ಮಠ, ಮಠಾಧೀಶರ ವಿರುದ್ಧ ಬಾಯಿಗೆ ಬಂದಂತೆ ಮಾತನಾಡುತ್ತಿರುವ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ನಾಲಿಗೆಗೆ ಕಾಂಗ್ರೆಸ್ ಕಡಿವಾಣ ಹಾಕಲಿ ಎಂದು ಇಂಧನ ಸಚಿವ ಕೆ.ಎಸ್.ಈಶ್ವರಪ್ಪ ಎಚ್ಚರಿಕೆ ನೀಡಿದ್ದಾರೆ.
ಹಿಂದೂಗಳು ಗೌರವಿಸುವ ಮಠ, ಮಠಾಧೀಶರ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುತ್ತಿರುವ ಬಂಗಾರಪ್ಪನವರ ನಾಲಿಗೆಗೆ ಕಾಂಗ್ರೆಸ್ ಬ್ರೇಕ್ ಹಾಕಲಿ ಎಂದು ತಿಳಿಸಿದರು.
ಹೊಸನಗರ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಹತ್ತಿರ ಏನಿದೆ, ಎರಡು ಗೊಡ್ಡು ಎಮ್ಮೆ,ನಾಲ್ಕು ಕರು ಇದೆ ಅವರ ಬಳಿ ಇನ್ನೇನಿದೆ ಎಂದು ಅವಹೇಳನಕಾರಿಯಾಗಿ ಮಾತನಾಡುವ ಮೂಲಕ ಬಂಗಾರಪ್ಪ ಬ್ರಾಹ್ಮಣ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿದ್ದರು.
ಅವಹೇಳನಕಾರಿಯಾಗಿ ಹೇಳಿಕೆ ನೀಡಿದ ಬಂಗಾರಪ್ಪ ಕ್ಷಮೆ ಕೋರಬೇಕು. ಇಲ್ಲದಿದ್ದರೆ ಉಗ್ರ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಹವ್ಯಕ ಮಹಾಸಭಾ ಎಚ್ಚರಿಕೆ ಕೂಡ ನೀಡಿತ್ತು. |