ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ನಾಗಮಾರಪಳ್ಳಿ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ದೂರು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನಾಗಮಾರಪಳ್ಳಿ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ದೂರು
ಇಲ್ಲಿನ ದೇವಸ್ಥಾನವೊಂದರಲ್ಲಿ ಸಭೆ ನಡೆಸಲು ಸಿದ್ದತೆ ನಡೆಸುತ್ತಿದ್ದ ಆರೋಪದ ಮೇರೆಗೆ ಮಾಜಿ ಸಚಿವ, ಬಿಜೆಪಿ ಅಭ್ಯರ್ಥಿ ಗುರುಪಾದಪ್ಪ ನಾಗಮಾರಪಳ್ಳಿ ಅವರ ಅವರ ವಿರುದ್ಧ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಿಸಿ 7 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ನಾಗಮಾರಪಳ್ಳಿ, ನನ್ನ ವಿರುದ್ಧ ಸಂಚು ನಡೆಸಲಾಗಿದೆ ಎಂದಿದ್ದಾರೆ. ಧ್ವನಿವರ್ಧಕ ಸಜ್ಜುಗೊಳಿಸಿ ಸಭೆ ನಡೆಸಲು ಮುಂದಾಗಿದ್ದನ್ನು ತಾನು ಕಣ್ಣಾರೆ ಕಂಡಿದ್ದು, ಇದಕ್ಕೆ ಪರವಾನಿಗೆ ಇರಲಿಲ್ಲ. ಆದ್ದರಿಂದಲೇ ಕೇಸು ದಾಖಲಿಸಲಾಗಿದೆ ಎಂದು ತಹಸೀಲ್ದಾರ್ ಶರಣಪ್ಪ ಹೇಳಿದ್ದಾರೆ.

ಭಾನುವಾರ ಮಧ್ನಾಹ್ನ ಮಾಜಿ ಸಚಿವ ಗುರುಪಾದಪ್ಪ ನಾಗಮಾರಪಳ್ಳಿ ಸೇರಿದಂತೆ ಹಲವರು ಮುಜರಾಯಿ ಇಲಾಖೆಗೆ ಸೇರಿದ ದೇವಸ್ಥಾನದಲ್ಲಿ ಸಭೆ ನಡೆಸಲು ಸಿದ್ದತೆ ನಡೆಸುತ್ತಿದ್ದರು ಎಂದು ತಹಸೀಲ್ದಾರ್ ಹೇಳಿದರು.ಈ ಸಭೆಗೆ ಅವರು ಪರವಾನಿಗೆ ಪಡೆದಿರಲಿಲ್ಲ. ಸಭೆಗಾಗಿ ಧ್ವನಿವರ್ಧಕ ಸಿದ್ದಪಡಿಸುತ್ತಿದ್ದರು ಎಂದು ತಹಸೀಲ್ದಾರ್ ತಿಳಿಸಿದರು.

ಇದರಿಂದಾಗಿ ನಾಗಮಾರಪಳ್ಳಿ ಹಾಗೂ ಅಧಿಕಾರಿಗಳ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು. ಅಲ್ಲಿಗೆ ಆಗಮಿಸಿದ್ದ ಮುಖಂಡರ ವಾಹನಗಳನ್ನು ಜಪ್ತಿ ಮಾಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ತಹಸೀಲ್ದಾರ್ ಸೂಚಿಸಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಅಕ್ರಮ ಡ್ಯಾನ್ಸ್ ಬಾರ್‌‌ಗಳಿಗೆ ಕಡಿವಾಣ: ಬಿದರಿ
ಕಾಪುವಿನಲ್ಲಿ ಕಲ್ಲು ತೂರಾಟ-ನಿಷೇಧಾಜ್ಞೆ ಜಾರಿ
ಬಿಜೆಪಿಗೆ ದುಡ್ಡಿನ ಮದ: ಬಂಗಾರಪ್ಪ
ಯತ್ನಾಳ್-ರಾಮ ಭಟ್ ಉಚ್ಛಾಟನೆ: ಸದಾನಂದ ಗೌಡ
ಸಿಎಂ ಮಗ ಎಂದು ಟಿಕೆಟ್ ಕೊಟ್ಟಿಲ್ಲ: ರಾಘವೇಂದ್ರ
28 ಕ್ಷೇತ್ರಗಳಲ್ಲಿಯೂ ಜೆಡಿಎಸ್ ಸ್ಪರ್ಧೆ