ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಬಿಜೆಪಿ ಬ್ಲ್ಯಾಕ್‌‌ಮೇಲ್ ರಾಜಕೀಯ ಮಾಡ್ತಿದೆ: ಡಿಕೆಶಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಿಜೆಪಿ ಬ್ಲ್ಯಾಕ್‌‌ಮೇಲ್ ರಾಜಕೀಯ ಮಾಡ್ತಿದೆ: ಡಿಕೆಶಿ
ಮೊಕದ್ದಮೆ ಎದುರಿಸುತ್ತಿರುವ ಕಾಂಗ್ರೆಸ್ ಶಾಸಕರು ಮತ್ತು ಮುಖಂಡರನ್ನು ಬೆದರಿಸಿ, ಬ್ಲ್ಯಾಕ್‌‌ಮೇಲ್ ತಂತ್ರದ ಮೂಲಕ ಬಿಜೆಪಿ ತನ್ನತ್ತ ಸೆಳೆದುಕೊಳ್ಳುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಗಂಭೀರವಾಗಿ ಆರೋಪಿಸಿದ್ದಾರೆ.

ಶುದ್ಧ ನಡತೆಯವರು ತಾವೆಂದು ಹೇಳಿಕೊಳ್ಳುವ ಬಿಜೆಪಿ ಮುಖಂಡರು ಈ ರೀತಿಯ ಕೀಳುಮಟ್ಟದ ವರ್ತನೆ ತೋರುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಬ್ಲ್ಯಾಕ್‌‌ಮೇಲ್ ಮಾಡಿ ತಮ್ಮ ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದ್ದಾರೆ ಎಂದು ಅವರು ಹೇಳಿದರು.

ಪಕ್ಷದ ಚನ್ನಪಟ್ಟಣ ಶಾಸಕ ಸಿ.ಪಿ.ಯೋಗೇಶ್ವರ್ ಅವರ ವಿರುದ್ಧ ಮೆಗಾಸಿಟಿ ಪ್ರಕರಣ ದಾಖಲಾಗಿದೆ. ಆ ಕೇಸ್‌‌ನಿಂದ ಮುಕ್ತಿ ಪಡೆಯಲು ಅವರು ಬಿಜೆಪಿ ಸೇರುತ್ತಿದ್ದಾರೆ. ಬಿಜೆಪಿ ಮುಖಂಡರು ಬೆದರಿಕೆಗೆ ಮಣಿದು ಅವರು ಆ ಪಕ್ಷಕ್ಕೆ ಸೇರುತ್ತಿದ್ದಾರೆ ಎಂದರು.

ಸಂಸದರಾದ ಅಂಬರೀಷ್, ತೇಜಸ್ವಿನಿ ಅವರು ಯಾವುದೇ ಕಾರಣಕ್ಕೂ ಕಾಂಗ್ರೆಸ್ ತೊರೆಯುವುದಿಲ್ಲ ಮತ್ತು ಪಕ್ಷದಲ್ಲಿ ಯಾವುದೇ ರೀತಿಯ ಬಂಡಾಯ ಇಲ್ಲ ಎಂದು ಶಿವಕುಮಾರ್ ಸ್ಪಷ್ಟಪಡಿಸಿದರು.

ಒಕ್ಕಲಿಗ ಸಮುದಾಯದ ಮುಖಂಡರಾಗಿರುವ ಅಂಬರೀಷ್ ಅವರನ್ನು ಮಂಡ್ಯ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸಲು ನಿರ್ಧರಿಸಲಾಗಿದ್ದು, ಈಗಾಗಲೇ ಅಂಬರೀಷ್ ಅವರ ಹೆಸರನ್ನು ವರಿಷ್ಠರಿಗೆ ಶಿಫಾರಸು ಮಾಡಲಾಗಿದೆ ಎಂದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಬೆಂಗಳೂರು: 13 ಸುಪಾರಿ ಹಂತಕರ ಬಂಧನ
ಯಡಿಯೂರಪ್ಪಗೆ ಅನಂತ್ ಹೊಗಳಿಕೆಯ ಸುರಿಮಳೆ!
ಲೋಕಸಭೆ: ಮಂಗಳೂರಿನಿಂದ ಪೂಜಾರಿ ಅಖಾಡಕ್ಕೆ
ಅಂಬರೀಶ್ ಅಸಮಾಧಾನ ಶಮನಕ್ಕೆ 'ತೇಜಸ್ವಿನಿ ಸಾರಥ್ಯ'
ಮುತಾಲಿಕ್ ಮಂಗ್ಳೂರ್ ಪ್ರವೇಶಕ್ಕೆ 1 ವರ್ಷ ನಿರ್ಬಂಧ
ಧ್ವಜ ಪುರಾಣ: ಎಂಇಎಸ್‌‌ಗೆ ಬೆಂಬಲ-ಸಚಿವ ಅಂಗಡಿ ಬಂಧನ