ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಬಿಜೆಪಿ ವಿರುದ್ಧ ಸ್ಪರ್ಧಿಸಲು ಕಾಂಗ್ರೆಸ್ ಹಿಂದೇಟು: ಸಿಎಂ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಿಜೆಪಿ ವಿರುದ್ಧ ಸ್ಪರ್ಧಿಸಲು ಕಾಂಗ್ರೆಸ್ ಹಿಂದೇಟು: ಸಿಎಂ
ರಾಜ್ಯದಲ್ಲಿ ಬಿಜೆಪಿ ಪರವಾದ ಗಾಳಿ ಬೀಸುತ್ತಿದ್ದು ಬಿಜೆಪಿ ವಿರುದ್ಧ ಸ್ಪರ್ಧಿಸಲು ಪ್ರತಿಪಕ್ಷಗಳು ಹಿಂದೇಟು ಹಾಕುತ್ತಿವೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಭ್ಯರ್ಥಿಗಳ ಆಯ್ಕೆ ಕಾಂಗ್ರೆಸ್‌ಗೆ ಸವಾಲಾಗಿದೆ. ಹೈಕಮಾಂಡ್ ಸ್ಪರ್ಧಿಸಲು ಸೂಚಿಸಿದರೆ, ಬೇಡ ಎನ್ನುವವರೇ ಆ ಪಕ್ಷದಲ್ಲಿ ಹೆಚ್ಚಿದ್ದಾರೆ. ಬಿಜೆಪಿ ವಿರುದ್ಧ ಸೆಣಸಿ ಗೆಲ್ಲುವುದು ಅಸಾಧ್ಯ ಎನ್ನುವ ಭಾವನೆ ಆ ಪಕ್ಷದ ನಾಯಕರಲ್ಲಿ ಬೆಳೆದಿದೆ. ಇದಕ್ಕೆ ತಮ್ಮ ನೇತೃತ್ವದ ಸರ್ಕಾರದ ಸಾಧನೆಯೇ ಕಾರಣ ಎಂದರು.

ರಾಜ್ಯದಲ್ಲಿ ಭಯೋತ್ಪಾದನೆ ವಿರುದ್ಧ ಸರ್ಕಾರವೇ ಜಾಗೃತಿ ಅಭಿಯಾನ ಆರಂಭಿಸಿದರೆ ಕಾಂಗ್ರೆಸಿಗರು ಅದಕ್ಕೆ ವಿರುದ್ಧವಾಗಿ ನಿಂತರು. ಭಯೋತ್ಪಾದನೆ ವಿರೋಧಿ ಅಭಿಯಾನ ದೇಶದಲ್ಲಿಯೇ ಆದರ್ಶವಾಗಿದ್ದು, ಇದನ್ನು ಕೇಂದ್ರ ಸರ್ಕಾರವೇ ಕೈಗೊಳ್ಳುವಂತೆ ಪ್ರಧಾನಿ ಅವರಿಗೆ ಪತ್ರ ಬರೆದಿದ್ದೆ. ಆದರೆ ಕಾಂಗ್ರೆಸ್ಸಿಗರಿಗೆ ಇದು ಪಥ್ಯವಾಗಲಿಲ್ಲ. ರಾಜ್ಯದ ಯುವ ಜನತೆ ಕಾಂಗ್ರೆಸಿನ ಈ ನಿಲುವಿಗೆ ತಕ್ಕ ಉತ್ತರ ನೀಡಲಿದ್ದಾರೆ ಎಂದರು.

ಪಕ್ಷಕ್ಕೆ ಬಂದು ಪಕ್ಷದಿಂದ ಅಧಿಕಾರ ಅನುಭವಿಸಿ, ನಂತರ ಪಕ್ಷ ಬಿಟ್ಟು ಹೋದವರಿಗೆ ತಕ್ಕಪಾಠ ಕಲಿಸಿ, ಅಂತವರು ಹಾವೇರಿಯಲ್ಲಿ ಇರಲಿ, ಬೆಂಗಳೂರಿನಲ್ಲಿ ಇರಲಿ ಎಂದ ಯಡಿಯೂರಪ್ಪ, ಬಿಜೆಪಿಯಲ್ಲಿ ಪಕ್ಷ ಮುಖ್ಯವೇ ಹೊರತು ವ್ಯಕ್ತಿ ಮುಖ್ಯವಲ್ಲ. ಇಲ್ಲಿ ವ್ಯಕ್ತಿಯ ಆಧಾರದ ಮೇಲೆ ಯಾರೂ ಗೆಲ್ಲುವುದಿಲ್ಲ, ಸಂಘಟನೆಯ ಆಧಾರದ ಮೇಲೆ ಗೆಲ್ಲುತ್ತಾರೆ ಎಂದು ಹೇಳಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕನ್ನಡ ದ್ರೋಹಿ ಸುರೇಶ್ ಅಂಗಡಿ ಉಚ್ಚಾಟನೆಗೆ ಕರವೇ ಆಗ್ರಹ
ನಕ್ಸಲ್ ಪಡೆಯಿಂದ ಎಎನ್‌ಎಫ್ ಮೇಲೆ ಗ್ರೆನೇಡ್ ದಾಳಿ
ಲೋಕಸಭೆ-26 ಕ್ಷೇತ್ರಗಳಲ್ಲಿ ಸ್ಪರ್ಧೆ: ದೇವೇಗೌಡ
ಕರ್ನಾಟಕದಲ್ಲಿ ಮುಸ್ಲಿಮರ ಸ್ಥಿತಿ ಚಿಂತಾಜನಕವಾಗಿದೆ: ಅನಂತಮೂರ್ತಿ
ಮುತಾಲಿಕ್ ಪ್ರವೇಶ ನಿರ್ಬಂಧದ ಹಿಂದೆ ಡಿವಿ ಕೈವಾಡ?
ಬಿಜೆಪಿ ಬ್ಲ್ಯಾಕ್‌‌ಮೇಲ್ ರಾಜಕೀಯ ಮಾಡ್ತಿದೆ: ಡಿಕೆಶಿ