಮುಂಜಾನೆಯಿಂದಲೇ ಕಾದಿದ್ದ ಬಂಗಾರಪ್ಪರಿಗೆ ಸುದೀರ್ಘ ಸಮಯದ ಬಳಿಕ ಮೇಡಂ ದರ್ಶನವಾಗಿದ್ದು, ಮಾತುಕತೆ ಫಲಕಾರಿಯಾಗಿದೆ. ಅಲ್ಲದೆ ಅವರು ಕಾಂಗ್ರೆಸ್ ವತಿಯಿಂದ ಚುನಾವಣೆಗೆ ಸ್ಫರ್ಧಿಸುವುದು ಖಚಿತವಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಬಂಗಾರಪ್ಪ, ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ತಾವು ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ. "ಶಿವಮೊಗ್ಗದಲ್ಲಿ ಬಿಜೆಪಿಗೆ ಹಣಬಲವಿದ್ದರೆ, ತನಗೆ ನನಗೆ ಜನ ಬಲವಿದೆ" ಎಂದು ಹೇಳಿರುವ ಬಂಗಾರಪ್ಪ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪನವರ ಪುತ್ರ ರಾಘವೇಂದ್ರ ಬಿಜೆಪಿ ಅಭ್ಯರ್ಥಿ. ಮಾಜಿ ಮುಖ್ಯಮಂತ್ರಿಯಾಗಿರುವ ಬಂಗಾರಪ್ಪ ಈ ಕ್ಷೇತ್ರವನ್ನು ಹಲವು ಬಾರಿ ಪ್ರತಿನಿಧಿಸಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯ ವೇಳೆ ಶಿಕಾರಿಪುರದಿಂದ ಯಡಿಯೂರಪ್ಪ ಎದುರು ಸ್ಫರ್ಧಿಸಿ ಭಾರೀ ಮತಗಳ ಅಂತರದಿಂದ ಸೋತಿದ್ದರು. ಯುಡಿಯೂರಪ್ಪರ ಈ ಪ್ರಚಂಡ ಗೆಲುವಿನ ವ್ಯೂಹ ರಚಿಸಿದ್ದೇ ರಾಘವೇಂದ್ರ ಎಂದು ಆಗ ಹೇಳಲಾಗಿತ್ತು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಅಂಬರೀಷ್‌ಗೆ ಗಾಳ ಹಾಕುತ್ತಿರುವ ಬಿಜೆಪಿ
ರಾಜಕೀಯ ಆತ್ಮಹತ್ಯೆ ಮಾಡಿಕೊಳ್ಳದಿರಿ: ಕಟ್ಟಾ
ಬಳ್ಳಾರಿ: ಬಿಜೆಪಿ ಪರ ಪ್ರಚಾರಕ್ಕೆ ಪಾರಿವಾಳಗಳು
ಕಾಂಗ್ರೆಸ್ ಪಟ್ಟಿಯಲ್ಲಿ ಕೃಷ್ಣ, ಧರಂ, ಖರ್ಗೆ?
ಉಡುಪಿ ಜಿಲ್ಲೆಯಲ್ಲೊಂದು ಚಾಪ್ಲಿನ್ ವಿವಾದ
ಮಾಯಾ ಪ್ರಧಾನಿಯಾಗಲು ಅಭ್ಯಂತರವಿಲ್ಲ: ಕುಮಾರ್