ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಬಿಜೆಪಿ ಕೊಲೆಗಡುಕ ಸರ್ಕಾರ: ಗುಲಾಂ ನಬಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಿಜೆಪಿ ಕೊಲೆಗಡುಕ ಸರ್ಕಾರ: ಗುಲಾಂ ನಬಿ
ಧರ್ಮದ ಆಧಾರದಲ್ಲಿ ಕೋಮುದಳ್ಳುರಿಯನ್ನು ಹಬ್ಬಿಸಿ ಸಮಾಜವನ್ನು ಒಡೆಯುತ್ತಿರುವ ಬಿಜೆಪಿ ಸರ್ಕಾರ ಕೊಲೆಗಡುಕ ಸರ್ಕಾರ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಗುಲಾಂ ನಬಿ ಆಜಾದ್ ಖಾರವಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ದಾವಣಗೆರೆಯಲ್ಲಿ ಏರ್ಪಡಿಸಿದ್ದ ಭಾರತ್ ನಿರ್ಮಾಣ್ ರಾಲಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಧರ್ಮ-ಧರ್ಮಗಳ ನಡುವೆ ಸಂಘರ್ಷ ತಂದು ಕೋಮುವಾದಿ ಶಕ್ತಿಗಳು ಸಮಾಜವನ್ನು ವಿಭಜನೆ ಮಾಡಲು ಯತ್ನಿಸುತ್ತಿವೆ ಎಂದು ಟೀಕಾಪ್ರಹಾರ ನಡೆಸಿದರು.

ಕಳೆದ ಐದು ವರ್ಷಗಳ ಹಿಂದೆ ಕರ್ನಾಟಕದ ಹೆಸರು ಜಾಗತಿಕವಾಗಿ ವ್ಯಾಪಿಸಿತ್ತು. ಎಸ್.ಎಂ.ಕೃಷ್ಣ ಅವರ ಆಡಳಿತಾವಧಿಯಲ್ಲಿ ರಾಜ್ಯಕ್ಕೆ ಹೊಸ ಆಯಾಮ ದೊರಕಿತ್ತು. ಆದರೆ ಈಗ ನಮ್ಮ ದೌರ್ಭಾಗ್ಯ ಕೋಮು ಸೌಹಾರ್ದತೆ ಹದಗೆಟ್ಟು ಹೋಗಿದೆ. ಇಂತಹ ಸರ್ಕಾರವನ್ನು ಕಿತ್ತೊಗೆಯಬೇಕು ಎಂದು ನೆರೆದಿದ್ದ ಬೃಹತ್ ಜನಸ್ತೋಮಕ್ಕೆ ಕರೆ ನೀಡಿದರು.

ಕಾಂಗ್ರೆಸ್ ಕೈ ಬಲಪಡಿಸಿ-ದೇಶಪಾಂಡೆ: ರಾಜ್ಯದಲ್ಲಿ ಕೊಲೆ,ಸುಲಿಗೆ, ಅಲ್ಪಸಂಖ್ಯಾತರ ಮೇಲೆ ನಿರಂತರವಾಗಿ ದಾಳಿ ನಡೆಯುತ್ತಿದ್ದು, ಬಿಜೆಪಿ ಸರ್ಕಾರದ ಅಟ್ಟಹಾಸವನ್ನು ತಡೆಗಟ್ಟುವಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಪಡಿಸಬೇಕೆಂದು ಕೆಪಿಸಿಸಿ ಅಧ್ಯಕ್ಷ ಆರ್.ವಿ.ದೇಶಪಾಂಡೆ ತಿಳಿಸಿದರು.

ರಾಜ್ಯದಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿ ನಡೆಯುತ್ತಿದ್ದು, ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ಹೆಚ್ಚುತ್ತಿದೆ. ಇಂತಹ ಸರ್ಕಾರವನ್ನು ಕಿತ್ತೊಗೆಯಲು ನಾವೆಲ್ಲ ಒಂದಾಗಿ ಯುಪಿಎ ಅಧ್ಯಕ್ಷೆ ಸೋನಿಯಾ ಅವರ ಕೈ ಬಲಪಡಿಸಬೇಕೆಂದು ಮನವಿ ಮಾಡಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಭಾರತದಲ್ಲಿ ಹಿಂದೂಗಳು ಮಾತನಾಡುವುದು ತಪ್ಪಾ?: ಮುತಾಲಿಕ್
ಕೋಮುವಾದಿ ಪಕ್ಷವನ್ನು ದೂರವಿಡಿ: ಸೋನಿಯಾ ಕರೆ
ಹುಬ್ಬಳ್ಳಿ: ಯಡಿಯೂರಪ್ಪಗೆ ಕರವೇ ಘೇರಾವ್
ಕಾಂಗ್ರೆಸ್‌‌ ಶಾಸಕ ಸೋಮಣ್ಣ ಬಿಜೆಪಿಗೆ ?
ಯಡಿಯೂರಪ್ಪ ಸಾಧನೆ ನಮಗೆ ಶ್ರೀರಕ್ಷೆ: ಶೋಭಾ
ಸೋನಿಯಾ ಮಹಾನ್ ಮಹಿಳೆ: ದೇಶಪಾಂಡೆ