ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಮುತಾಲಿಕ್ ಪ್ರವೇಶ ನಿರ್ಬಂಧದ ಹಿಂದೆ ಡಿವಿ ಕೈವಾಡ?
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮುತಾಲಿಕ್ ಪ್ರವೇಶ ನಿರ್ಬಂಧದ ಹಿಂದೆ ಡಿವಿ ಕೈವಾಡ?
NRB
ಪ್ರಚೋದನಾಕಾರಿ ಭಾಷಣ ಮಾಡಿರುವ ಆರೋಪದ ಮೇಲೆ ದಕ್ಷಿಣ ಕನ್ನಡ ಜಿಲ್ಲೆಗೆ ಶ್ರೀರಾಮಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಅವರು ಒಂದು ವರ್ಷದವರೆಗೆ ಕಾಲಿಡದಂತೆ ನಿರ್ಬಂಧ ಹೇರಿರುವ ಜಿಲ್ಲಾಧಿಕಾರಿ ಆದೇಶದ ಹಿಂದೆ ಬಿಜೆಪಿ ರಾಜ್ಯಾಧ್ಯಕ್ಷ ಡಿ.ವಿ.ಸದಾನಂದ ಗೌಡರ ಕೈವಾಡ ಇರುವುದಾಗಿ ಹೇಳಲಾಗುತ್ತಿದೆ.

ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಡಿ.ವಿ.ಸದಾನಂದಗೌಡರ ವಿರುದ್ಧ ಸ್ಪರ್ಧಿಸುವಂತೆ ಜನರು ಮುತಾಲಿಕ್ ಅವರನ್ನು ಒತ್ತಾಯಿಸುತ್ತಿದ್ದಾರೆ. ಇದರಿಂದ ಹೆದರಿರುವ ಬಿಜೆಪಿ ಸರ್ಕಾರ ಜಿಲ್ಲಾಧಿಕಾರಿ ಪೊನ್ನುರಾಜ್ ಮೂಲಕ ಈ ಷಡ್ಯಂತ್ರ ರೂಪಿಸಿದೆ ಎಂದು ದೈನಿಕವೊಂದರ ಜತೆ ಮಾತನಾಡಿದ ಶ್ರೀರಾಮಸೇನೆಯ ರಾಜ್ಯ ಸಹ ಸಂಚಾಲಕ ಪ್ರಸಾದ್ ಅತ್ತಾವರ ದೂರಿದ್ದಾರೆ.

NRB
ಮುತಾಲಿಕ್ ಅವರು ಇತ್ತೀಚಿನ ದಿನಗಳಲ್ಲಿ ಮಂಗಳೂರು ಜಿಲ್ಲೆಯಲ್ಲಿ ನಡೆದ ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಉದ್ರೇಕಕಾರಿ ಭಾಷಣ ಮಾಡಿರಲಿಲ್ಲ. ಬೇರೆಯವರು ಸಾಕಷ್ಟು ಭಾಷಣ ಮಾಡಿದ್ದರು. ಆದರೂ ಚುನಾವಣೆ ಪ್ರಕ್ರಿಯೆ ನಡುವೆಯೇ ಪ್ರವೇಶ ನಿರ್ಬಂಧ ಹೇರಿರುವುದು ಸಂಶಯವನ್ನು ಸ್ಪಷ್ಟಗೊಳಿಸಿದೆ. ಈ ಆದೇಶ ಖಂಡಿಸಿ ಕಾನೂನು ಚೌಕಟ್ಟಿನಲ್ಲೇ ಪ್ರತಿಭಟನೆ ಮಾಡುವುದಾಗಿ ಅತ್ತಾವರ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಬಿಜೆಪಿ ಬ್ಲ್ಯಾಕ್‌‌ಮೇಲ್ ರಾಜಕೀಯ ಮಾಡ್ತಿದೆ: ಡಿಕೆಶಿ
ಬೆಂಗಳೂರು: 13 ಸುಪಾರಿ ಹಂತಕರ ಬಂಧನ
ಯಡಿಯೂರಪ್ಪಗೆ ಅನಂತ್ ಹೊಗಳಿಕೆಯ ಸುರಿಮಳೆ!
ಲೋಕಸಭೆ: ಮಂಗಳೂರಿನಿಂದ ಪೂಜಾರಿ ಅಖಾಡಕ್ಕೆ
ಅಂಬರೀಶ್ ಅಸಮಾಧಾನ ಶಮನಕ್ಕೆ 'ತೇಜಸ್ವಿನಿ ಸಾರಥ್ಯ'
ಮುತಾಲಿಕ್ ಮಂಗ್ಳೂರ್ ಪ್ರವೇಶಕ್ಕೆ 1 ವರ್ಷ ನಿರ್ಬಂಧ