ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಚುನಾವಣಾ ಆಯೋಗ ವಿಶೇಷ ಗಮನ ನೀಡಬೇಕು: ಕಾಂಗ್ರೆಸ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಚುನಾವಣಾ ಆಯೋಗ ವಿಶೇಷ ಗಮನ ನೀಡಬೇಕು: ಕಾಂಗ್ರೆಸ್
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಸ್ತಿತ್ವಕ್ಕೆ ಬಂದ ನಂತರ ನಡೆದ ಅಹಿತಕರ ಘಟನೆಗಳನ್ನೇ ಮುಂದಿಟ್ಟುಕೊಂಡು ಚುನಾವಣೆ ಅಖಾಡದಲ್ಲಿ ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್ ಮುಂದಾಗಿದೆ.

ಸರ್ಕಾರದ ವಿರುದ್ಧ ಆರೋಪಗಳ ಪಟ್ಟಿಯನ್ನೇ ಸಿದ್ಧಪಡಿಸಿರುವ ಕಾಂಗ್ರೆಸ್, ಕರ್ನಾಟಕದ ಮೇಲೆ ವಿಶೇಷ ನಿಗಾ ಇಡುವಂತೆ ಕೇಂದ್ರ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸುವುದಾಗಿ ಹೇಳಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಎಐಸಿಸಿ ವಕ್ತಾರೆ ಜಯಂತಿ ನಟರಾಜನ್, ಮತ ಗಳಿಕೆಗಾಗಿ ಸಮುದಾಯಗಳ ಧ್ರುವೀಕರಣಕ್ಕೆ ಬಿಜೆಪಿ ಪ್ರಯತ್ನಿಸುತ್ತಿದೆ ಮತ್ತು ಇದು ಧರ್ಮಾಧಾರಿತವಾಗಿ ನಡೆಯುತ್ತಿದೆ. ರಾಜ್ಯದಲ್ಲಿ ನಡೆಯುತ್ತಿರುವ ಕೋಮು ಸಂಘರ್ಷಗಳ ಹಿಂದೆ ಇದೇ ಉದ್ದೇಶ ಅಡಗಿದೆ. ಸರ್ಕಾರವೇ ಮತೀಯ ಗಲಭೆಗಳಿಗೆ ಕುಮ್ಮಕ್ಕು ನೀಡುತ್ತಿದೆ ಎಂದು ಆರೋಪಿಸಿದರು.

ಸರ್ಕಾರದಿಂದಲೇ ರಾಜ್ಯದಲ್ಲಿ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆಯಾಗುತ್ತಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಪುತ್ರ ಸ್ಪರ್ಧಿಸುತ್ತಿರುವ ಶಿವಮೊಗ್ಗದಲ್ಲಿ ನಡೆದ ಔತಣಕೂಟವೇ ಇದಕ್ಕೆ ಸಾಕ್ಷಿ ಎಂದರು.

ಕಾಂಗ್ರೆಸ್ ಶೀಘ್ರವೇ ಚುನಾವಣಾ ಆಯೋಗವನ್ನು ಭೇಟಿ ಮಾಡಿ ಕರ್ನಾಟಕದಲ್ಲಿನ ವಿದ್ಯಮಾನಗಳ ಬಗ್ಗೆ ಮನವಿ ಸಲ್ಲಿಸಲಿದೆ. ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಯಬೇಕಿದ್ದರೆ ರಾಜ್ಯದ ಬಗ್ಗೆ ಆಯೋಗ ವಿಶೇಷ ಗಮನ ನೀಡಬೇಕು ಎಂಬುದು ಪಕ್ಷದ ಒತ್ತಾಯ ಎಂದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಬೆಂಗಳೂರು ಮೇಲೆ ಮತ್ತೆ ಉಗ್ರರ ಕರಿನೆರಳು
ಸ್ವ ಇಚ್ಚೆಯಿಂದ ಸಮಾಜೋತ್ಸವಕ್ಕೆ ಹೋಗಿದ್ದೆ: ಆಚಾರ್ಯ
'ನೈಸ್' ಖೇಣಿ ವಿರುದ್ಧ ಸ್ಪರ್ಧೆಗೆ ಸಿದ್ದ: ದೇವೇಗೌಡ ಸವಾಲ್
ಎನ್‌‌ಎಸ್‌‌ಜಿ ಇಲ್ಲ-ಎಟಿಎಸ್ ರಚನೆಗೆ ಚಿದು ಅಭಯ
ಅಂಗಡಿಗೆ ಟಿಕೆಟ್ ನೀಡಿದ್ರೆ ಉಗ್ರ ಪ್ರತಿಭಟನೆ: ಕರವೇ
ಯಡಿಯೂರಪ್ಪ ಸರ್ಕಾರದಿಂದ ವಿಶ್ವಮಟ್ಟದಲ್ಲಿ ಕೆಟ್ಟ ಹೆಸರು: ಕಾಂಗ್ರೆಸ್