ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ರಾಜ್ಯ ಅಡವಿಡಲು ಬಿಜೆಪಿ ಹಿಂಜರಿಯಲ್ಲ: ಉಗ್ರಪ್ಪ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಾಜ್ಯ ಅಡವಿಡಲು ಬಿಜೆಪಿ ಹಿಂಜರಿಯಲ್ಲ: ಉಗ್ರಪ್ಪ
ಬಿಜೆಪಿ ಪಕ್ಷ ತನ್ನ ಸ್ವಾರ್ಥಕ್ಕಾಗಿ ಈ ರಾಜ್ಯವನ್ನು ಅಡವಿಡಲು ಹಿಂಜರಿಯುವುದಿಲ್ಲ ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ವಿ.ಎಸ್.ಉಗ್ರಪ್ಪ ಕಿಡಿಕಾರಿದ್ದಾರೆ.

ಬೆಳಗಾವಿ ಮಹಾನಗರ ಪಾಲಿಕೆ ನೂತನ ಕಟ್ಟಡದ ಮೇಲೆ ಭಗವಾಧ್ವಜ ಹಾರಿಸುವ ಎಂಇಎಸ್ ಪ್ರತಿಭಟನೆಗೆ ಬಿಜೆಪಿ ಸಂಸದ ಸುರೇಶ್ ಅಂಗಡಿ ಹಾಗೂ ಶಾಸಕ ಸಂಜಯ್ ಪಾಟೀಲ್ ಬೆಂಬಲ ನೀಡಿದ್ದ ಪ್ರಕರಣಕ್ಕೆ ಪ್ರತಿಕ್ರಿಯಿಸುತ್ತಾ ಮಾತನಾಡಿದ ಅವರು, ಭಾರತೀಯ ಜನತಾ ಪಕ್ಷ ಅಧಿಕಾರಕ್ಕಾಗಿ ಎಂತಹ ಕೃತ್ಯವನ್ನಾದರೂ ಮಾಡುತ್ತದೆ ಎಂಬುದಕ್ಕೆ ಬೆಳಗಾವಿಯ ಪ್ರಕರಣ ತಾಜಾ ಉದಾಹರಣೆ ಎಂದರು.

ಈ ರಾಜ್ಯದ ನೆಲ, ಜಲ, ಭಾಷೆ ಸಂರಕ್ಷಣೆ ಮಾಡುವುದಾಗಿ ಭರವಸೆ ಕೊಟ್ಟ ಸರ್ಕಾರ ಅದಕ್ಕೆ ತದ್ವಿರುದ್ದವಾಗಿ ನಡೆದುಕೊಳ್ಳುತ್ತಿದೆ. ಅಧಿಕಾರಕ್ಕಾಗಿ ಸಮಯಸಾಧಕ ರಾಜಕಾರಣ ಮಾಡುವ ಬಿಜೆಪಿ ಪಕ್ಷ ಮುಗಿದ ಅಧ್ಯಾಯಕ್ಕೆ ಮತ್ತೆ ಕೊಳ್ಳಿ ಇಟ್ಟಿದೆ ಎಂದು ಹೇಳಿದರು.

ಇದು ಬಿಜೆಪಿ ಹಿಡನ್ ಅಜೆಂಡಾ-ಡಿಕೆಶಿ: ರಾಷ್ಟ್ರಧ್ವಜ ಮತ್ತು ನಾಡಧ್ವಜವನ್ನು ಕೆಳಗಿಳಿಸಿ ಕೇಸರಿ ಧ್ವಜ ಹಾರಿಸುವ ಪ್ರಯತ್ನಕ್ಕೆ ಮುಂದಾಗಿರುವ ಬಿಜೆಪಿಯ ಹಿಡನ್ ಅಜೆಂಡಾವನ್ನು ಜಾರಿಗೆ ತರುವ ಹುನ್ನಾರ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಮತ್ತು ಸಂಘಪರಿವಾರದವರ ರಹಸ್ಯ ಕಾರ್ಯಸೂಚಿಗಳನ್ನು ಹಂತ, ಹಂತವಾಗಿ ಜಾರಿಗೊಳಿಸಲು ಈ ಸರ್ಕಾರ ಕುಮ್ಮಕ್ಕು ನೀಡುತ್ತಿದೆ. ಅದರ ಪ್ರಯತ್ನವೇ ಭಗವಾಧ್ವಜ ಹಾರಿಸಲು ಸುರೇಶ್ ಅಂಗಡಿ ಮುಂದಾಗಿದ್ದು ಎಂದರು.

ಮೂರ್ಖತನದ ಪರಮಾವಧಿ-ಮು.ಮ.ಚಂದ್ರು: ಬಿಜೆಪಿ ಸಂಸದ ಸುರೇಶ್ ಅಂಗಡಿ ಅವರು ಬೆಳಗಾವಿ ಪಾಲಿಕೆಯ ಮೇಲೆ ಭಗವಾಧ್ವಜವನ್ನು ಹಾರಿಸಲು ಪ್ರಯತ್ನಿಸಿರುವುದು ಮೂರ್ಖತನದ ಪರಮಾವಧಿಯಾಗಿದೆ ಎಂದು ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಗಂಭೀರವಾಗಿ ಆರೋಪಿಸಿದ್ದಾರೆ.

ಚುನಾವಣೆಯ ಸಂದರ್ಭದಲ್ಲಿ ಮತದಾರರ ಓಲೈಕೆಗೆ ಕನ್ನಡಿಗರ ಭಾವನೆಯನ್ನು ಕೆರಳಿಸುವಂತೆ ನಡೆದುಕೊಂಡಿರುವ ಸಂಸದ ಸುರೇಶ್ ಅಂಗಡಿ ಅವರನ್ನು ಬಿಜೆಪಿ ಹದ್ದುಬಸ್ತಿನಲ್ಲಿಡಬೇಕು ಎಂದು ಸಲಹೆ ನೀಡಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಅನಂತ್ ವಿರುದ್ಧ ಮುನಿಸು-ಯಡಿಯೂರಪ್ಪ ಸಭೆಗೆ ಗೈರು
ಮಾ.23: ಸೋನಿಯಾ ಪ್ರಚಾರ ದಾವಣಗೆರೆಯಿಂದ ಆರಂಭ
ಗೌಡರು ಮತ್ತೆ ಪ್ರಧಾನಿ ಆಗೋ ಕನಸಲ್ಲಿದ್ದಾರೆ: ಸಿದ್ದು
ಬಿಜೆಪಿ ವಿರುದ್ಧ ಸ್ಪರ್ಧಿಸಲು ಕಾಂಗ್ರೆಸ್ ಹಿಂದೇಟು: ಸಿಎಂ
ಕನ್ನಡ ದ್ರೋಹಿ ಸುರೇಶ್ ಅಂಗಡಿ ಉಚ್ಚಾಟನೆಗೆ ಕರವೇ ಆಗ್ರಹ
ನಕ್ಸಲ್ ಪಡೆಯಿಂದ ಎಎನ್‌ಎಫ್ ಮೇಲೆ ಗ್ರೆನೇಡ್ ದಾಳಿ