ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಹಿಂದೂ ಸಮಾವೇಶದಿಂದಲೇ ಹಿಂಸೆ: ಜೆಡಿಎಸ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹಿಂದೂ ಸಮಾವೇಶದಿಂದಲೇ ಹಿಂಸೆ: ಜೆಡಿಎಸ್
ಮಂಗಳೂರಿನಲ್ಲಿ ನಡೆದ ಹಿಂದೂ ಸಮಾಜೋತ್ಸವದ ಪ್ರಚೋದನೆಯಿಂದಲೇ ಕೆಲವು ಹಿಂದೂ ಮೂಲಭೂತವಾದಿಗಳು ಕಾಪುವಿನಲ್ಲಿ ಕೋಮುಗಲಭೆ ನಡೆಸಿದ್ದಾರೆ ಎಂದು ಜೆಡಿಎಸ್ ಆರೋಪಿಸಿದೆ.

ಗೃಹಸಚಿವ ವಿ.ಎಸ್.ಆಚಾರ್ಯ ಸಮ್ಮುಖದಲ್ಲೇ ನಡೆದ ಹಿಂದೂ ಸಮಾಜೋತ್ಸವ ಧರ್ಮದ ಹೆಸರಲ್ಲಿ ಮತಯಾಚನೆ ಕಾರ್ಯಕ್ರಮವಾಗಿದ್ದು, ಇದು ಸ್ಪಷ್ಟ ಚುನಾವಣಾ ಅಪರಾಧವಾಗಿದೆ. ಈ ಬಗ್ಗೆ ಚುನಾವಣಾಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಬೇಕೆಂದು ಅವರು ಪಕ್ಷದ ವಕ್ತಾರ ವೈ.ಎಸ್.ವಿ.ದತ್ತ ಆಗ್ರಸಿದ್ದಾರೆ.

ಸಮಾಜೋತ್ಸವದಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದ ಹಾಗೂ ಪಾಲ್ಗೊಂಡಿದ್ದವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ಮುಖ್ಯ ಚುನಾವಣಾ ಅಧಿಕಾರಿಗಳಿಗೆ ಲಿಖಿತ ರೂಪದಲ್ಲಿ ದೂರು ನೀಡಿ, ಇನ್ನು ಮುಂದೆ ಇಂತಹ ವೋಟ್ ಬ್ಯಾಂಕ್ ತಂತ್ರದ ಸಮಾಜೋತ್ಸವ ನಡೆಸಲು ಅವಕಾಶ ನೀಡಬಾರದು ಎಂದು ಒತ್ತಾಯಿಸಿರುವುದಾಗಿ ತಿಳಿಸಿದರು.

ಕಾರ್ಯಕ್ರಮಕ್ಕೆ ಅವಕಾಶ ನೀಡುವ ಮೂಲಕ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಕರ್ತವ್ಯ ಲೋಪ ಎಸಗಿದ್ದಾರೆ ಎಂದು ದೂರಿದರು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಕಾಪು, ಜೆಡಿಎಸ್, ಬಿಜೆಪಿ, ದತ್ತ
ಮತ್ತಷ್ಟು
ಅನಧಿಕೃತ ಬ್ಯಾನರ್ ಹಾಕಿದ್ರೆ ಕ್ರಿಮಿನಲ್ ದೂರು: ಶ್ರೀಕರ್
ಕೊನೆಗೂ ಸುರೇಶ್ ಅಂಗಡಿ-ಪಾಟೀಲ್ ಕ್ಷಮೆಯಾಚನೆ
ನೈಸ್ ರಸ್ತೆ ನಿರ್ಮಾಣಕ್ಕೆ ಹೈಕೋರ್ಟ್ ಗ್ರೀನ್ ಸಿಗ್ನಲ್
ಬಿಜೆಪಿಯಲ್ಲಿ ಭಿನ್ನಮತವೇ ಇಲ್ಲ: ವೆಂಕಯ್ಯ ನಾಯ್ಡು
ಜೆಡಿಎಸ್ ಪಾಳಯಕ್ಕೆ 'ರೆಬೆಲ್'ಸ್ಟಾರ್ ಅಂಬರೀಶ್?
ಕುಮಾರಸ್ವಾಮಿ ವಿರುದ್ಧ ಆಯೋಗಕ್ಕೆ ದೂರು: ಸಿಎಂ