ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಅಭ್ಯರ್ಥಿಗಳೊಂದಿಗೆ ಒಳ ಒಪ್ಪಂದ ಮಾಡಿಕೊಳ್ಳಬೇಡಿ: ಸಿಎಂ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಭ್ಯರ್ಥಿಗಳೊಂದಿಗೆ ಒಳ ಒಪ್ಪಂದ ಮಾಡಿಕೊಳ್ಳಬೇಡಿ: ಸಿಎಂ
ಬೇರೆ ಪಕ್ಷದ ಅಭ್ಯರ್ಥಿಗಳೊಂದಿಗೆ ಹೊಂದಾಣಿಕೆ ಇದ್ದರೆ ನೇರವಾಗಿ ಮಾಡಿಕೊಳ್ಳಿ. ಅದನ್ನು ಬಿಟ್ಟು ವಾಮ ಮಾರ್ಗದ ಮೂಲಕ ಒಳ ಒಪ್ಪಂದ ಮಾಡಿಕೊಂಡು ಜನರನ್ನು ಗೊಂದಲದಲ್ಲಿ ಸಿಲುಕಿಸಬೇಡಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರಿಗೆ ಸಲಹೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂಥ ಹೊಂದಾಣಿಕೆಗಳಿಂದ ಯಾವುದೇ ಲಾಭ ಆಗುವುದಿಲ್ಲ. ಬಿಜೆಪಿ ಬಹುತೇಕ ಅಭ್ಯರ್ಥಿಗಳ ಪಟ್ಟಿಯನ್ನು ಪೂರ್ಣಗೊಳಿಸಿದೆ. ಆದರೆ ಕಾಂಗ್ರೆಸ್ ಮತ್ತು ಜೆಡಿಎಸ್‌‌ಗೆ ಈ ಕ್ಷಣದವರೆಗೂ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಸಾಧ್ಯವಾಗಿಲ್ಲ.

ಎಲ್ಲರೂ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ ಬಳಿಕ ಅತೃಪ್ತರಿಗೆ ಗಾಳ ಹಾಕಲು ಜೆಡಿಎಸ್ ಕಾದು ಕುಳಿತಿದೆ. ಇಂಥ ಗೊಂದಲದ ಗೂಡಾಗಿರುವ ಪಕ್ಷಗಳಿಗೆ ಮತದಾರ ಎಂದೂ ಒಲಿಯುವುದಿಲ್ಲ ಎಂದು ಭವಿಷ್ಯ ನುಡಿದರು.

ಕೇಂದ್ರ ಸರ್ಕಾರದ ವೈಫಲ್ಯ, ರಾಜ್ಯಕ್ಕೆ ಮಾಡಿದ ಮೋಸ, ರಾಜ್ಯ ಸರ್ಕಾರದ ಅಭಿವೃದ್ದಿ ಕಾರ್ಯಕ್ರಮ, ಅಟಲ್ ಬಿಹಾರಿಯವರ ಸಾಧನೆ ಇವೇ ನಮಗೆ ಶ್ರೀರಕ್ಷೆಯಾಗಿದ್ದು, ಚುನಾವಣೆಯಲ್ಲಿ ವಿಷಯವಾಗಲಿದೆ ಎಂದು ಅವರು ಹೇಳಿದರು.

ಬಂಗಾರಪ್ಪನವರ ಬಗ್ಗೆ ಮಾತನಾಡದಿರುವುದೇ ಲೇಸು. ಆದರೆ ಅವರು ಉದ್ಧಟತನದ ಮಾತನ್ನು ಆಡುವುದು ಬೇಡ. ಸೆಕೆಂಡ್ ಹ್ಯಾಂಡ್ ಕುರ್ಚಿ, ಸೆಕೆಂಡ್ ಹ್ಯಾಂಡ್ ಹೆಲಿಕಾಪ್ಟರ್ ಎಂದು ಮುಖ್ಯಮಂತ್ರಿ ಸ್ಥಾನದ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ. ಇವರು ಮುಖ್ಯಮಂತ್ರಿಯಾಗುವುದಕ್ಕಿಂತ ಮೊದಲು ಅನೇಕರು ಆ ಕುರ್ಚಿಯನ್ನು ಬಳಸಿದ್ದಾರೆ ಎಂಬುದನ್ನು ಅವರು ಮರೆತಿರುವ ಹಾಗಿದೆ. ಐದೂವರೆ ಕೋಟಿ ಜನರ ಸೇವೆ ಮಾಡಲು ಇರುವ ಆ ಕುರ್ಚಿ ದೇವರ ಸಮಾನ ಎಂದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
'ಇನಿಯಾ' ಚಿತ್ರತಂಡದ ಮೇಲೆ ಪೊಲೀಸ್ ಲಾಠಿ ಪ್ರಹಾರ!
ಗೋವಾಕ್ಕೂ ಹೋಗ್ತೆನೆ-ತಾಕತ್ತಿದ್ದರೆ ತಡೆಯಲಿ: ಮುತಾಲಿಕ್
ಅಂಗಡಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ: ವಿದ್ಯಾಶಂಕರ್
ಬಿಜೆಪಿ ವಚನ ಭ್ರಷ್ಟ ಪಕ್ಷ: ಶಿವಪ್ಪ
ಸುರೇಶ್ ಅಂಗಡಿ-ಪಾಟೀಲ್‌ ಗಡಿಪಾರು ಮಾಡಿ: ಕಾಂಗ್ರೆಸ್
ಕೈದಿಗಳ ಪಾಲಿಗೆ 'ದೇವರಾದ' ದುನಿಯಾ ವಿಜಯ್