ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಕನ್ನಡ ನಾಡು-ನುಡಿ ರಕ್ಷಣೆಗೆ ಬಿಜೆಪಿ ಬದ್ಧ: ಸಿಎಂ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕನ್ನಡ ನಾಡು-ನುಡಿ ರಕ್ಷಣೆಗೆ ಬಿಜೆಪಿ ಬದ್ಧ: ಸಿಎಂ
ಕನ್ನಡ ನಾಡು-ನುಡಿ, ಗಡಿ ರಕ್ಷಣೆಗೆ ಆಡಳಿತಾರೂಢ ಬಿಜೆಪಿ ಸರ್ಕಾರ ಕಟಿಬದ್ದವಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

ಶಿವಮೊಗ್ಗಕ್ಕೆ ಬುಧವಾರ ಭೇಟಿ ನೀಡಿದ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಮರಾಠಿಗರು ಹಾಗೂ ಬೇರೆ ಜನಾಂಗದವರ ವಿರೋಧಿಗಳು ನಾವಲ್ಲ ಎಂದು ಸ್ಪಷ್ಟಪಡಿಸಿದ ಮುಖ್ಯಮಂತ್ರಿಗಳು, ಕನ್ನಡಿಗರ ಭಾವನೆಗೆ, ನಾಡು-ನುಡಿಗೆ ಧಕ್ಕೆ ಆಗುವುದನ್ನು ಸಹಿಸಲು ಸಾಧ್ಯವಿಲ್ಲ ಎಂದರು.

ಅಲ್ಲದೇ ಬೆಳಗಾವಿಯಲ್ಲಿ ಸಂಸದ ಸುರೇಶ್ ಅಂಗಡಿಯವರು ನೀಡಿದ ಹೇಳಿಕೆ ಅವರ ವೈಯಕ್ತಿಕ ದೃಷ್ಟಿಕೋನದ್ದು, ಇನ್ನು ಮುಂದೆ ಅಂತಹ ತಪ್ಪಾಗದಂತೆ ಎಚ್ಚರವಹಿಸುತ್ತೇವೆ. ಅದೇ ರೀತಿ ಸಂಸದ ಸುರೇಶ್ ಅಂಗಡಿಗೆ ಟಿಕೆಟ್ ನೀಡಲಾಗವುದು, ಅದಕ್ಕೆ ತಲೆಬಾಗುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.

ಗಡಿನಾಡಾದ ಬೆಳಗಾವಿಯಲ್ಲಿ ಮಹಾನಗರ ಪಾಲಿಕೆಯ ನೂತನ ಕಟ್ಟಡದ ಮೇಲೆ ಭಗವಾಧ್ವಜ ಹಾರಿಸಲು ಬಿಜೆಪಿ ಸಂಸದ ಸುರೇಶ್ ಅಂಗಡಿ ಹಾಗೂ ಶಾಸಕ ಸಂಜಯ ಪಾಟೀಲ್ ಮುಂದಾಗಿದ್ದರು. ಈ ಕೃತ್ಯವನ್ನು ಖಂಡಿಸಿ ಪ್ರವೀಣ್ ಶೆಟ್ಟಿ ಹಾಗೂ ನಾರಾಯಣ ಗೌಡ ನೇತೃತ್ವದ ಕರವೇ ಬಣ ತೀವ್ರ ಪ್ರತಿಭಟನೆ ನಡೆಸಿದ್ದವು.

ಕನ್ನಡದ್ರೋಹಿ ನೀತಿ ಅನುಸರಿಸಿದ ಸಂಸದ ಸುರೇಶ್ ಅಂಗಡಿಯವರಿಗೆ ಲೋಕಸಭಾ ಚುನಾವಣೆಗೆ ಟಿಕೆಟ್ ನೀಡಬಾರದು. ಅಂಗಡಿ ಮತ್ತು ಶಾಸಕ ಸಂಜಯ ಪಾಟೀಲರನ್ನು ಪಕ್ಷದಿಂದ ಉಚ್ಚಾಟಿಸಬೇಕೆಂದು ಆಗ್ರಹಿಸಿದ್ದವು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮಾ.23ರಂದು ಕಾಂಗ್ರೆಸ್ ಪಟ್ಟಿ ಬಿಡುಗಡೆ: ದೇಶಪಾಂಡೆ
ಸೈಕಲ್ ವಿತರಣೆಗೆ ಚುನಾವಣಾ ಆಯೋಗ ತಡೆ
ನಿಂಬಾಳ್ಕರ್ ಸೇರಿ 5 ಭ್ರಷ್ಟರು ಲೋಕಾಯುಕ್ತ ಬಲೆಗೆ
ಸಂಸದ ಅಂಗಡಿ ವಿರುದ್ಧ ಮು.ಮ.ಚಂದ್ರು ಕಿಡಿ
ಕೋಮು ಘರ್ಷಣೆ - ಪುತ್ತೂರು ಬಂದ್‌
ಹಿಂದೂ ಸಮಾಜೋತ್ಸವಕ್ಕೆ ಅವಕಾಶ ಕೊಡ್ಬೇಡಿ: ಕಾಂಗ್ರೆಸ್