ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಕಾಪುವಿನಲ್ಲಿ ಕಲ್ಲು ತೂರಾಟ-ನಿಷೇಧಾಜ್ಞೆ ಜಾರಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಾಪುವಿನಲ್ಲಿ ಕಲ್ಲು ತೂರಾಟ-ನಿಷೇಧಾಜ್ಞೆ ಜಾರಿ
ಎಸ್ಪಿ ಸೇರಿ 15ಮಂದಿಗೆ ಗಾಯ
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಚರ್ಚ್, ಪಬ್ ಮೇಲಿನ ದಾಳಿಯ ನಂತರ, ಚಾರ್ಲಿ ಚಾಪ್ಲಿನ್ ಮೂರ್ತಿ ಸ್ಥಾಪನೆ ವಿವಾದದ ನಡುವೆಯೇ ಮಂಗಳೂರಿನಲ್ಲಿ ಭಾನುವಾರ ನಡೆದ ಹಿಂದೂ ಸಮಾಜೋತ್ಸವದಲ್ಲಿ ಭಾಗವಹಿಸಿ ಉಡುಪಿಯತ್ತ ತೆರಳುತ್ತಿದ್ದ ಬಸ್ಸುಗಳ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆಯಿಂದಾಗಿ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಪಟ್ಟಣದಲ್ಲಿ ಎರಡು ದಿನಗಳ ಕಾಲ ನಿಷೇಧಾಜ್ಞೆ ಜಾರಿ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಮಂಗಳೂರಿನಲ್ಲಿ ನಡೆದ ಹಿಂದು ಸಮಾಜೋತ್ಸವದಲ್ಲಿ ಭಾಗವಹಿಸಿ ಉಡುಪಿ ಕಡೆಗೆ ತೆರಳುತ್ತಿದ್ದ ಬಸ್ಸುಗಳ ಮೇಲೆ ಇಲ್ಲಿನ ಕಾಪುಮಸೀದಿ ಬಳಿ ಹಾಗೂ ಬಂಟ್ವಾಳ ತಾಲೂಕಿನ ವಿಟ್ಲ ಸಮೀಪ ಭಾನುವಾರ ರಾತ್ರಿ ಕಲ್ಲು ತೂರಾಟ ನಡೆಸಿದ್ದರು. ಘಟನೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ, ಮೀಸಲು ಪಡೆಯ ಪೊಲೀಸರು ಸೇರಿದಂತೆ ಸುಮಾರು 15ಮಂದಿ ಗಾಯಗೊಂಡಿದ್ದಾರೆ.

ಕಲ್ಲು ತೂರಾಟ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 15ಮಂದಿಯನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಹಿಂಸಾಚಾರ ನಡೆಸಿದ ಆರೋಪದ ಮೇಲೆ ಅವರನ್ನು ಸೆರೆಹಿಡಿದಿರುವುದಾಗಿ ಅಧಿಕಾರಿಗಳು ವಿವರಿಸಿದ್ದಾರೆ.

ಮಂಗಳೂರಿನಲ್ಲಿ ನಡೆದ ಹಿಂದು ಸಮಾಜೋತ್ಸವದಲ್ಲಿ ಭಾಗವಹಿಸಿ ವಾಪಸಾಗುತ್ತಿದ್ದ ವೇಳೆ ಈ ಘಟನೆ ನಡೆದಿತ್ತು. ಕಲ್ಲು ತೂರಾಟದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಪ್ರವೀಣ್ ಮಧುಕರ್ ಪವಾರ್ ಅವರ ತಲೆಗೆ ಗಾಯವಾಗಿದ್ದು ಅವರನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಅಲ್ಲದೇ ಪರಂಗಿಪೇಟೆ, ಪುತ್ತೂರು ಹಾಗೂ ಬಂಟ್ವಾಳದಲ್ಲಿಯೂ ಬಸ್ಸುಗಳ ಮೇಲೆ ಕಲ್ಲು ತೂರಾಟ ನಡೆಸಿದ್ದರ ಪರಿಣಾಮ ಐದು ಮಂದಿ ಗಾಯಗೊಂಡಿರುವುದಾಗಿ ಐಜಿಪಿ ಗೋಪಾಲ್ ಹೊಸೂರ್ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಬಿಜೆಪಿಗೆ ದುಡ್ಡಿನ ಮದ: ಬಂಗಾರಪ್ಪ
ಯತ್ನಾಳ್-ರಾಮ ಭಟ್ ಉಚ್ಛಾಟನೆ: ಸದಾನಂದ ಗೌಡ
ಸಿಎಂ ಮಗ ಎಂದು ಟಿಕೆಟ್ ಕೊಟ್ಟಿಲ್ಲ: ರಾಘವೇಂದ್ರ
28 ಕ್ಷೇತ್ರಗಳಲ್ಲಿಯೂ ಜೆಡಿಎಸ್ ಸ್ಪರ್ಧೆ
ಸುಪ್ರೀಂಕೋರ್ಟ್ ಆದೇಶ ಉಲ್ಲಂಘಿಸಿದ ಸರ್ಕಾರ
ಮಾ.23: ಕಾಂಗ್ರೆಸ್ ಅಧಿಕೃತ ಪ್ರಚಾರಕ್ಕೆ ಚಾಲನೆ