ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಕೋಮುವಾದಿ ಪಕ್ಷವನ್ನು ದೂರವಿಡಿ: ಸೋನಿಯಾ ಕರೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕೋಮುವಾದಿ ಪಕ್ಷವನ್ನು ದೂರವಿಡಿ: ಸೋನಿಯಾ ಕರೆ
ದಾವಣಗೆರೆಯಲ್ಲಿ ಭಾರತ್ ನಿರ್ಮಾಣ್ ರಾಲಿಗೆ ಚಾಲನೆ...
PTI
ಕರ್ನಾಟಕದಲ್ಲಿ ಆಡಳಿತಾರೂಢ ಬಿಜೆಪಿ ನೈಸರ್ಗಿಕ ಸಂಪತ್ತು ಲೂಟಿಯಲ್ಲಿ ತೊಡಗಿದೆ. ಕೋಮುವಾದವನ್ನು ಬೆಳೆಸುವ ಮೂಲಕ ಭಾರತೀಯ ಪ್ರಜಾತಂತ್ರ ವ್ಯವಸ್ಥೆಯನ್ನು ಬುಡಮೇಲು ಮಾಡಲು ಹೊರಟಿದೆ. ಆ ನಿಟ್ಟಿನಲ್ಲಿ ಕೋಮುವಾದಿಗಳನ್ನು ಪ್ರಜ್ಞಾವಂತ ಮತದಾರರು ದೂರ ಇಡಬೇಕು ಎಂದು ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಕರೆ ನೀಡಿದರು.

ಸೋಮವಾರ ದಾವಣಗೆರೆಯ ಬಾಪೂಜಿ ಮೈದಾನದಲ್ಲಿ ಲೋಕಸಭಾ ಚುನಾವಣೆ ಪ್ರಚಾರದ ಭಾರತ್ ನಿರ್ಮಾಣ್ ಬೃಹತ್ ರಾಲಿಗೆ ಅಧಿಕೃತವಾಗಿ ಚಾಲನೆ ನೀಡಿ ಮಾತನಾಡಿದ ಅವರು, ಭಾರತೀಯ ಜನತಾಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ನಿಮಗೆ ಯಾವ ತೆರನಾದ ರಾಜಕೀಯ ಬೇಕು ಎಂಬುದನ್ನು ಮತದಾರರೇ ನಿರ್ಧರಿಸಬೇಕು ಎಂಬುದಾಗಿ ಹೇಳಿದ ಸೋನಿಯಾ, ಅಭಿವೃದ್ದಿಯೇ ಮೂಲಮಂತ್ರವನ್ನಾಗಿಸಿಕೊಂಡಿರುವ ಕಾಂಗ್ರೆಸ್ ಪಕ್ಷ ಬೇಕೋ ಅಥವಾ ಕೋಮುವಾದದ ನಡುವೆ ನರಳುವಂತಾಗುವ ಎನ್‌ಡಿಎ ಪಕ್ಷ ಬೇಕೋ ಎಂಬ ಆಯ್ಕೆ ನಿಮ್ಮ ಮುಂದಿದೆ ಎಂದರು.

ಕೇಂದ್ರದ ಯುಪಿಎ ಸರ್ಕಾರದ ಉದ್ಯೋಗ ಖಾತ್ರಿ ಯೋಜನೆ ಇನ್ನಿತರ ಜನಪರ ಕಾರ್ಯಕ್ರಮಗಳ ಪಟ್ಟಿ ಮಾಡಿದ ಅವರು, ಕೇಂದ್ರದ ಸಾಧನೆಯನ್ನು ಜನರ ಮುಂದಿಟ್ಟು ಕಾಂಗ್ರೆಸ್‌‌ಗೆ ಬಹುಮತ ತಂದುಕೊಡುವಂತೆ ಜನರಲ್ಲಿ ಮನವಿ ಮಾಡಿಕೊಂಡರು.

ಸಣ್ಣ-ಪುಟ್ಟ ಭಿನ್ನಾಭಿಪ್ರಾಯಗಳನ್ನು ಬದಿಗಿರಿಸಿ ಒಗ್ಗಟ್ಟಿನಿಂದ ಚುನಾವಣೆ ಎದುರಿಸುಂತೆ ಸೋನಿಯಾ ಕಾರ್ಯಕರ್ತರಿಗೆ ಈ ಸಂದರ್ಭದಲ್ಲಿ ಕಿವಿಮಾತು ಹೇಳಿದರು.

ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಆರ್.ವಿ.ದೇಶಪಾಂಡೆ, ಉಪಾಧ್ಯಕ್ಷ ಡಿ.ಕೆ.ಶಿವಕುಮಾರ್, ರಾಜ್ಯದ ಉಸ್ತುವಾರಿ ವಹಿಸಿಕೊಂಡಿರುವ ಗುಲಾಂ ನಬೀ ಅಜಾದ್, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ , ಮಾಜಿ ಮುಖ್ಯಮಂತ್ರಿ ಬಂಗಾರಪ್ಪ, ವೀರಪ್ಪ ಮೊಯ್ಲಿ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಹುಬ್ಬಳ್ಳಿ: ಯಡಿಯೂರಪ್ಪಗೆ ಕರವೇ ಘೇರಾವ್
ಕಾಂಗ್ರೆಸ್‌‌ ಶಾಸಕ ಸೋಮಣ್ಣ ಬಿಜೆಪಿಗೆ ?
ಯಡಿಯೂರಪ್ಪ ಸಾಧನೆ ನಮಗೆ ಶ್ರೀರಕ್ಷೆ: ಶೋಭಾ
ಸೋನಿಯಾ ಮಹಾನ್ ಮಹಿಳೆ: ದೇಶಪಾಂಡೆ
ಮತ್ತೆ ಡಿ.ಕೆ.ಶಿವಕುಮಾರ್ - ತೇಜಸ್ವಿನಿ ಜಟಾಪಟಿ
ಬೆಂಗಳೂರು ದಕ್ಷಿಣದಿಂದ ಸ್ಪರ್ಧಿಗಿಳಿಯುವೆ: ಎಸ್.ಎಂ.ಕೃಷ್ಣ