ವ್ಯಕ್ತಿಯೊಬ್ಬರ ಕೊಲೆ ಹಾಗೂ ದರೋಡೆಗೆ ಸಂಚು ರೂಪಿಸಿರುವ ಆರೋಪದ ಮೇಲೆ ಸೈಕಲ್ ರವಿ, ರಿಜ್ವಾನ್ ಸೇರಿದಂತೆ 13 ಮಂದಿ ಸುಪಾರಿ ಹಂತಕರನ್ನು ಬೆಂಗಳೂರು ಜಿಲ್ಲೆ ಹೆಬ್ಬಗೋಡಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಸುಪಾರಿ ಹಂತಕರಿಂದ ಒಂದು ಡೆಮ್ಮಿ ಪಿಸ್ತೂಲ್, ಟಾಟಾ ಸುಮೋ ವಾಹನ, ಮಾರಕಾಸ್ತ್ರಗಳು, ಪಲ್ಸರ್ ಮೋಟಾರ್ ಬೈಕ್, 4ಮೊಬೈಲ್ ಫೋನ್‌ಗಳು, 6ಸಾವಿರ ರೂ. ನಗದು ಹಣ ವಶಪಡಿಸಿಕೊಳ್ಳಲಾಗಿದೆ ಎಂದು ಬೆಂಗಳೂರು ಜಿಲ್ಲಾ ಎಸ್ಪಿ ಡಾ.ಮಹೇಶ್ ಅವರು ತಿಳಿಸಿದ್ದಾರೆ.
ಹೊಸೂರು ರಸ್ತೆ ಕಿತ್ತಗಾನಹಳ್ಳಿಯಲ್ಲಿರುವ ಮನೆಯ ಮೇಲೆ ಭಾನುವಾರ ಸಂಜೆ ಪೊಲೀಸರು ದಾಳಿ ಮಾಡಿ ಸುಪಾರಿ ಹಂತಕರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿಸಲಾದ ಆರೋಪಿಗಳಲ್ಲಿ ರಿಜ್ವಾನ್ 3ತಿಂಗಳ ಹಿಂದೆ ಜೈಲಿನಿಂದ ಬಿಡುಗಡೆಯಾಗಿ ಹೊರಬಂದಿದ್ದ. |