ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕಡುವೈರಿ ನೈಸ್ ಧಣಿ ಅಶೋಕ್ ಖೇಣಿ ಅವರು ಹಾಸನ ಲೋಕಸಭಾ ಕ್ಷೇತ್ರದಿಂದಲೇ ಸ್ಪರ್ಧಿಸುವ ಇಚ್ಚೆ ವ್ಯಕ್ತಪಡಿಸಿದ್ದಾರೆ.
ದೇವೇಗೌಡರ ವಿರುದ್ದ ಸ್ಪರ್ಧಿಸುವುದಾಗಿ ಖೇಣಿ ಈ ಮೊದಲು ಹೇಳಿಕೆ ನೀಡಿದ್ದರು. ಅಶೋಕ್ ಖೇಣಿ ಯಾವ ಕ್ಷೇತ್ರದಿಂದಲೇ ಸ್ಪರ್ಧಿಸಲಿ ಅಲ್ಲಿಂದಲೇ ತಾನು ಅಖಾಡಕ್ಕೆ ಇಳಿಯುವುದಾಗಿ ದೇವೇಗೌಡರು ಸವಾಲೊಡ್ಡಿದ್ದರು.
ಇದೀಗ ತಾನು ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಕೆಲವು ರಾಜಕೀಯ ಪಕ್ಷಗಳು ತಮ್ಮನ್ನು ಸಂಪರ್ಕಿಸಿರುವುದಾಗಿ ತಿಳಿಸಿದ ಖೇಣಿ, ಈ ಕುರಿತು ಶೀಘ್ರವೇ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದರು.
ನೈಸ್ ರಸ್ತೆ ಹಗರಣಕ್ಕೆ ಸಂಬಂಧಿಸಿದಂತೆ ದೇವೇಗೌಡ ಹಾಗೂ ಖೇಣಿ ಹಾವು-ಮುಂಗುಸಿಯಂತಾಗಿದ್ದು, ಪ್ರಕರಣ ಈಗಾಗಲೇ ಹೈಕೋರ್ಟ್, ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಲ್ಲದೇ, ಈಗ ರಾಜಕೀಯವಾಗಿಯೂ ಇಬ್ಬರೂ ಸಮರಕ್ಕಿಳಿದಿದ್ದಾರೆ. |