ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಮಂಡ್ಯದಿಂದ ಮಾತ್ರ ಸ್ಪರ್ಧೆ - 'ಅಂಬರೀಶ್' ಭಿನ್ನರಾಗ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಂಡ್ಯದಿಂದ ಮಾತ್ರ ಸ್ಪರ್ಧೆ - 'ಅಂಬರೀಶ್' ಭಿನ್ನರಾಗ
ಕಾಂಗ್ರೆಸ್ ಬಗ್ಗೆ ಅಸಮಾಧಾನ ಹೊಂದಿದ್ದ ರೆಬೆಲ್ ಸ್ಟಾರ್ ಅಂಬರೀಶ್ ಅವರು ಜೆಡಿಎಸ್ ಪಾಳಯಕ್ಕೆ ಜಿಗಿಯಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿರುವ ಮಧ್ಯೆಯೇ, ತಾನು ಮಂಡ್ಯ ಕ್ಷೇತ್ರದಿಂದ ಮಾತ್ರ ಸ್ಪರ್ಧಿಸುವುದಾಗಿ ಕಾಂಗ್ರೆಸ್ ಹೈಕಮಾಂಡ್‌ಗೆ ತಿಳಿಸಿದ್ದು, ಅವರ ನಿರ್ಧಾರಕ್ಕಾಗಿ ಕಾಯುತ್ತಿರುವುದಾಗಿ ಅಂಬಿ ಭಿನ್ನರಾಗ ಹಾಡತೊಡಗಿದ್ದಾರೆ.

ಚುನಾವಣಾ ವ್ಯವಸ್ಥೆ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ, ಒಂದು ವೇಳೆ ಸ್ಪರ್ಧಿಸಿದರೂ ಮಂಡ್ಯದಿಂದಲೇ ಸ್ಪರ್ಧಿಸುತ್ತೇನೆ. ಮಂಡ್ಯ ಹೊರತುಪಡಿಸಿ ಬೇರೆ ಯಾವ ಕ್ಷೇತ್ರದಿಂದಲೂ ಸ್ಪರ್ಧಿಸಲಾರೆ ಎಂದು ಸಂಸದ ಅಂಬಿ ಸ್ಪಷ್ಟಪಡಿಸಿದ್ದಾರೆ.

ಜೆಪಿ ನಗರದ ನಿವಾಸದಲ್ಲಿ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರ ಜತೆ ಮಾತನಾಡಿದ ಅವರು, ಈಗಾಗಲೇ ಹಲವು ಪಕ್ಷಗಳಿಂದ ಆಹ್ವಾನ ಬಂದಿದೆ. ಆದರೆ ಕಾಂಗ್ರೆಸ್ ತೊರೆಯುವ ಕುರಿತು ಯಾವುದೇ ನಿರ್ಧಾರ ಕೈಗೊಂಡಿಲ್ಲ. ಮಾರ್ಚ್ 29ರ ಬಳಿಕ ಅಂತಿಮ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದರು.

ಕಾಂಗ್ರೆಸ್ ವರಿಷ್ಠರು ತನ್ನನ್ನು ಒಳ್ಳೆಯ ರೀತಿಯಿಂದಲೇ ನೋಡಿಕೊಂಡಿದ್ದಾರೆ. ಅವರ ಬಗ್ಗೆ ನನ್ನ ವಿರೋಧವಿಲ್ಲ. ರಾಜ್ಯ ಮತ್ತು ಜಿಲ್ಲಾ ಮಟ್ಟದ ಕೆಲ ಮುಖಂಡರ ವರ್ತನೆಯಿಂದ ಬೇಸರ ಆಗಿದೆ ಎಂದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪ್ರಚಾರಕ್ಕೆ ಪಾರಿವಾಳ ಬಳಕೆ: ಆಯೋಗದ ಕೆಂಗಣ್ಣು
ಉಪಗ್ರಹ ಛಾಯಾಚಿತ್ರ: ಲೋಕಾಯುಕ್ತಕ್ಕೆ ಕೋರ್ಟ್ ನೋಟಿಸ್
ಎಸ್.ಎಂ.ಕೃಷ್ಣಗೆ ಟಿಕೆಟ್ ನೀಡಲು ಒತ್ತಾಯ
ಹಿಂದೂ ಸಮಾವೇಶದಿಂದಲೇ ಹಿಂಸೆ: ಜೆಡಿಎಸ್
ಅನಧಿಕೃತ ಬ್ಯಾನರ್ ಹಾಕಿದ್ರೆ ಕ್ರಿಮಿನಲ್ ದೂರು: ಶ್ರೀಕರ್
ಕೊನೆಗೂ ಸುರೇಶ್ ಅಂಗಡಿ-ಪಾಟೀಲ್ ಕ್ಷಮೆಯಾಚನೆ