ನಟ ಅಂಬರೀಶ್ ಅವರು ಕಾಂಗ್ರೆಸ್ ಪಕ್ಷವನ್ನು ತೊರೆಯುವುದಿಲ್ಲ ಎಂದು ಸಂಧಾನದ ಸಾರಥ್ಯ ವಹಿಸಿರುವ ತೇಜಸ್ವಿನಿ ಸೋಮವಾರ ತಿಳಿಸಿದ್ದಾರೆ.ಕೆಪಿಸಿಸಿ ಅಧ್ಯಕ್ಷ ಆರ್.ವಿ.ದೇಶಪಾಂಡೆ ಹಾಗೂ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆಯವರ ಸಂದೇಶದೊಂದಿಗೆ ಅಂಬರೀಶ್ ಅಸಮಾಧಾನ ಬಗೆಹರಿಸುವ ನಿಟ್ಟಿನಲ್ಲಿ ಇಂದು ಅಂಬಿ ನಿವಾಸಕ್ಕೆ ತೇಜಸ್ವಿನಿ ಭೇಟಿ ನೀಡಿ ಮಾತುಕತೆ ನಡೆಸಿದ್ದದರು. ಭೇಟಿಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂಬರೀಶ್ ಅವರ ಅಸಮಾಧಾನ ಬಗೆಹರಿಸುವುದಾಗಿ ತೇಜಸ್ವಿನಿ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿರುವ ರೆಬೆಲ್ ಸ್ಟಾರ್ ಅಂಬರೀಶ್, ಕಾಂಗ್ರೆಸ್ ಕೆಲ ಮುಖಂಡರಿಂದ ಅಸಮಾಧಾನಗೊಂಡಿರುವುದಾಗಿ ಈ ಸಂದರ್ಭದಲ್ಲಿ ಹೇಳಿದರು.ಲಿಂಬಾವಳಿ - ಅಂಬಿ ಭೇಟಿ: ಕಾಂಗ್ರೆಸ್ ಪಕ್ಷದ ವಿರುದ್ಧ ಅಂಬಿ ಮುನಿಸಿಕೊಂಡಿದ್ದಾರೆಂಬ ಗಾಳಿಸುದ್ದಿ ದಟ್ಟವಾಗುತ್ತಿರುವ ತನ್ಮಧ್ಯೆಯೇ ಇಂದು ಬಿಜೆಪಿಯ ಸಚಿವ ಅರವಿಂದ ಲಿಂಬಾವಳಿ ಅವರು ಅಂಬರೀಶ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಆದರೆ ತಾನು ಮತ್ತು ಲಿಂಬಾವಳಿ ಹಳೇ ಸ್ನೇಹಿತರಾಗಿದ್ದು ಇದೊಂದು ಸೌಹಾರ್ದ ಭೇಟಿ ಅದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಾಗಿಲ್ಲ ಎಂದು ಅಂಬರೀಶ್ ಸ್ಪಷ್ಟಪಡಿಸಿದ್ದಾರೆ. |