ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಕೋಮು ಘರ್ಷಣೆ - ಪುತ್ತೂರು ಬಂದ್‌
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕೋಮು ಘರ್ಷಣೆ - ಪುತ್ತೂರು ಬಂದ್‌
ಖಾಸಗಿ ಬಸ್‌ನಲ್ಲಿ ಜೊತೆಯಾಗಿ ತೆರಳುತ್ತಿದ್ದ ವಿಭಿನ್ನ ಕೋಮಿನ ವಿದ್ಯಾರ್ಥಿ-ವಿದ್ಯಾರ್ಥಿನಿಯರನ್ನು ಸಂಘಟನೆಯೊಂದರ ಕಾರ್ಯಕರ್ತರು ಎಳೆದು ಹಾಕಿ ವಿಚಾರಣೆ ನಡೆಸಿದ ಸಂದರ್ಭದಲ್ಲಿ ಉಂಟಾದ ಘರ್ಷಣೆಯಿಂದಾಗಿ ಪುತ್ತೂರಿನಲ್ಲಿ ಪ್ರಕ್ಷುಬ್ಧ ಸ್ಥಿತಿ ಉಂಟಾಗಿದ್ದು, ಹಿಂದೂಪರ ಸಂಘಟನೆಗಳು ಬುಧವಾರ ಪುತ್ತೂರು ಬಂದ್‌ಗೆ ಕರೆ ನೀಡಿವೆ.

ಈ ಸಂದರ್ಭದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆಯಿತು. ಈ ವೇಳೆ ಮೂರು ಮಂದಿಗೆ ಗಾಯವಾಗಿದ್ದು, ಕೆಎಸ್ಸಾರ್ಟಿಸಿ ಬಸ್ಸು, ಐದು ಕಾರು ಜಖಂಗೊಂಡಿವೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಲಾಠಿ ಜಾರ್ಜ್ ನಡೆಸಿದ್ದರು.

ಅಧ್ಯಯನಕ್ಕೆಂದು ಬಂದಿದ್ದ ಮಂಗಳೂರಿನ ಕಾಲೇಜೊಂದರ ಮೂವರು ವಿದ್ಯಾರ್ಥಿ ಹಾಗೂ ಇಬ್ಬರು ವಿದ್ಯಾರ್ಥಿನಿಯರು ಖಾಸಗಿ ಬಸ್‌ನಲ್ಲಿ ಹಿಂತಿರುಗುತ್ತಿದ್ದರು. ಈ ಸಂದರ್ಭದಲ್ಲಿ ಪಟ್ಟಣದ ಬೊಳ್ವಾರು ಎಂಬಲ್ಲಿ ಸಂಘಟನೆಯೊಂದಕ್ಕೆ ಸೇರಿದ ನೈತಿಕ ಪೊಲೀಸರು ಬಸ್ಸನ್ನು ತಡೆದು ನಿಲ್ಲಿಸಿ, ಐವರು ವಿದ್ಯಾರ್ಥಿಗಳನ್ನೂ ಎಳೆದು ಹಾಕಿ ವಿಚಾರಣೆ ನಡೆಸಿದರು. ಸುದ್ದಿ ತಿಳಿದ ಮತ್ತೊಂದು ಕೋಮಿನ ಸಂಘಟನೆಯವರು ಸ್ಥಳಕ್ಕೆ ಆಗಮಿಸಿದ್ದರು. ಸ್ಥಳಕ್ಕಾಗಮಿಸಿದ ಪೊಲೀಸರು ವಿದ್ಯಾರ್ಥಿಗಳನ್ನು ಠಾಣೆಗೆ ಕರೆದೊಯ್ದರು.

ಪೊಲೀಸ್ ಠಾಣೆ ಮುಂದೆ ಬಜರಂಗದಳ ಹಾಗೂ ಕೆಎಫ್‌ಡಿ ಸಂಘಟನೆ ಕಾರ್ಯಕರ್ತರು ಸೇರುತ್ತಿದ್ದಂತೆ ಪರಿಸ್ಥಿತಿ ಬಿಗಡಾಯಿಸಿತು. ಎರಡು ಗುಂಪುಗಳ ನಡುವೆ ಹೊಡೆದಾಟ ಆರಂಭವಾಗುತ್ತಿದ್ದಂತೆ ಪೊಲೀಸರು ಲಾಠಿ ಪ್ರಹಾರ ನಡೆಸಿ ಗುಂಪನ್ನು ಚದುರಿಸಿದರು. ಇದೀಗ ಪುತ್ತೂರು ಬೂದಿ ಮುಚ್ಚಿದ ಕೆಂಡದಂತಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಪುತ್ತೂರು, ಕೆಎಫ್ಡಿ, ಬಜರಂಗದಳ
ಮತ್ತಷ್ಟು
ಹಿಂದೂ ಸಮಾಜೋತ್ಸವಕ್ಕೆ ಅವಕಾಶ ಕೊಡ್ಬೇಡಿ: ಕಾಂಗ್ರೆಸ್
ರಾಜ್ಯ ಅಡವಿಡಲು ಬಿಜೆಪಿ ಹಿಂಜರಿಯಲ್ಲ: ಉಗ್ರಪ್ಪ
ಅನಂತ್ ವಿರುದ್ಧ ಮುನಿಸು-ಯಡಿಯೂರಪ್ಪ ಸಭೆಗೆ ಗೈರು
ಮಾ.23: ಸೋನಿಯಾ ಪ್ರಚಾರ ದಾವಣಗೆರೆಯಿಂದ ಆರಂಭ
ಗೌಡರು ಮತ್ತೆ ಪ್ರಧಾನಿ ಆಗೋ ಕನಸಲ್ಲಿದ್ದಾರೆ: ಸಿದ್ದು
ಬಿಜೆಪಿ ವಿರುದ್ಧ ಸ್ಪರ್ಧಿಸಲು ಕಾಂಗ್ರೆಸ್ ಹಿಂದೇಟು: ಸಿಎಂ