ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಕರ್ನಾಟಕದಲ್ಲಿ ಮುಸ್ಲಿಮರ ಸ್ಥಿತಿ ಚಿಂತಾಜನಕವಾಗಿದೆ: ಅನಂತಮೂರ್ತಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕರ್ನಾಟಕದಲ್ಲಿ ಮುಸ್ಲಿಮರ ಸ್ಥಿತಿ ಚಿಂತಾಜನಕವಾಗಿದೆ: ಅನಂತಮೂರ್ತಿ
PTI
ಭಾರತೀಯ ಜನತಾ ಪಕ್ಷ ಭಾರತವನ್ನು ಹಿಂದೂ ದೇಶವನ್ನಾಗಿ ಮಾಡಲು ಹೊರಟಿದ್ದು, ಇದರಿಂದಾಗಿ ಮುಸ್ಲಿಮರು ಹಾಗೂ ದಲಿತರು ಭಯರಹಿತವಾಗಿ ಬದುಕುವುದೇ ದುಸ್ತರವಾಗಿದೆ ಎಂದು ಜ್ಞಾನಪೀಠ ಪ್ರಶಸ್ತಿ ಪುರಷ್ಕೃತ ಯು.ಆರ್.ಅನಂತಮೂರ್ತಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಸೆಮಿನಾರ್ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿ, ಕರ್ನಾಟಕದಲ್ಲಿ ಮುಸ್ಲಿಮರ ಸ್ಥಿತಿ ಚಿಂತಾಜನಕವಾಗಿದೆ. ಅವರು ಭಯದ ವಾತಾವರಣದಲ್ಲಿಯೇ ಬದುಕು ಸಾಗಿಸುವಂತಾಗಿದೆ ಎಂದು ಆತಂಕದಿಂದ ನುಡಿದರು.

ಕಳೆದ ಕೆಲವು ತಿಂಗಳಿನಿಂದ ಕರ್ನಾಟಕದ ಕೆಲವು ಭಾಗದಲ್ಲಿ ನಡೆಯುತ್ತಿರುವ ಘಟನೆಗಳು ಸಮಾಜ ವಿರೋಧಿಯಾದದ್ದು ಎಂದು ಕಿಡಿಕಾರಿದ ಅವರು, ನಾನು ಕರ್ನಾಟಕದವನು ಅಂತ ಹೇಳಿಕೊಳ್ಳಲು ನಾಚಿಕೆ ಪಡುವಂತಾಗಿದೆ ಎಂದು ಹೇಳಿದರು.

ಅಲ್ಪಸಂಖ್ಯಾತರ ವಿರುದ್ಧ ನಡೆಯುತ್ತಿರುವ ಅನ್ಯಾಯವನ್ನು ಸರಿಪಡಿಸುವ ನಿಟ್ಟಿನಲ್ಲಿ ಮುಸ್ಲಿಮರು ಹಾಗೂ ದಲಿತರು ಒಟ್ಟಾಗಿ ಹೋರಾಟ ಮಾಡಬೇಕಿದೆ ಎಂದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮುತಾಲಿಕ್ ಪ್ರವೇಶ ನಿರ್ಬಂಧದ ಹಿಂದೆ ಡಿವಿ ಕೈವಾಡ?
ಬಿಜೆಪಿ ಬ್ಲ್ಯಾಕ್‌‌ಮೇಲ್ ರಾಜಕೀಯ ಮಾಡ್ತಿದೆ: ಡಿಕೆಶಿ
ಬೆಂಗಳೂರು: 13 ಸುಪಾರಿ ಹಂತಕರ ಬಂಧನ
ಯಡಿಯೂರಪ್ಪಗೆ ಅನಂತ್ ಹೊಗಳಿಕೆಯ ಸುರಿಮಳೆ!
ಲೋಕಸಭೆ: ಮಂಗಳೂರಿನಿಂದ ಪೂಜಾರಿ ಅಖಾಡಕ್ಕೆ
ಅಂಬರೀಶ್ ಅಸಮಾಧಾನ ಶಮನಕ್ಕೆ 'ತೇಜಸ್ವಿನಿ ಸಾರಥ್ಯ'