ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಯಡಿಯೂರಪ್ಪ ಸರ್ಕಾರದಿಂದ ವಿಶ್ವಮಟ್ಟದಲ್ಲಿ ಕೆಟ್ಟ ಹೆಸರು: ಕಾಂಗ್ರೆಸ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಯಡಿಯೂರಪ್ಪ ಸರ್ಕಾರದಿಂದ ವಿಶ್ವಮಟ್ಟದಲ್ಲಿ ಕೆಟ್ಟ ಹೆಸರು: ಕಾಂಗ್ರೆಸ್
ರಾಜ್ಯದಲ್ಲಿ ಆಡಳಿತಾರೂಢ ಬಿಜೆಪಿ ಸರ್ಕಾರದಿಂದಲೇ ಕೋಮುದಳ್ಳುರಿ ಹೆಚ್ಚುತ್ತಿದೆ ಎಂದು ಕಾಂಗ್ರೆಸ್ ವಕ್ತಾರೆ ಜಯಂತಿ ನಟರಾಜನ್ ಗಂಭೀರವಾಗಿ ಆರೋಪಿಸಿದ್ದಾರೆ.

ಕಾಂಗ್ರೆಸ್ ಹಿರಿಯ ಮುಖಂಡೆ ಜಯಂತಿ ಅವರು ಶುಕ್ರವಾರ ನಗರಕ್ಕೆ ಆಗಮಿಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಾದ್ಯಂತ ಕೋಮುಗಲಭೆ ನಡೆಯುತ್ತಿದ್ದರು ಕೂಡ ಸರ್ಕಾರ ಮೂಕಪ್ರೇಕ್ಷಕವಾಗಿದೆ ಎಂದರು.

ಯಡಿಯೂರಪ್ಪ ನೇತೃತ್ವದ ಸರ್ಕಾರದ ಆಡಳಿದಿಂದಾಗಿ ಕರ್ನಾಟಕ ವಿಶ್ವಮಟ್ಟದಲ್ಲಿ ಕೆಟ್ಟ ಹೆಸರನ್ನು ಪಡೆದುಕೊಳ್ಳುವಂತಾಗಿದೆ ಎಂದು ದೂರಿದರು. ಅಲ್ಲದೇ ಚುನಾವಣೆಯ ಹಿನ್ನೆಲೆಯಲ್ಲಿ ಆಯೋಗ ಕರ್ನಾಟಕದ ಮೇಲೆ ವಿಶೇಷ ನಿಗಾ ವಹಿಸಬೇಕೆಂದು ಮನವಿ ಮಾಡಿದರು. ಅದೇ ರೀತಿ ಶಿವಮೊಗ್ಗ ಕ್ಷೇತ್ರದ ಮೇಲೂ ಚುನಾವಣಾ ಆಯೋಗ ಹದ್ದಿನಕಣ್ಣು ಇಡಬೇಕೆಂದು ಈ ಸಂದರ್ಭದಲ್ಲಿ ಜಯಂತಿ ಆಗ್ರಹಿಸಿದರು.

ಮಾಹಿತಿ-ತಂತ್ರಜ್ಞಾನ, ಕೈಗಾರಿಕೆಗಳಿಂದ ಹೆಸರುಗಳಿಸಿದ್ದ ಕರ್ನಾಟಕ, ಇಂದು ಮಂಗಳೂರು ಪಬ್ ಮೇಲಿನ ದಾಳಿಯ ಘಟನೆಯಿಂದಾಗಿ ತಲೆತಗ್ಗಿಸುವಂತಾಗಿದೆ. ಆ ನಿಟ್ಟಿನಲ್ಲಿ ರಾಜ್ಯದಲ್ಲಿ ಆಡಳಿತಯಂತ್ರ ಏನು ಮಾಡುತ್ತಿದೆ ಎಂಬುದನ್ನು ಕೂಲಂಕಷವಾಗಿ ಪರಿಶೀಲಿಸುತ್ತಿರುವುದಾಗಿ ಅವರು ನುಡಿದರು.

ಮುಖ್ಯಮಂತ್ರಿ ಯಡಿಯೂರಪ್ಪನವರು ಭದ್ರತೆಯ ವಿಷಯದಲ್ಲಿ ಕೇಂದ್ರವನ್ನು ಅನಾವಶ್ಯಕವಾಗಿ ದೂರುವ ಮೂಲಕ ವಿವಾದ ಹುಟ್ಟುಹಾಕಿದ್ದಾರೆ. ಸ್ವತಃ ಯಡಿಯೂರಪ್ಪನವರೇ ಕೇಂದ್ರ ಗೃಹಮಂತ್ರಿಗಳು ಕರೆದ ಸಭೆಗೆ ಗೈರುಹಾಜರಾಗುವ ಮೂಲಕ ಸಭೆಯನ್ನು ರದ್ದುಮಾಡುವಂತೆ ಮಾಡಿದ್ದರು ಎಂದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಯಡಿಯೂರಪ್ಪ-ಅನಂತ್ ಕಳ್ಳ-ಮಳ್ಳರಿದ್ದಂಗೆ: ಎಚ್‌ಡಿಕೆ
ರಾಜ್ಯದಲ್ಲಿ ಗುಜರಾತ್‌ಕ್ಕಿಂತ ಕಳಪೆ ಆಡಳಿತ: ದೇವೇಗೌಡ
ಪೇಜಾವರಶ್ರೀ ವಿರುದ್ಧ ಕ್ರಮಕ್ಕೆ ಜೆಡಿಎಸ್ ಆಗ್ರಹ
ಚುನಾವಣಾ ಆಯೋಗದ ವಿರುದ್ಧ ದೇಶಪಾಂಡೆ ಕಿಡಿ
ಬಿಕೋ ಎನ್ನುತ್ತಿರುವ ವಿಧಾನ ಸೌಧ
ಮಂಡ್ಯದಿಂದ ಮಾತ್ರ ಸ್ಪರ್ಧೆ - 'ಅಂಬರೀಶ್' ಭಿನ್ನರಾಗ