ವರುಣ್ ಗಾಂಧಿ ಹೇಳಿಕೆಯನ್ನು ಸ್ವಾಗತಿಸುವುದಾಗಿ ಹೇಳಿದ ಶ್ರೀರಾಮಸೇನೆಯ ಸಂಸ್ಥಾಪಕ ಮುತಾಲಿಕ್, ಹಾಗಾದರೆ ಈ ದೇಶದಲ್ಲಿ ಹಿಂದೂಗಳು ಮಾತನಾಡಲೇಬಾರದ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ಸೋಮವಾರ ಖಾಸಗಿ ಟಿವಿ ಚಾನೆಲ್‌ವೊಂದರ ಜತೆ ಮಾತನಾಡಿದ ಅವರು, ವರುಣ್ ಹೇಳಿಕೆ ಸರಿಯಾಗಿಯೇ ಇದೆ ಎಂದು ಬೆಂಬಲ ಸೂಚಿಸಿದರು. ಚುನಾವಣಾ ಪ್ರಚಾರದಲ್ಲಿ ನೇರ ನುಡಿಗಳನ್ನಾಡುವ ಮೂಲಕ ನೆಹರು ಕುಟುಂಬದ ಗಂಡುಗಲಿ ಎನ್ನಿಸಿಕೊಂಡಿದ್ದಾರೆ ಎಂದು ಶ್ಲಾಘಿಸಿದರು.
ಇದು ಹಿಂದೂ ದೇಶ, ಪ್ರಜಾಪ್ರಭುತ್ವದಲ್ಲಿ ಅಭಿಪ್ರಾಯ ವ್ಯಕ್ತಪಡಿಸಲು ಎಲ್ಲರಿಗೂ ಅವಕಾಶ ಇದೆ, ಆದರೆ ಭಾರತೀಯ ಜನತಾ ಪಕ್ಷ ವರುಣ್ ಹೇಳಿಕೆ ಬಗ್ಗೆ ದ್ವಂದ್ವ ನಿಲುವು ತಳೆಯುತ್ತಿರುವುದು ದುರದೃಷ್ಟಕರ ಎಂದು ಹೇಳಿದರು.
ವರುಣ್ ಗಾಂಧಿ ಹೇಳಿಕೆ ಬಗ್ಗೆ ಚುನಾವಣಾ ಆಯೋಗದ ನಿರ್ಧಾರ ಸರಿಯಾದ ಕ್ರಮವಲ್ಲ ಎಂದ ಮುತಾಲಿಕ್, ವರುಣ್ ಗಾಂಧಿ ಅವರು ಕರ್ನಾಟಕದಲ್ಲಿ ಸ್ಪರ್ಧಿಸುವುದಾದರೆ ಶ್ರೀರಾಮಸೇನೆ ಬೆಂಬಲ ನೀಡುವುದಾಗಿಯೂ ಈ ಸಂದರ್ಭದಲ್ಲಿ ತಿಳಿಸಿದರು. |