ನಗರದಲ್ಲಿ ಅಕ್ರಮವಾಗಿ ನಡೆಯುತ್ತಿರುವ ಡ್ಯಾನ್ಸ್ ಬಾರ್‌ಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ನಗರ ಪೊಲೀಸ್ ಕಮೀಷನರ್ ಶಂಕರ ಬಿದರಿ ಹೇಳಿದ್ದಾರೆ.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರ ಮತ್ತು ನಗರದ ಹೊರಭಾಗದಲ್ಲಿ ಒಟ್ಟು ಏಳು ಡ್ಯಾನ್ಸ್ ಬಾರ್‌ಗಳು ನಡೆಯುತ್ತಿರುವ ಬಗ್ಗೆ ಮಾಹಿತಿ ಇದೆ. ಅವುಗಳ ಮಾಹಿತಿ ಇದೆ. ಅವುಗಳ ಪಟ್ಟಿ ಮಾಡಲಾಗಿದ್ದು ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಅಲ್ಲದೇ ಕಳೆದ ಬಾರಿ ಐಪಿಎಲ್ ಪಂದ್ಯ ನಡೆದ ವೇಳೆ ಎರಡು ಸಾವಿರ ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ಚುನಾವಣೆ ಹಿನ್ನೆಲೆಯಲ್ಲಿ ಅಷ್ಟು ಸಿಬ್ಬಂದಿಯನ್ನು ಈ ಬಾರಿಯ ಕ್ರಿಕೆಟ್ ಭದ್ರತೆಗೆ ನೀಡಲು ಸಾಧ್ಯ ಆಗುವುದಿಲ್ಲ. ಚುನಾವಣೆಯ ನಂತರ ಭದ್ರತೆ ನೀಡಲಾಗುತ್ತದೆ ಎಂದು ಹೇಳಿದರು.
ಅದೇ ರೀತಿ ರಾಲಿ ನಡೆಯುವ ವೇಳೆ ಯಾವುದೇ ವ್ಯಕ್ತಿ, ಧರ್ಮ, ಪಕ್ಷಗಳಿಗೆ ಧಕ್ಕೆ ಆಗುವಂತೆ ಘೋಷಣೆ ಕೂಗುವಂತಿಲ್ಲ. ಆ ರೀತಿ ಮಾಡಿದರೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಬಿದರಿ ತಿಳಿಸಿದರು. |