ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಅಂಗಡಿಗೆ ಟಿಕೆಟ್ ನೀಡಿದ್ರೆ ಉಗ್ರ ಪ್ರತಿಭಟನೆ: ಕರವೇ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಂಗಡಿಗೆ ಟಿಕೆಟ್ ನೀಡಿದ್ರೆ ಉಗ್ರ ಪ್ರತಿಭಟನೆ: ಕರವೇ
ಮರಾಠಿ ಪರ ನಿಲುವು ತಳೆದ ತಪ್ಪಿಗಾಗಿ ಕ್ಷಮೆ ಕೇಳಿದರೆ ಸಮಸ್ಯೆ ಬಗೆಹರಿಯವುದಿಲ್ಲ. ಸಂಸದ ಅಂಗಡಿ ಅವರನ್ನು ಬಿಜೆಪಿಯಿಂದಲೇ ಉಚ್ಚಾಟಿಸಬೇಕು ಎಂದು ಪಟ್ಟು ಹಿಡಿದಿರುವ ಕರ್ನಾಟಕ ರಕ್ಷಣಾ ವೇದಿಕೆ, ಒಂದು ವೇಳೆ ಅಂಗಡಿಗೆ ಟಿಕೆಟ್ ಕೊಟ್ಟರೆ ಬಿಜೆಪಿಗೆ ಮತ ನೀಡದಂತೆ 28 ಲೋಕಸಭಾ ಕ್ಷೇತ್ರದಲ್ಲೂ ಆಂದೋಲನ ನಡೆಸುವುದಾಗಿ ಎಚ್ಚರಿಸಿದೆ.

ಸುರೇಶ್ ಅಂಗಡಿ ಪ್ರಕರಣವನ್ನು ನೋಡಿದರೆ ಬಿಜೆಪಿಯವರು ವೀರಪ್ಪನ್‌‌ಗೂ ಟಿಕೆಟ್ ನೀಡಿ ಗೆಲ್ಲಿಸುತ್ತಿದ್ದರು ಜೊತೆಗೆ ಭಯೋತ್ಪಾದಕರಿಗೂ ಟಿಕೆಟ್ ನೀಡುತ್ತಿದ್ದರು ಎಂದು ಕರವೇ ಅಧ್ಯಕ್ಷ ನಾರಾಯಣ ಗೌಡ ಆಕ್ರೋಶ ವ್ಯಕ್ತಪಡಿಸಿದರು.

ಅಕಾಡೆಮಿ ಅಧ್ಯಕ್ಷ ಸ್ಥಾನ, ಪ್ರಶಸ್ತಿ ವಿತರಣೆ ಬಾಕಿ ಇರುವುದರಿಂದ ಸಾಹಿತಿಗಳು ಈ ಹೇಳಿಕೆಗೆ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ಟೀಕಿಸಿದ ಅವರು ನಮ್ಮ ಹೋರಾಟ ಮುಂದುವರಿಯಲಿದೆ. ಬೆಳಗಾವಿಯಲ್ಲಿ ಸಾಹಿತಿ, ಸ್ವಾಮೀಜಿಗಳ ರಾಲಿ ನಡೆಯಲಿದೆ ಎಂದರು.

ತಪ್ಪು ನಡೆದಿರುವುದನ್ನು ಸಂಸದರು ಹಾಗೂ ಮುಖ್ಯಮಂತ್ರಿಗಳು ಸಮರ್ಥಿಸಿಕೊಳ್ಳುವುದು ಅವಮಾನಕರ ಸಂಗತಿ ಎಂದು ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ ಹೇಳಿದರು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಬೆಂಗಳೂರು, ಸುರೇಶ್ ಅಂಗಡಿ, ಕರವೇ,
ಮತ್ತಷ್ಟು
ಯಡಿಯೂರಪ್ಪ ಸರ್ಕಾರದಿಂದ ವಿಶ್ವಮಟ್ಟದಲ್ಲಿ ಕೆಟ್ಟ ಹೆಸರು: ಕಾಂಗ್ರೆಸ್
ಯಡಿಯೂರಪ್ಪ-ಅನಂತ್ ಕಳ್ಳ-ಮಳ್ಳರಿದ್ದಂಗೆ: ಎಚ್‌ಡಿಕೆ
ರಾಜ್ಯದಲ್ಲಿ ಗುಜರಾತ್‌ಕ್ಕಿಂತ ಕಳಪೆ ಆಡಳಿತ: ದೇವೇಗೌಡ
ಪೇಜಾವರಶ್ರೀ ವಿರುದ್ಧ ಕ್ರಮಕ್ಕೆ ಜೆಡಿಎಸ್ ಆಗ್ರಹ
ಚುನಾವಣಾ ಆಯೋಗದ ವಿರುದ್ಧ ದೇಶಪಾಂಡೆ ಕಿಡಿ
ಬಿಕೋ ಎನ್ನುತ್ತಿರುವ ವಿಧಾನ ಸೌಧ