ನಾಗರಹೊಳೆ ರಾಷ್ಟ್ರೀಯ ಉದ್ಯಾನದ ನಡುವೆ ಹಾದು ಹೋಗುವ ಮೈಸೂರು-ಮಾನಂದವಾಡಿ ನಡುವಣ ರಸ್ತೆ ನಿರ್ವಹಣೆಯ ಕುರಿತು ಸುಪ್ರೀಂಕೋರ್ಟ್ ನೀಡಿದ್ದ ಆದೇಶವನ್ನು ರಾಜ್ಯ ಸರ್ಕಾರ ಎರಡನೆಯ ಬಾರಿ ಉಲ್ಲಂಘಿಸಿದೆ.
ವನ್ಯ ಸಂಕುಲಗಳು ವಾಸ ಮಾಡುವ ಈ ಪ್ರದೇಶದಲ್ಲಿ ರಸ್ತೆ ವಿಸ್ತರಣೆ ಮಾಡುವಾಗ ನಿರ್ವಹಣಾ ಸಮಿತಿಯ ಉಸ್ತುವಾರಿಯ ಅಡಿಯಲ್ಲಿ ಮಾಡಬೇಕು ಎಂದು ಈಗಾಗಲೇ ನ್ಯಾಯಾಲಯದ ಆದೇಶವಿದ್ದರೂ ಕೂಡ ಉಸ್ತುವಾರಿ ಸಮಿತಿಯ ನೇತೃತ್ವವಿಲ್ಲದೇ ಕಾಮಗಾರಿ ಪ್ರಾರಂಭವಾಗಿದೆ.
ಈ ಮೊದಲು ಇದೇ ಮಾರ್ಗದ ಪುಷ್ಪಗಿರಿಯಲ್ಲಿ ರಸ್ತೆ ವಿಸ್ತರಣೆಗೆ ಸಂಬಂಧಪಟ್ಟಂತೆ ಸರ್ಕಾರ ನಿಯಮ ಉಲ್ಲಂಘಿಸಿತ್ತು. ಈಗ ಮತ್ತೆ ಇದೇ ಮಾರ್ಗದಲ್ಲಿ ಮಾರ್ಚ್ 12ರಿಂದ ರಸ್ತೆ ಮೇಲ್ದರ್ಜೆಗೇರಿಸಲು ಸರ್ಕಾರ ಪ್ರಾರಂಭಿಸಿದೆ. ಈ ಮಾರ್ಗವು ಪ್ರಾಣಿಗಳ ಸಹಜ ವಾಸಸ್ಥಾನ ಹಾಗೂ ಅಪರೂಪದ ಸಸ್ಯಗಳು ಬೆಳೆಯುವ ಸ್ಥಳವಾಗಿದೆ. ಹೀಗಾಗಿ ಇಲ್ಲಿ ಯಾವುದೇ ಕಾಮಗಾರಿ ಕೈಗೆತ್ತಿಕೊಳ್ಳುವ ಮೊದಲು ಕೇಂದ್ರ ಸಮಿತಿಯ ಅನುಮತಿ ಪಡೆದುಕೊಳ್ಳಬೇಕು.
ಆದರೆ ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ದಿ ಪ್ರಾಧಿಕಾರ ಇವೆಲ್ಲವನ್ನು ಉಲ್ಲಂಘಿಸಿ ಅಂದಾಜು 13.14ಕೋಟಿ ರೂಪಾಯಿ ವೆಚ್ಚದಲ್ಲಿ ವಿಶ್ವಬ್ಯಾಂಕ್ ನೆರವಿನಲ್ಲಿ 30ಕಿಮಿ ಕಾಮಗಾರಿಯನ್ನು ಕೈಗೆತ್ತಿಕೊಂಡಿದೆ. |