ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ನೈಸ್ ರಸ್ತೆ ನಿರ್ಮಾಣಕ್ಕೆ ಹೈಕೋರ್ಟ್ ಗ್ರೀನ್ ಸಿಗ್ನಲ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನೈಸ್ ರಸ್ತೆ ನಿರ್ಮಾಣಕ್ಕೆ ಹೈಕೋರ್ಟ್ ಗ್ರೀನ್ ಸಿಗ್ನಲ್
ಸರ್ಕಾರಕ್ಕೆ ಮತ್ತೊಮ್ಮೆ ಮುಖಭಂಗ...
ಕಳೆದ ನಾಲ್ಕು ವರ್ಷಗಳಿಂದ ಕಾನೂನು ಸಮರ ನಡೆಸುತ್ತಿದ್ದ ಗೊಟ್ಟಿಗೆರೆ ಕೆರೆ ರಸ್ತೆ ನಿರ್ಮಾಣ ವಿವಾದಕ್ಕೆ ಸಂಬಂಧಿಸಿದಂತೆ ಗುರುವಾರ ನೈಸ್ ಮೇಲ್ಮನವಿಯ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ ಮಾರ್ಗ ಬದಲಾವಣೆ ಆದೇಶ ರದ್ದು ಪಡಿಸಿ, ರಸ್ತೆ ನಿರ್ಮಾಣಕ್ಕೆ ಗ್ರೀನ್ ಸಿಗ್ನಲ್ ನೀಡಿದೆ.

ಗೊಟ್ಟಿಗೆರೆ ಕೆರೆ ರಸ್ತೆ ನಿರ್ಮಾಣ ಕುರಿತಂತೆ ನೈಸ್ ಸಂಸ್ಥೆ ನಕ್ಷೆ ಬದಲಿಸಿ ರಸ್ತೆ ನಿರ್ಮಿಸಲು ಮುಂದಾಗಿತ್ತು. ಆದರೆ ಆ ಸಂದರ್ಭದಲ್ಲಿ ಸರ್ಕಾರ ನೈಸ್ ಕ್ರಮದ ವಿರುದ್ಧ ಆಕ್ಷೇಪ ಎತ್ತಿ ನ್ಯಾಯಾಯಾಲಕ್ಕೆ ಮನವಿ ಸಲ್ಲಿಸಿತ್ತು. ಆ ಹಿನ್ನೆಲೆಯಲ್ಲಿ ಹೈಕೋರ್ಟ್ 2004ರಲ್ಲಿ ತಡೆಯಾಜ್ಞೆ ನೀಡಿತ್ತು.

ಆದರೆ ಹೈಕೋರ್ಟ್ ನೀಡಿರುವ ತಡೆಯಾಜ್ಞೆಗೆ ನೈಸ್ ಆಕ್ಷೇಪ ವ್ಯಕ್ತಪಡಿಸಿ,ವಿವರಣೆ ನೀಡಿತ್ತು. ಇಂದು ನೈಸ್ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ, 2004ರಲ್ಲಿ ಸರ್ಕಾರ ಹೊರಡಿಸಿರುವ ಅಧಿಸೂಚನೆ ಸಮರ್ಪಕವಾಗಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿ, ಗೊಟ್ಟಿಗೆರೆ ಕೆರೆ ರಸ್ತೆ ನಿರ್ಮಾಣಕ್ಕೆ ಗ್ರೀನ್ ಸಿಗ್ನಲ್ ನೀಡಿದೆ.

ಇದರಿಂದಾಗಿ ನೈಸ್ ಹಾದಿ ಸುಗಮವಾದಂತಾಗಿದ್ದು, ಆಡಳಿತಾರೂಢ ಸರ್ಕಾರಕ್ಕೆ ಮತ್ತೊಮ್ಮೆ ಮುಖಭಂಗವಾದಂತಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಬಿಜೆಪಿಯಲ್ಲಿ ಭಿನ್ನಮತವೇ ಇಲ್ಲ: ವೆಂಕಯ್ಯ ನಾಯ್ಡು
ಜೆಡಿಎಸ್ ಪಾಳಯಕ್ಕೆ 'ರೆಬೆಲ್'ಸ್ಟಾರ್ ಅಂಬರೀಶ್?
ಕುಮಾರಸ್ವಾಮಿ ವಿರುದ್ಧ ಆಯೋಗಕ್ಕೆ ದೂರು: ಸಿಎಂ
ಅಭ್ಯರ್ಥಿಗಳೊಂದಿಗೆ ಒಳ ಒಪ್ಪಂದ ಮಾಡಿಕೊಳ್ಳಬೇಡಿ: ಸಿಎಂ
'ಇನಿಯಾ' ಚಿತ್ರತಂಡದ ಮೇಲೆ ಪೊಲೀಸ್ ಲಾಠಿ ಪ್ರಹಾರ!
ಗೋವಾಕ್ಕೂ ಹೋಗ್ತೆನೆ-ತಾಕತ್ತಿದ್ದರೆ ತಡೆಯಲಿ: ಮುತಾಲಿಕ್