ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ನಿಂಬಾಳ್ಕರ್ ಸೇರಿ 5 ಭ್ರಷ್ಟರು ಲೋಕಾಯುಕ್ತ ಬಲೆಗೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನಿಂಬಾಳ್ಕರ್ ಸೇರಿ 5 ಭ್ರಷ್ಟರು ಲೋಕಾಯುಕ್ತ ಬಲೆಗೆ
NRB
ಭ್ರಷ್ಟ ಅಧಿಕಾರಿಗಳ ವಿರುದ್ಧ ಸಮರ ಮುಂದುವರಿಸಿರುವ ಲೋಕಾಯುಕ್ತ ಬುಧವಾರ ರಾಜ್ಯದ ಐದು ಜಿಲ್ಲೆಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿ ವಿವಿಧ ಇಲಾಖೆಯ ಐದು ಮಂದಿ ಅಧಿಕಾರಿಗಳನ್ನು ಬಲೆಗೆ ಕೆಡವಿದ್ದು, ಅಪಾರ ಪ್ರಮಾಣದ ಆಸ್ತಿಯನ್ನು ಪತ್ತೆ ಹಚ್ಚಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಲೋಕಾಯುಕ್ತದ ಎಡಿಜಿಪಿ ರೂಪ್ ಕುಮಾರ್ ಅವರ ನೇತೃತ್ವದಲ್ಲಿ ಇಂದು ಬೆಳಿಗ್ಗೆ ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ಸೇರಿದಂತೆ ವಿವಿಧ ಇಲಾಖೆಯ ಐದು ಮಂದಿ ಭ್ರಷ್ಟ ಅಧಿಕಾರಿಗಳ ಕೋಟ್ಯಂತರ ರೂಪಾಯಿ ಅಕ್ರಮ ಆಸ್ತಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಲೋಕಾಯುಕ್ತ ಬಲೆಗೆ ಬಿದ್ದ ಮಿಕಗಳು:

* ಈ ಹಿಂದೆ ಬೆಳಗಾವಿ ಎಸ್ಪಿ ಆಗಿದ್ದ ಹೇಮಂತ್ ನಿಂಬಾಳ್ಕರ್, ಬೇನಾಮಿ ಹೆಸರಿನಲ್ಲಿ ವ್ಯವಹಾರ, ಮುಂಬೈ, ಕೊಲ್ಲಾಪುರದಲ್ಲಿರುವ ಮನೆಗಳ ಮೇಲೆ ದಾಳಿ ಮಾಡಿ ಕೋಟ್ಯಂತರ ರೂಪಾಯಿ ಆಸ್ತಿ ಪತ್ತೆ, (ಅಂದಾಜು 250ಕೋಟಿಗೂ ಹೆಚ್ಚು ಆಸ್ತಿ ಪತ್ತೆ ಹಚ್ಚಲಾಗಿದೆ)

* ಹನುಮಂತಪ್ಪ, ಕೃಷಿ ಅಧಿಕಾರಿ, ಲಿಂಗಸುಗೂರು, 1ಕೋಟಿ 47ಲಕ್ಷ ರೂ.ಆಸ್ತಿ ಪತ್ತೆ.

* ಚೆಲುವೇಗೌಡ, ಇಂಜಿನಿಯರ್ ಮಂಡ್ಯ, ಈ ಮೊದಲು ಮದ್ದೂರು-ಮೈಸೂರುಗಳಲ್ಲಿ ಕರ್ತವ್ಯ ನಿರ್ವಹಿಸಿದ್ದು, ಪ್ರಸ್ತುತ ಮಂಡ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಂದಾಜು 71ಲಕ್ಷಕ್ಕೂ ಅಧಿಕ ಆಸ್ತಿ ಪತ್ತೆ.

* ವೀರಶೆಟ್ಟಿ ರಾಥೋಡ್, ಇಂಜಿನಿಯರ್ ಬಾಲ್ಕಿ, ಅಂದಾಜು 92ಲಕ್ಷ ರೂ.ಅಕ್ರಮ ಆಸ್ತಿ ಪತ್ತೆ.

* ಲಕ್ಷ್ಮಣ, ಬಿಬಿಎಂಪಿ ಇಂಜಿನಿಯರ್, 1ಕೋಟಿ 29ಲಕ್ಷ ರೂ.ಆಸ್ತಿ ಪತ್ತೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸಂಸದ ಅಂಗಡಿ ವಿರುದ್ಧ ಮು.ಮ.ಚಂದ್ರು ಕಿಡಿ
ಕೋಮು ಘರ್ಷಣೆ - ಪುತ್ತೂರು ಬಂದ್‌
ಹಿಂದೂ ಸಮಾಜೋತ್ಸವಕ್ಕೆ ಅವಕಾಶ ಕೊಡ್ಬೇಡಿ: ಕಾಂಗ್ರೆಸ್
ರಾಜ್ಯ ಅಡವಿಡಲು ಬಿಜೆಪಿ ಹಿಂಜರಿಯಲ್ಲ: ಉಗ್ರಪ್ಪ
ಅನಂತ್ ವಿರುದ್ಧ ಮುನಿಸು-ಯಡಿಯೂರಪ್ಪ ಸಭೆಗೆ ಗೈರು
ಮಾ.23: ಸೋನಿಯಾ ಪ್ರಚಾರ ದಾವಣಗೆರೆಯಿಂದ ಆರಂಭ