ಹಕ್ಕ-ಬುಕ್ಕರು ಈ ರಾಜ್ಯ ಕಟ್ಟಿದ ಪ್ರಮುಖರು, ಆದರೆ ಯಡಿಯೂರಪ್ಪ ಮತ್ತು ಅನಂತ್ ಕುಮಾರ್‌ಗೆ ಕಳ್ಳ-ಮಳ್ಳ ಜೋಡಿ ಎನ್ನುವುದೇ ಹೆಚ್ಚು ಸೂಕ್ತ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಕ್ಕ-ಬುಕ್ಕರು ರಾಜ್ಯ ಕಟ್ಟಿ ಉತ್ತಮ ಕಾರ್ಯ ಮಾಡಿದ ಮಹಾನುಭಾವರು, ಅವರ ಹೆಸರು ಬಳಕೆ ಮಾಡುವ ಯೋಗ್ಯತೆ ಅವರಿಗಿಲ್ಲ, ಆ ನಿಟ್ಟಿನಲ್ಲಿ ಅವರಿಬ್ಬರನ್ನು ಕಳ್ಳ-ಮಳ್ಳ ಅಂತ ಕರೆಯುವುದೇ ಉತ್ತಮ ಎಂದು ಲೇವಡಿ ಮಾಡಿದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಕ್ಕ, ನಾನು ಬುಕ್ಕ ಇದ್ದಂತೆ. ಪ್ರತಿ ಚುನಾವಣೆಯಲ್ಲೂ ಅದೇ ರೀತಿ ಒಂದಾಗಿ ಕೆಲಸ ಮಾಡಿದ್ದೇವೆ. ಕೊನೇ ತನಕವೂ ಹಕ್ಕ-ಬುಕ್ಕರಂತೆಯೇ ಇರುತ್ತೇವೆ ಎಂದು ಬಿಜೆಪಿ ಸಂಸದ ಅನಂತ್ ಕುಮಾರ್ ಹೇಳಿದ್ದರು.
ಅವರು ಗುರುವಾರ ನಗರದಲ್ಲಿ ರಾಷ್ಟ್ರೀಯ ವೀರಶೈವ ಹಿತರಕ್ಷಣಾ ವೇದಿಕೆಯ ಉದ್ಘಾಟನಾ ಸಮಾರಂಭದಲ್ಲಿ ಅನಂತ್ ಕುಮಾರ್ ಮಾತನಾಡುತ್ತ ಅಭಿಪ್ರಾಯ ವ್ಯಕ್ತಪಡಿಸಿದ ಪರಿ ಇದಾಗಿತ್ತು.
ಬಿಜೆಪಿಯ 20ವರ್ಷದ ಇತಿಹಾಸದಲ್ಲಿ ತಮ್ಮ ಪಾಲೂ ಇದೆ ಎಂದು ಹೇಳಿದ ಅವರು, ಅನಂತ್ ವಿಚಾರ, ಯಡಿಯೂರಪ್ಪ ಹೋರಾಟದಿಂದ ಪಕ್ಷ ಬೆಳೆದಿದೆ. ಪ್ರತಿ ಚುನಾವಣೆ ಸೇರಿದಂತೆ ಪ್ರತಿಯೊಂದು ವಿಷಯದಲ್ಲಿ ನಾವಿಬ್ಬರೂ ಹಕ್ಕ-ಬುಕ್ಕರಂತೆ ಒಂದಾಗಿ ಕೆಲಸ ಮಾಡಿದ್ದೇವೆ ಎಂದಿದ್ದರು. |