ಲೀಡ್ ಇಂಡಿಯಾ ಖ್ಯಾತಿಯ ಆರ್.ಕೆ.ಮಿಶ್ರಾ ಶನಿವಾರ ಭಾರತೀಯ ಜನತಾ ಪಕ್ಷಕ್ಕೆ ಪಕ್ಷದ ಮುಖಂಡರ ಸಮ್ಮುಖದಲ್ಲಿ ಸೇರ್ಪಡೆಯಾದರು.
ಬಿಜೆಪಿಯ ಚುನಾವಣಾ ಕಾರ್ಯಾಲಯದಲ್ಲಿ ಪಕ್ಷದ ಹಿರಿಯ ಮುಖಂಡ ಅರುಣ್ ಜೇಟ್ಲಿ ಸಮ್ಮುಖದಲ್ಲಿ ಲೀಡ್ ಇಂಡಿಯಾ ಪ್ರಶಸ್ತಿಯ ಆರ್.ಕೆ.ಮಿಶ್ರಾ ಬಿಜೆಪಿಗೆ ಸೇರಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜೇಟ್ಲಿ, ಮಿಶ್ರಾ ಬಿಜೆಪಿ ಸೇರುತ್ತಿರುವುದು ನಿಜಕ್ಕೂ ಸ್ವಾಗತಾರ್ಹ, ಬಿಜೆಪಿ ಸಹಜವಾಗಿ ಪ್ರತಿಭೆಗಳಿಗೆ ಮನ್ನಣೆ ನೀಡುತ್ತದೆ ಎನ್ನುವುದು ಇದರಿಂದ ತಿಳಿಯುತ್ತಿದೆ ಎಂದರು.
ಲೀಡ್ ಇಂಡಿಯಾ ರನ್ನರ್ ಅಫ್ ಪ್ರಶಸ್ತಿ ಪಡೆದ ಅಹಮದಾಬಾದ್ ಖ್ಯಾತ ವಕೀಲ ನಾನಾವತಿ ಸಹ ಬಿಜೆಪಿ ಸೇರುವುದಾಗಿ ಹೇಳಿದ್ದಾರೆ. ಲೀಡ್ ಇಂಡಿಯಾ ಸ್ಪರ್ಧೆಯಲ್ಲಿ ಅಂತಿಮ ಸುತ್ತು ತಲುಪಿದ್ದ ಇಬ್ಬರು ಬಿಜೆಪಿ ಸೇರಿರುವುದು ಪಕ್ಷಕ್ಕೆ ಅನುಕೂಲವಾಗಲಿದೆ ಎಂದು ಹೇಳಿದರು.
ಆರ್.ಕೆ.ಮಿಶ್ರಾ ಮಾತನಾಡಿ, ಬಿಜೆಪಿಗೆ ರಾಷ್ಟ್ರದ ಬಗ್ಗೆ ಇರುವ ಕಾಳಜಿಯನ್ನು ಗಮನಿಸಿ ಬಿಜೆಪಿ ಪಕ್ಷ ಸೇರ್ಪಡೆಗೊಳ್ಳಲು ನಿರ್ಧರಿಸಿರುವುದಾಗಿ ತಿಳಿಸಿದರು. |