ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಧ್ವಜ ಪುರಾಣ: ಎಂಇಎಸ್‌‌ಗೆ ಬೆಂಬಲ-ಸಚಿವ ಅಂಗಡಿ ಬಂಧನ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಧ್ವಜ ಪುರಾಣ: ಎಂಇಎಸ್‌‌ಗೆ ಬೆಂಬಲ-ಸಚಿವ ಅಂಗಡಿ ಬಂಧನ
ಎಂಇಎಸ್‌ಗೆ ಸಚಿವ ಸುರೇಶ್ ಅಂಗಡಿ ಸಾಥ್...
ಗಡಿನಾಡಾದ ಬೆಳಗಾವಿಯ ಮಹಾನಗರ ಪಾಲಿಕೆಯ ನೂತನ ಕಟ್ಟಡದ ಮೇಲೆ ಕನ್ನಡ ಧ್ವಜ ಹಾರಿಸಬೇಕೆಂದು ಪ್ರವೀಣ್ ಶೆಟ್ಟಿ ನೇತೃತ್ವದ ಕರವೇ ಬಣ ಪಟ್ಟು ಹಿಡಿದಿದ್ದರೆ, ಮತ್ತೊಂದೆಡೆ ಎಂಇಎಸ್ ಕಾರ್ಯಕರ್ತರು ಭಗವಾಧ್ವಜ ಹಾರಿಸಬೇಕೆಂದು ಪ್ರತಿಭಟನೆಗೆ ಮುಂದಾಗಿದ್ದು ಇದಕ್ಕೆ ಸಚಿವ ಸುರೇಶ್ ಅಂಗಡಿ ಸಾಥ್ ನೀಡಿದ ಪರಿಣಾಮ ಅವರನ್ನು ಪೊಲೀಸರು ಬಂಧಿಸಿ ಬಿಡುಗಡೆಗೊಳಿಸಿದ ಘಟನೆ ಸೋಮವಾರ ನಡೆದಿದೆ.

ಮಹಾನಗರ ಪಾಲಿಕೆಯ ಮೇಲೆ ಕನ್ನಡ ಧ್ವಜ ಹಾರಿಸಬೇಕೆಂಬ ವಿವಾದ ಮತ್ತೆ ಭುಗಿಲೆದ್ದಿದ್ದು, ಆ ನಿಟ್ಟಿನಲ್ಲಿ ಕರವೇ ಕಾರ್ಯಕರ್ತರು ಪಾಲಿಕೆಯ ನೂತನ ಕಟ್ಟದ ಮೇಲೆ ಕನ್ನಡ ಧ್ವಜ ಹಾರಿಸಲೇಬೇಕೆಂದು ಪಟ್ಟು ಹಿಡಿದು ಪ್ರತಿಭಟನೆ ನಡೆಸಿದ್ದು, ಸುಮಾರು 50ಮಂದಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ಬಿಡುಗಡೆಗೊಳಿಸಿದ್ದಾರೆ.

ಆದರೆ ಈ ಪ್ರಕರಣವೀಗ ರಾಜಕೀಯಗೊಳ್ಳುತ್ತಿರುವುದು ಸ್ಪಷ್ಟವಾಗುತ್ತಿದೆ. ಎಂಇಎಸ್ ಕಾರ್ಯಕರ್ತರು ಇಲ್ಲಿನ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಪಾಲಿಕೆ ಮೇಲೆ ಭಗವಾಧ್ವಜವನ್ನೇ ಹಾರಿಸಬೇಕೆಂದು ಪಟ್ಟು ಹಿಡಿಯುವ ಮೂಲಕ ವಿವಾದ ಉಲ್ಭಣಗೊಂಡಿದೆ. ಏತನ್ಮಧ್ಯೆ ಎಂಇಎಸ್ ಕಾರ್ಯಕರ್ತರ ಬೇಡಿಕೆಯನ್ನು ಬೆಂಬಲಿಸಿ ಸಚಿವ ಸುರೇಶ್ ಅಂಗಡಿ ಹಾಗೂ ಶಾಸಕ ಸಂಜಯ್ ಪಾಟೀಲ್ ಪ್ರತಿಭಟನೆಗಿಳಿದಿದ್ದು, ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಮಹಾನಗರ ಪಾಲಿಕೆ ಮೇಲೆ ಹಾರಾಡುತ್ತಿರುವ ಭಗವಾಧ್ವಜ ಹಿಂದೂತ್ವದ ಪ್ರತೀಕ, ಕನ್ಯಾಕುಮಾರಿಯಿಂದ ಹಿಡಿದು ಕಾಶ್ಮೀರದವರೆಗೂ ಹಾರಾಡುತ್ತಿರುವ ಈ ಧ್ವಜ ಹಿಂದೂತ್ವದ ಪ್ರತೀಕವಾಗಿದೆ, ಆ ನಿಟ್ಟಿನಲ್ಲಿ ಪಾಲಿಕೆ ಮೇಲೆ ಭಗವಾಧ್ವಜವೇ ಹಾರಾಡಬೇಕು ಎಂಬುದ ಬಿಜೆಪಿ ಸಚಿವ ಸುರೇಶ್ ಅಂಗಡಿ ಅವರ ಅಭಿಪ್ರಾಯವಾಗಿದೆ.

ಅಲ್ಲದೇ ಇದು ಹಿಂದೂಗಳ ಭಾವನೆಗೆ ಧಕ್ಕೆ ತರುವ ಕಾಂಗ್ರೆಸ್ ಷಡ್ಯಂತ್ರ ಇದಾಗಿದೆ ಎಂದು ಅಂಗಡಿ ಆರೋಪಿಸಿದ್ದಾರೆ. ಘಟನೆ ಕುರಿತಂತೆ ಏನಾದರು ಅನಾಹುತ ಸಂಭವಿಸಿದರೆ ಅದಕ್ಕೆ ಜಿಲ್ಲಾಡಳಿತವೇ ಹೊಣೆ ಎಂದು ಎಚ್ಚರಿಕೆ ನೀಡಿದ್ದಾರೆ.

ಯಾವುದೇ ತ್ಯಾಗಕ್ಕೂ ಸಿದ್ದ: ಮತ್ತೊಂದೆಡೆ ಮಹಾನಗರ ಪಾಲಿಕೆ ಮೇಲೆ ಕನ್ನಡ ಧ್ವಜ ಹಾರಿಸಲೇಬೇಕು ಎಂದು ಕರವೇ ಬಣದ ಅಧ್ಯಕ್ಷ ಪ್ರವೀಣ್ ಶೆಟ್ಟಿ ತಿಳಿಸಿದ್ದು, ಅದಕ್ಕಾಗಿ ಯಾವುದೇ ತ್ಯಾಗಕ್ಕೂ ತಾವು ಸಿದ್ದ ಎಂಬುದಾಗಿ ತಿಳಿಸಿದ್ದಾರೆ.

ಒಂದೆಡೆ ಕನ್ನಡಪರ ಸಂಘಟನೆಗಳು ಕನ್ನಡ ಧ್ವಜ ಹಾರಿಸಬೇಕೆಂದು ಪಟ್ಟು ಹಿಡಿದರೆ, ಇನ್ನೊಂದೆಡೆ ಆಡಳಿತಾರೂಢ ಸರಕಾರದ ಸಚಿವರೇ ಎಂಇಎಸ್ ಕಾರ್ಯಕರ್ತರಿಗೆ ಬೆಂಬಲ ನೀಡುವ ಮೂಲಕ ಕನ್ನಡ ನೆಲದಲ್ಲಿ ಕನ್ನಡದ ಬಗ್ಗೆ ಇಬ್ಬಗೆ ಧೋರಣೆ ಹೊಂದುವ ಮೂಲಕ ಧ್ವಜ ರಾಜಕೀಯ ಮಾಡಲು ಹೊರಟಿರುವುದಕ್ಕೆ ಸಾಕ್ಷಿಯಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಹೋಳಿ ರಂಪಾಟ: ಮುಂಡಗೋಡು ಬಂದ್
ತಾಕತ್ತಿದ್ದರೆ ಉಚ್ಛಾಟಿಸಲಿ: ಬಸವನ ಗೌಡ ಯತ್ನಾಳ್
ನಾಗಮಾರಪಳ್ಳಿ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ದೂರು
ಅಕ್ರಮ ಡ್ಯಾನ್ಸ್ ಬಾರ್‌‌ಗಳಿಗೆ ಕಡಿವಾಣ: ಬಿದರಿ
ಕಾಪುವಿನಲ್ಲಿ ಕಲ್ಲು ತೂರಾಟ-ನಿಷೇಧಾಜ್ಞೆ ಜಾರಿ
ಬಿಜೆಪಿಗೆ ದುಡ್ಡಿನ ಮದ: ಬಂಗಾರಪ್ಪ