ಹಿಂದೂ ಸಮಾಜೋತ್ಸವದಲ್ಲಿ ಭಾಗವಹಿಸಿರುವ ಬಗ್ಗೆ ತಮ್ಮ ನಿಲುವನ್ನು ಸ್ಪಷ್ಟಪಡಿಸಿರುವ ಪೇಜಾವರ ಶ್ರೀ ವಿಶ್ವೇಶತಿರ್ಥ ಸ್ವಾಮೀಜಿ ಅವರು, ತಾವು ಯಾವುದೇ ರಾಜಕೀಯ ಪಕ್ಷದ ಪರವಾಗಿ ಇಲ್ಲ. ಎಲ್ಲಾ ಪಕ್ಷಗಳಲ್ಲಿಯೂ ತಮ್ಮ ಅಭಿಮಾನಿಗಳು ಇದ್ದಾರೆ. ಎಲ್ಲಾ ಪಕ್ಷಗಳ ಜತೆಗೂ ಸ್ನೇಹ ಸಂಬಂಧ ಇದೆ ಎಂದು ತಿಳಿಸಿದ್ದಾರೆ.
ದೇಶದಲ್ಲಿ ಯಾವುದೇ ಸಮಾಜಕ್ಕೆ ಅನ್ಯಾಯ ಆಗಬಾರದು. ಸರ್ಕಾರ ಎಲ್ಲಾ ಸಮಾಜವನ್ನು ಸಮಾನವಾಗಿ ನೋಡಬೇಕು ಎನ್ನುವುದೇ ತಮ್ಮ ನಿಲುವು. ಹೀಗೇ ತಾವು ಪಕ್ಷಾತೀತ ಮತ್ತು ನಿಜವಾದ ಅರ್ಥದಲ್ಲಿ ಜಾತ್ಯತೀತವಾಗಿರುವುದೆಂದು ಹೇಳಿದ್ದಾರೆ.
ತಾವು ಧರ್ಮಾತೀತರಲ್ಲ, ಯಾವುದೇ ಧರ್ಮಗಳಿಗೆ ಅನ್ಯಾಯವಾಗಬಾರದು ಎಂದು ನಾನು ಬಯಸುತ್ತಿದ್ದರೂ, ಹಿಂದೂ ಪೀಠಾಧಿಪತಿಯಾಗಿ ಹಿಂದೂ ಸಂಘಟನೆ, ಧರ್ಮ ಪ್ರಸಾರ ಮತ್ತು ಹಿಂದೂ ಧರ್ಮದ ಸುಧಾರಣೆಗಾಗಿ ಪ್ರಯತ್ನಿಸುತ್ತೇನೆ. ಹಿಂದೂ ಧರ್ಮಕ್ಕೆ ಯಾವುದೇ ಅನ್ಯಾಯವಾಗಬಾರದು ಎಂದು ಪ್ರತಿಪಾದಿಸುವುದಾಗಿ ಹೇಳಿದರು.
ತಾನು ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿಲ್ಲ. ಯಾವ ರಾಜಕೀಯ ಪಕ್ಷವನ್ನೂ ಬೆಂಬಲಿಸಿಲ್ಲ. ದೇಶದ ಸಮಗ್ರತೆ ಮತ್ತು ಹಿಂದೂ ಧರ್ಮದ ಬಗ್ಗೆ ನಮ್ಮ ಕಳಕಳಿಯನ್ನು ಎಲ್ಲಾ ರಾಜಕೀಯ ಪಕ್ಷಗಳು ಅರ್ಥೈಸಿಕೊಳ್ಳಬೇಕು ಎಂದರು. |