ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಪೇಜಾವರಶ್ರೀ ವಿರುದ್ಧ ಕ್ರಮಕ್ಕೆ ಜೆಡಿಎಸ್ ಆಗ್ರಹ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪೇಜಾವರಶ್ರೀ ವಿರುದ್ಧ ಕ್ರಮಕ್ಕೆ ಜೆಡಿಎಸ್ ಆಗ್ರಹ
ಉಡುಪಿ ಪೇಜಾವರ ಮಠದ ಪೇಜಾವರಶ್ರೀ ಹಾಗೂ ರಾಜ್ಯದ ಗೃಹಸಚಿವರೇ ಸ್ವತಃ ಹಿಂದೂ ಸಮಾಜೋತ್ಸವದಲ್ಲಿ ಭಾಗವಹಿಸಿರುವ ಹಿನ್ನೆಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿರುವ ಆರೋಪದ ಮೇಲೆ ಕ್ರಮ ಕೈಗೊಳ್ಳಬೇಕೆಂದು ಜೆಡಿಎಸ್ ಒತ್ತಾಯಿಸಿದೆ.

ಮಂಗಳೂರು ಮತ್ತು ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಹಿಂದೂ ಸಮಾಜೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗೃಹ ಸಚಿವ ವಿ ಎಸ್ ಆಚಾರ್ಯ, ಪೇಜಾವರ ಶ್ರೀಗಳ ವಿರುದ್ಧ ಚುನಾವಣಾ ನೀತಿ ಸಂಹಿತೆ ಉಲ್ಲಂಘಟನೆ ಆರೋಪದ ಮೇಲೆ ಕ್ರಮಕೈಗೊಳ್ಳುವಂತೆ ಒತ್ತಡ ಹೇರಿದೆ.

ರಾಜ್ಯ ಚುನಾವಣೆ ಅಧಿಕಾರಿಗಳಿಗೆ ಗುರುವಾರ ಲಿಖಿತ ದೂರು ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪಕ್ಷದ ವಕ್ತಾರ ವೈಎಸ್ ವಿ ದತ್ತ ಅವರು, ಈ ಎರಡು ಸಭೆಗಳು ಬಿಜೆಪಿಯೇ ಪರವಾಗಿಯೇ ನಡೆದಿರುವ ಸಮಾವೇಶಗಳಾಗಿವೆ. ಆದ್ದರಿಂದ ಚುನಾವಣಾ ಕಾನೂನುಗಳ ಪ್ರಕಾರ ಕ್ರಮ ಕೈಗೊಳ್ಳಲು ಅವಕಾಶವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಬೆಂಗಳೂರಿನಲ್ಲಿ ಮಾರ್ಚ್ 7 ರಂದು ಧರ್ಮ ಜಾಗೃತಿ ಸಭೆ ಹೆಸರಿನಲ್ಲಿ ನಡೆದ ಸಮಾವೇಶದಲ್ಲಿ ಪೇಜಾವರಶ್ರೀಗಳು, ಗೃಹ ಸಚಿವ ವಿ ಎಸ್ ಆಚಾರ್ಯ, ಬಿಜೆಪಿ ರಾಜ್ಯಾದ್ಯಕ್ಷ ಸದಾನಂದಗೌಡ ಕರಾವಳಿ ಕಾರ್ಯಪಡೆ ಅಧ್ಯಕ್ಷ ನಾಗರಾಜ ಶೆಟ್ಟಿ, ಮಂಗಳೂರು ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್, ಸಚಿವ ಕೃಷ್ಣ ಪಾಲೇಮಾರ್, ಶಾಸಕ ಯೋಗೀಶ್ ಭಟ್ ಭಾಗವಹಿಸಿದ್ದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಚುನಾವಣಾ ಆಯೋಗದ ವಿರುದ್ಧ ದೇಶಪಾಂಡೆ ಕಿಡಿ
ಬಿಕೋ ಎನ್ನುತ್ತಿರುವ ವಿಧಾನ ಸೌಧ
ಮಂಡ್ಯದಿಂದ ಮಾತ್ರ ಸ್ಪರ್ಧೆ - 'ಅಂಬರೀಶ್' ಭಿನ್ನರಾಗ
ಪ್ರಚಾರಕ್ಕೆ ಪಾರಿವಾಳ ಬಳಕೆ: ಆಯೋಗದ ಕೆಂಗಣ್ಣು
ಉಪಗ್ರಹ ಛಾಯಾಚಿತ್ರ: ಲೋಕಾಯುಕ್ತಕ್ಕೆ ಕೋರ್ಟ್ ನೋಟಿಸ್
ಎಸ್.ಎಂ.ಕೃಷ್ಣಗೆ ಟಿಕೆಟ್ ನೀಡಲು ಒತ್ತಾಯ