ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಜೆಡಿಎಸ್ ಪಾಳಯಕ್ಕೆ 'ರೆಬೆಲ್'ಸ್ಟಾರ್ ಅಂಬರೀಶ್?
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜೆಡಿಎಸ್ ಪಾಳಯಕ್ಕೆ 'ರೆಬೆಲ್'ಸ್ಟಾರ್ ಅಂಬರೀಶ್?
48 ಗಂಟೆಗಳಲ್ಲಿ ಸಿಹಿ ಸುದ್ದಿ ಕೊಡ್ತೇವೆ...
PTI
ಅತೃಪ್ತ ಅಭ್ಯರ್ಥಿಗಳಿಗೆ ಗಾಳ ಹಾಕುವ ಗೆಲುವಿನ ಕುದುರೆಗಳನ್ನು ಬುಟ್ಟಿಗೆ ಹಾಕಿಕೊಳ್ಳಲು ಹೊರಟಿರುವ ಜೆಡಿಎಸ್, ಇದೀಗ ನಟ, ಕಾಂಗ್ರೆಸ್‌‌ನ ಅಂಬರೀಶ್ ಅವರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸುವಲ್ಲಿ ಕಸರತ್ತು ಆರಂಭಿಸಿದ್ದು ಮುಂದಿನ 48ಗಂಟೆಗಳಲ್ಲಿ ಸಿಹಿ ಸುದ್ದಿ ನೀಡುವುದಾಗಿಯೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಬುಧವಾರ ರಾತ್ರಿ ನಟ ಅಂಬರೀಶ್ ಮನೆಗೆ ತೆರಳಿದ್ದ ಕುಮಾರಸ್ವಾಮಿ ಅವರು ಭೇಟಿ ನೀಡಿ ಸುದೀರ್ಘವಾಗಿ ಮಾತುಕತೆ ನಡೆಸಿದ್ದು, ಕಾಂಗ್ರೆಸ್ ಪಾಳಯಕ್ಕೆ ಇರಿಸುಮುರಿಸು ಉಂಟು ಮಾಡಿದೆ.

ಹಳೆಯ ಬಾಂಧವ್ಯದ ಆಧಾರದ ಮೇಲೆ ಅಂಬರೀಶ್ ಅವರನ್ನು ಭೇಟಿಯಾಗಿ ಹಲವಾರು ವಿಷಯಗಳ ಕುರಿತು ಮಾತುಕತೆ ನಡೆಸಿದ್ದೇನೆ ವಿನಃ ಬೇರೆನೂ ಇಲ್ಲ ಎಂದು ಕುಮಾರಸ್ವಾಮಿ ಗುಟ್ಟು ಬಿಟ್ಟುಕೊಡದೆ ಮಾತನಾಡಿದರು. ಅಷ್ಟೇ ಅಲ್ಲ ಬಿಜೆಪಿಯ ಬಂಡಾಯ ಸಂಸದ ಬಸವನಗೌಡ ಪಾಟೀಲ್ ಯತ್ನಾಳ್ ಅವರನ್ನು ಪಕ್ಷಕ್ಕೆ ಸೆಳೆದುಕೊಳ್ಳುವ ಪ್ರಯತ್ನವನ್ನೂ ನಡೆಸಲಾಗುತ್ತಿದೆ.

NRB
ಜೆಡಿಎಸ್ ಸೇರ್ಪಡೆ ನಿರ್ಧಾರವನ್ನು ಅಂಬರೀಶ್ ಅವರಿಗೆ ಬಿಡಲಾಗಿದೆ ಎಂದ ಅವರು, ಯಾವ ನಿರ್ಧಾರ ಕೈಗೊಳ್ಳಬೇಕು ಎಂಬುದು ಕೂಡ ಅಂಬರೀಶ್‌ ಅವರಿಗೆ ತಿಳಿದಿದೆ. ಆ ಕಾರಣದಿಂದಾಗಿ ಮುಂದಿನ 48ಗಂಟೆಗಳಲ್ಲಿ ಸಿಹಿ ಸುದ್ದಿ ಕೊಡ್ತೇವೆ ಕಾದು ನೋಡಿ ಎಂದು ಕುತೂಹಲ ಹುಟ್ಟು ಹಾಕಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಕಾಂಗ್ರೆಸ್ ಸಂಸದೆ ತೇಜಸ್ವಿನಿ, ಅಂಬರೀಶ್ ಮನೆಗೆ ತೆರಳಿ ಸಂಧಾನದ ಮಾತುಕತೆ ನಡೆಸಿದ್ದರು. ಅಲ್ಲದೇ ಅಂಬರೀಶ್ ಅವರು ಯಾವುದೇ ಕಾರಣಕ್ಕೂ ಕಾಂಗ್ರೆಸ್ ತೊರೆಯುವುದಿಲ್ಲ. ಅವರ ಅಸಮಾಧಾನವನ್ನು ಬಗೆಹರಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದರು. ಆ ಸಂದರ್ಭದಲ್ಲಿಯೇ ಕಾಂಗ್ರೆಸ್‌ನ ಅಂಬರೀಶ್ ಹಾಗೂ ತೇಜಸ್ವಿನಿ ಪಕ್ಷದ ಪ್ರಶ್ನಾತೀತ ನಾಯಕರು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಡಿಕೆ ಶಿವಕುಮಾರ್ ವ್ಯಂಗ್ಯವಾಡಿದ್ದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕುಮಾರಸ್ವಾಮಿ ವಿರುದ್ಧ ಆಯೋಗಕ್ಕೆ ದೂರು: ಸಿಎಂ
ಅಭ್ಯರ್ಥಿಗಳೊಂದಿಗೆ ಒಳ ಒಪ್ಪಂದ ಮಾಡಿಕೊಳ್ಳಬೇಡಿ: ಸಿಎಂ
'ಇನಿಯಾ' ಚಿತ್ರತಂಡದ ಮೇಲೆ ಪೊಲೀಸ್ ಲಾಠಿ ಪ್ರಹಾರ!
ಗೋವಾಕ್ಕೂ ಹೋಗ್ತೆನೆ-ತಾಕತ್ತಿದ್ದರೆ ತಡೆಯಲಿ: ಮುತಾಲಿಕ್
ಅಂಗಡಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ: ವಿದ್ಯಾಶಂಕರ್
ಬಿಜೆಪಿ ವಚನ ಭ್ರಷ್ಟ ಪಕ್ಷ: ಶಿವಪ್ಪ