ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಸೈಕಲ್ ವಿತರಣೆಗೆ ಚುನಾವಣಾ ಆಯೋಗ ತಡೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸೈಕಲ್ ವಿತರಣೆಗೆ ಚುನಾವಣಾ ಆಯೋಗ ತಡೆ
NRB
ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ ಮಾಡುವುದನ್ನು ಲೋಕಸಭೆ ಚುನಾವಣೆ ಮುಗಿಯುವವರೆಗೂ ಸ್ಥಗಿತಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ಚುನಾವಣಾ ಆಯೋಗ ಸೂಚಿಸಿದೆ.

ನೀತಿ ಸಂಹಿತೆ ಜಾರಿಯಲ್ಲಿ ಇರುವುದರಿಂದ ಕೇಂದ್ರ ಚುನಾವಣಾ ಆಯೋಗದ ಸೂಚನೆ ಮೇರೆಗೆ ತಾವು ಈ ಕ್ರಮ ಕೈಗೊಂಡಿರುವುದಾಗಿ ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಎಂ.ಎನ್.ವಿದ್ಯಾಶಂಕರ್ ತಿಳಿಸಿದ್ದಾರೆ.

ಮಾ.2ರೊಳಗೆ ಈಗಾಗಲೇ 4.4 ಲಕ್ಷ ಸೈಕಲ್ ವಿತರಿಸಲಾಗಿದೆ. ಇನ್ನೂ 2.2 ಲಕ್ಷ ಸೈಕಲ್ ವಿತರಿಸಬೇಕಾಗಿದೆ. ಇದಕ್ಕೆ ಅನುಮತಿ ನೀಡಬೇಕೆಂದು ಸರ್ಕಾರ ಚುನಾವಣಾ ಆಯೋಗವನ್ನು ಕೋರಿತ್ತು.

ನೆಪ ಮಾತ್ರಕ್ಕೆ ಚುನಾವಣೆ ಕಣಕ್ಕಿಳಿದು, ನಂತರ ಬೇರೊಂದು ಪಕ್ಷದ ಪರ ಪ್ರಚಾರ ನಡೆಸುವ ಅಭ್ಯರ್ಥಿಯ ಚುನಾವಣೆ ವೆಚ್ಚವನ್ನು ರಾಜಕೀಯ ಪಕ್ಷದ ಅಭ್ಯರ್ಥಿಯ ವೆಚ್ಚಕ್ಕೆ ಸೇರಿಸಲಾಗುವುದು. ಮುಂಜಾಗ್ರತಾ ಕ್ರಮವಾಗಿ ರಾಜಕೀಯ ಪಕ್ಷಗಳು ಹಾಗೂ ಪಕ್ಷೇತರ ಅಭ್ಯರ್ಥಿಗಳಿಗೆ ಈ ಕುರಿತು ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಇದುವರೆಗೆ 101 ಅಬಕಾರಿ ಪ್ರಕರಣಗಳನ್ನು ದಾಖಲಿಸಲಾಗಿದೆ. 53.30 ಲಕ್ಷ ರೂ. ಮೊತ್ತದ ಮದ್ಯ ವಶಪಡಿಸಿಕೊಳ್ಳಲಾಗಿದೆ. ನೀತಿ ಸಂಹಿತೆ ಉಲ್ಲಂಘಿಸಿದ 13 ಪ್ರಕರಣಗಳ ಪೈಕಿ 6 ಪ್ರಕರಣಗಳು ಶಿವಮೊಗ್ಗದಲ್ಲಿ ದಾಖಲಾಗಿವೆ ಎಂದರು.

ಪಕ್ಷಗಳು ಹಾಗೂ ಅಭ್ಯರ್ಥಿಗಳ ಎಸ್ಎಂಎಸ್ ಮೂಲಕ ಪ್ರಚಾರ ನಡೆಸುವುದರ ಮೇಲೆ ನಿಗಾ ಇಡಲಾಗಿದ್ದು, ಈ ಸೇವೆ ನೀಡುವ ಕಂಪೆನಿಗಳಿಂದ ಮಾಹಿತಿ ಪಡೆದು ಇದರ ವೆಚ್ಚವನ್ನು ಅಭ್ಯರ್ಥಿಗಳ ವೆಚ್ಚಕ್ಕೆ ಸೇರಿಸಲಾಗುವುದು ಎಂದು ಅವರು ತಿಳಿಸಿದರು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಬಿಜೆಪಿ, ಲೋಕಸಭೆ, ಚುನಾವಣೆ
ಮತ್ತಷ್ಟು
ನಿಂಬಾಳ್ಕರ್ ಸೇರಿ 5 ಭ್ರಷ್ಟರು ಲೋಕಾಯುಕ್ತ ಬಲೆಗೆ
ಸಂಸದ ಅಂಗಡಿ ವಿರುದ್ಧ ಮು.ಮ.ಚಂದ್ರು ಕಿಡಿ
ಕೋಮು ಘರ್ಷಣೆ - ಪುತ್ತೂರು ಬಂದ್‌
ಹಿಂದೂ ಸಮಾಜೋತ್ಸವಕ್ಕೆ ಅವಕಾಶ ಕೊಡ್ಬೇಡಿ: ಕಾಂಗ್ರೆಸ್
ರಾಜ್ಯ ಅಡವಿಡಲು ಬಿಜೆಪಿ ಹಿಂಜರಿಯಲ್ಲ: ಉಗ್ರಪ್ಪ
ಅನಂತ್ ವಿರುದ್ಧ ಮುನಿಸು-ಯಡಿಯೂರಪ್ಪ ಸಭೆಗೆ ಗೈರು