ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಬಿಜೆಪಿ ವಚನ ಭ್ರಷ್ಟ ಪಕ್ಷ: ಶಿವಪ್ಪ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಿಜೆಪಿ ವಚನ ಭ್ರಷ್ಟ ಪಕ್ಷ: ಶಿವಪ್ಪ
ಬಿಜೆಪಿ ವಚನ ಭ್ರಷ್ಟ ಪಕ್ಷವಾಗಿದೆ ಎಂದು ಬಿಜೆಪಿಯ ಹಿರಿಯ ಮುಖಂಡ ಡಿ.ಬಿ.ಶಿವಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಕ್ಷಕ್ಕೆ ದ್ರೋಹ ಬಗೆದಿರುವ ಮಾಜಿ ಶಾಸಕ ಹನುಮೇಗೌಡರಿಗೆ ಲೋಕಸಭೆಯ ಟಿಕೆಟ್ ನೀಡಿರುವುದನ್ನು ಖಂಡಿಸಿದ್ದು, ಪಕ್ಷದ ನಿಷ್ಠಾವಂತರನ್ನು ಕಡೆಗಣಿಸಿ, ಮಾಜಿ ಸಚಿವ ಕೆ.ಹೆಚ್.ಹನುಮೇಗೌಡರಿಗೆ ಟಿಕೆಟ್ ನೀಡಿರುವುದು ಸೂಕ್ತ ಅಲ್ಲ ಎಂದು ಹೇಳಿದರು.

ಲೋಕಸಭೆ ಚುನಾವಣೆಗೆ ತಮಗೆ ಟಿಕೆಟ್ ನೀಡುವಂತೆ ಕೇಳಿದ್ದೆ, ಒಂದು ವೇಳೆ ಬೇರೆ ಸಮುದಾಯಕ್ಕೆ ಸೇರಿದವರಿಗೆ ಟಿಕೆಟ್ ನೀಡುವುದಾದರೆ ಬಿಜೆಪಿ ಪಕ್ಷದ ನಿಷ್ಠಾವಂತರಿಗೆ ಟಿಕೆಟ್ ನೀಡುವಂತೆ ಸಲಹೆ ನೀಡಿದ್ದೆ. ಇದರಲ್ಲಿ ಯಾವುದನ್ನೂ ಪರಿಗಣನೆಗೆ ತೆಗೆದುಕೊಳ್ಳದಿರುವುದು ಸೂಕ್ತ ಕ್ರಮ ಅಲ್ಲ ಎಂದು ತಿಳಿಸಿದರು.

ಆ ನಿಟ್ಟಿನಲ್ಲಿ ಬಿಜೆಪಿ ಉಳಿಸಿ ಅಭಿಯಾನವನ್ನು ಯತ್ನಾಳ್ ಜೊತೆ ಸೇರಿ ಆರಂಭಿಸುವುದಾಗಿ ಹೇಳಿದರು. ಮಾರ್ಚ್ 20ರಂದು ಬೆಂಗಳೂರಿನಲ್ಲಿ ಯತ್ನಾಳ್ ಹಾಗೂ ಇತರ ನಾಯಕರೊಂದಿಗೆ ಚರ್ಚಿಸಿದ ಬಳಿಕ ಅಭಿಯಾನ ಆರಂಭಿಸಲಾಗುವುದು ಎಂದರು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಬಿಜೆಪಿ, ಶಿವಪ್ಪ, ಹಾಸನ, ಲೋಕಸಭೆ
ಮತ್ತಷ್ಟು
ಸುರೇಶ್ ಅಂಗಡಿ-ಪಾಟೀಲ್‌ ಗಡಿಪಾರು ಮಾಡಿ: ಕಾಂಗ್ರೆಸ್
ಕೈದಿಗಳ ಪಾಲಿಗೆ 'ದೇವರಾದ' ದುನಿಯಾ ವಿಜಯ್
ಗೋವಾದಲ್ಲಿ ಶ್ರೀರಾಮಸೇನೆಗೆ ತಳವೂರಲು ಬಿಡಲ್ಲ: ರವಿ
ಕನ್ನಡ ನಾಡು-ನುಡಿ ರಕ್ಷಣೆಗೆ ಬಿಜೆಪಿ ಬದ್ಧ: ಸಿಎಂ
ಮಾ.23ರಂದು ಕಾಂಗ್ರೆಸ್ ಪಟ್ಟಿ ಬಿಡುಗಡೆ: ದೇಶಪಾಂಡೆ
ಸೈಕಲ್ ವಿತರಣೆಗೆ ಚುನಾವಣಾ ಆಯೋಗ ತಡೆ