ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಜೆಡಿಎಸ್ ಸೇರ್ಪಡೆಗೊಳ್ಳುತ್ತಾರಾ ಜಾಫರ್ ಷರೀಫ್?
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜೆಡಿಎಸ್ ಸೇರ್ಪಡೆಗೊಳ್ಳುತ್ತಾರಾ ಜಾಫರ್ ಷರೀಫ್?
ಬೆಂಗಳೂರು: ಪಕ್ಷದ ಮೇಲೆ ಮುನಿಸಿಕೊಂಡಿರುವ ಹಿರಿಯ ಕಾಂಗ್ರೆಸ್ ಮುಖಂಡ ಸಿ.ಕೆ.ಜಾಫರ್ ಷರೀಫ್ ಕಾಂಗ್ರೆಸ್ ಬಿಟ್ಟು ಜೆಡಿಎಸ್ ಸೇರುವ ಸೂಚನೆ ನೀಡಿದ್ದಾರೆ. ಬೆಂಗಳೂರು ಸೆಂಟ್ರಲ್ನಿಂದ ಕಾಂಗ್ರೆಸ್ ಟಿಕೆಟ್ ಬೇಡಿಕೆ ಇಟ್ಟಿರುವ ಷರೀಫ್ ಅವರಿಗೆ ಪಕ್ಷದ ಹೈಕಮಾಂಡ್ ಇನ್ನೂ ಮೀನಮೇಷ ಎಣಿಸುತ್ತಿರುವುದು ಬೇಸರ ತಂದಿದೆ.

ವಿಶ್ವಾಸಮತದ ಸಂದರ್ಭದಲ್ಲಿ ಕಾಂಗ್ರೆಸ್ ಪರ ನಿಂತ ಎಚ್.ಟಿ.ಸಾಂಗ್ಲಿಯಾನ ಕೂಡಾ ಇದೇ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದು, ಹೈಕಮಾಂಡ್ ಇದನ್ನು ಗಂಭೀರವಾಗಿ ಪರಿಗಣಿಸಿರುವುದು ಷರೀಫ್ ಈ ನಿರ್ಧಾರಕ್ಕೆ ಬರಲು ಕಾರಣ ಎನ್ನಲಾಗಿದೆ. ಪಕ್ಷದಲ್ಲಿ ಪ್ರಾಶಸ್ತ್ಯ ಕಡಿಮೆಯಾಗಿರುವುದರಿಂದ ಬೇಸತ್ತಿದ್ದ ಷರೀಫ್ ಅವರಿಗೆ ಕಳೆದ ವಿಧಾನಸಭಾ ಚುನಾವಣಾ ವೇಳೆ ಮೊಮ್ಮಗನಿಗೆ ಟಿಕೆಟ್ ನೀಡದೆ ಇದ್ದುದು ಕಾಂಗ್ರೆಸ್ ಜತೆಗಿನ ಸಂಬಂಧ ಹಳಸುವಂತೆ ಮಾಡಿತ್ತು.

ಇದೀಗ ಸೆಂಟ್ರಲ್ನಿಂದ ಟಿಕೆಟ್ ನೀರೀಕ್ಷೆಯಲ್ಲಿದ್ದ ಅವರಿಗೆ ಈ ವಿಚಾರದಲ್ಲಾದರೂ ಹೈಕಮಾಂಡ್ ತಮ್ಮ ಪರ ನಿಲ್ಲಬಹುದು ಎನ್ನುವ ಭರವಸೆ ಇಲ್ಲವಾಗಿದೆ. ಅಲ್ಲದೆ ಷರೀಫ್ ಅವರ ಬಹುಕಾಲದ ರಾಜಕೀಯ ಮಿತ್ರ ಜೆಡಿಎಸ್ ವರಿಷ್ಠ ದೇವೇಗೌಡರು ಇದಾಗಲೇ ಅವರಿಗೆ ಪಕ್ಷಕ್ಕೆ ಆಗಮಿಸುವಂತೆ ಆಹ್ವಾನ ನೀಡಿದ್ದಾರಲ್ಲದೆ, ಬೆಂಗಳೂರು ಉತ್ತರದಿಂದ ಟಿಕೆಟ್ ನೀಡುವ ಭರವಸೆ ಕೂಡಾ ನೀಡಿದ್ದಾರೆ ಎನ್ನಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಹಣ-ಹೆಂಡ ಹಂಚದೆ ಗೆಲುವು ಸಾಧಿಸುತ್ತೇನೆ: ವಿಶ್ವನಾಥ್
ಲೀಡ್ ಇಂಡಿಯಾ ಖ್ಯಾತಿಯ ಮಿಶ್ರಾ ಬಿಜೆಪಿಗೆ
ನಿಮ್ಮಲ್ಲಿ ಪಿಸ್ತೂಲ್ ಇದ್ರೆ ಗುಂಡು ಹಾರಿಸಿ !: ಬಿದರಿ
ಬಂಗಾರಪ್ಪ ವಿರುದ್ಧ ಯಡಿಯೂರಪ್ಪ ಬ್ಲ್ಯಾಕ್‌ಮೇಲ್: ಎಚ್‌ಡಿಕೆ
ಬಂಗಾರಪ್ಪ ನಾಲಿಗೆಗೆ ಕಾಂಗ್ರೆಸ್ ಬ್ರೇಕ್ ಹಾಕಲಿ: ಈಶ್ವರಪ್ಪ
ಬಿಜೆಪಿಯಿಂದ 'ಸಾಲದ ರಾಜಕಾರಣ': ಖರ್ಗೆ