ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಚುನಾವಣಾ ಆಯೋಗದ ವಿರುದ್ಧ ದೇಶಪಾಂಡೆ ಕಿಡಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಚುನಾವಣಾ ಆಯೋಗದ ವಿರುದ್ಧ ದೇಶಪಾಂಡೆ ಕಿಡಿ
ಚುನಾವಣೆ ನೀತಿ ಸಂಹಿತೆ ಜಾರಿಯಾದ ನಂತರ ಕರಾವಳಿ ಭಾಗದಲ್ಲಿ ವ್ಯಾಪಕವಾಗಿ ನೀತಿ ಸಂಹಿತೆ ಉಲ್ಲಂಘನೆ ನಡೆಯುತ್ತಿದ್ದರೂ ಕಠಿಣ ಕ್ರಮಕ್ಕೆ ಮುಂದಾಗದ ರಾಜ್ಯ ಚುನಾವಣಾ ಆಯೋಗ ತನ್ನ ಕರ್ತವ್ಯ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಆರ್.ವಿ.ದೇಶಪಾಂಡೆ ಆರೋಪಿಸಿದ್ದಾರೆ.

ಕರಾವಳಿ ಭಾಗದಲ್ಲಿ ಒಂದು ವರ್ಗವನ್ನು ಗುರಿಯಾಗಿಸಿ ಕೋಮು ಸಂಘಟನೆಗಳು ದಾಳಿ ನಡೆಸುತ್ತಿವೆ. ಇದನ್ನು ತಡೆಗಟ್ಟಬೇಕಾದ ಸರ್ಕಾರವು ಸಂಘಟನೆಗಳಿಗೆ ಪರೋಕ್ಷ ಬೆಂಬಲ ನೀಡಿದೆ. ನೀತಿ ಸಂಹಿತೆ ಜಾರಿಯಾಗಿರುವ ಹಿನ್ನೆಲೆಯಲ್ಲಿ ಇಂತಹ ಘಟನೆಗಳ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಕಟ್ಟೆಚ್ಚರ ನೀಡಬೇಕಾದ ಆಯೋಗ ಮೌನ ವಹಿಸಿದೆ. ಇದು ಆಯೋಗದ ಮೇಲೆಯೇ ಸಂಶಯ ಹುಟ್ಟಲು ಕಾರಣವಾಗಿದೆ ಎಂದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೂಡಲೇ ಕರಾವಳಿಗೆ ವೀಕ್ಷಕರನ್ನು ಕಳುಹಿಸಿ ಪರಿಸ್ಥಿತಿ ಅವಲೋಕನ ನಡೆಸುವಂತೆ ಆಯೋಗವನ್ನು ಒತ್ತಾಯಿಸಿದರು.

ನೀತಿ ಸಂಹಿತೆ ಜಾರಿಯಾದ ನಂತರ ಇಂತಹ ಘಟನೆಗಳ ನಿಯಂತ್ರಿಸುವ ಬಗ್ಗೆ ಆಯೋಗವೇ ಜವಾಬ್ದಾರಿ ಹೊರ ಬೇಕಾಗುತ್ತದೆ. ಆದರೆ ಆಯೋಗ ಮಾತ್ರ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆಪಾದಿಸಿದರು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ದೇಶಪಾಂಡೆ, ಲೋಕಸಭೆ, ಆಯೋಗ
ಮತ್ತಷ್ಟು
ಬಿಕೋ ಎನ್ನುತ್ತಿರುವ ವಿಧಾನ ಸೌಧ
ಮಂಡ್ಯದಿಂದ ಮಾತ್ರ ಸ್ಪರ್ಧೆ - 'ಅಂಬರೀಶ್' ಭಿನ್ನರಾಗ
ಪ್ರಚಾರಕ್ಕೆ ಪಾರಿವಾಳ ಬಳಕೆ: ಆಯೋಗದ ಕೆಂಗಣ್ಣು
ಉಪಗ್ರಹ ಛಾಯಾಚಿತ್ರ: ಲೋಕಾಯುಕ್ತಕ್ಕೆ ಕೋರ್ಟ್ ನೋಟಿಸ್
ಎಸ್.ಎಂ.ಕೃಷ್ಣಗೆ ಟಿಕೆಟ್ ನೀಡಲು ಒತ್ತಾಯ
ಹಿಂದೂ ಸಮಾವೇಶದಿಂದಲೇ ಹಿಂಸೆ: ಜೆಡಿಎಸ್