ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಚುನಾವಣೆ ಖರ್ಚಿಗೆ ಹಣ ನೀಡಿ-ಯಡಿಯೂರಪ್ಪ ಬೆದರಿಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಚುನಾವಣೆ ಖರ್ಚಿಗೆ ಹಣ ನೀಡಿ-ಯಡಿಯೂರಪ್ಪ ಬೆದರಿಕೆ
NRB
ಚುನಾವಣೆ ಖರ್ಚಿಗಾಗಿ ಪಕ್ಷಕ್ಕೆ ಹಣ ಕೊಡದಿದ್ದರೆ ಮದ್ಯದ ಅಂಗಡಿಗಳ ಲೈಸೆನ್ಸ್ ನವೀಕರಣ ಮಾಡುವುದಿಲ್ಲ ಎಂದು ಯಡಿಯೂರಪ್ಪನವರು ಮದ್ಯ ಅಂಗಡಿಗಳ ಮಾಲೀಕರ ಸಂಘದ ಪದಾಧಿಕಾರಿಗಳನ್ನು ಕರೆಸಿಕೊಂಡು ಬೆದರಿಕೆ ಹಾಕಿರುವುದಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.

ಕಾಂಗ್ರೆಸ್ ಮತ್ತು ಜೆಡಿಎಸ್ ಚುನಾವಣೆಯಲ್ಲಿ ಗೆಲ್ಲಲು ವಾಮಮಾರ್ಗಗಳನ್ನು ಅನುಸರಿಸುತ್ತಿದೆ ಎಂದು ಹೇಳುವ ಯಡಿಯೂರಪ್ಪನವರೇ ಎಂತಹ ವಾಮಮಾರ್ಗ ಅನುಸರಿಸುತ್ತಿದ್ದಾರೆ ಎಂಬುದಕ್ಕೆ ಇವೆಲ್ಲಾ ತಾಜಾ ಉದಾಹರಣೆ ಎಂದರು. ಶಿವಮೊಗ್ಗದಲ್ಲೂ ತಮ್ಮ ಪುತ್ರನನ್ನು ಲೋಕಸಭೆಗೆ ಆರಿಸಿ ಕಳುಹಿಸಲು ಎಲ್ಲಾ ರೀತಿಯ ಅಡ್ಡದಾರಿಗಳನ್ನು ಅನುಸರಿಸುತ್ತಿದ್ದಾರೆ ಎಂದರು.

ಉತ್ತರ ಕರ್ನಾಟಕ ಭಾಗಕ್ಕೆ ನಿರಂತರ ವಿದ್ಯುತ್ ಪೂರೈಕೆ ಮಾಡಬೇಕೆಂದು ಇಂಧನ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡುವ ಮೂಲಕ ಯಡಿಯೂರಪ್ಪ ಅವರು ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕ ಎಂಬ ಬೇಧಭಾವ ತೋರಿದ್ದಾರೆ ಎಂದು ದೂರಿದರು.

ಚುನಾವಣಾ ವೆಚ್ಚಕ್ಕಾಗಿ ಹಣ ವಸೂಲಿ ಮಾಡಲು ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸರ್ಕಾರ ಈ ರೀತಿಯ ದಂಧೆಗೆ ಇಳಿದಿದೆ. ಈ ಬಗ್ಗೆ ಚುನಾವಣಾ ಆಯೋಗ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಈ ಸಂದರ್ಭದಲ್ಲಿ ಅವರು ಆಗ್ರಹಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಬಿಜೆಪಿ ಕೊಲೆಗಡುಕ ಸರ್ಕಾರ: ಗುಲಾಂ ನಬಿ
ಭಾರತದಲ್ಲಿ ಹಿಂದೂಗಳು ಮಾತನಾಡುವುದು ತಪ್ಪಾ?: ಮುತಾಲಿಕ್
ಕೋಮುವಾದಿ ಪಕ್ಷವನ್ನು ದೂರವಿಡಿ: ಸೋನಿಯಾ ಕರೆ
ಹುಬ್ಬಳ್ಳಿ: ಯಡಿಯೂರಪ್ಪಗೆ ಕರವೇ ಘೇರಾವ್
ಕಾಂಗ್ರೆಸ್‌‌ ಶಾಸಕ ಸೋಮಣ್ಣ ಬಿಜೆಪಿಗೆ ?
ಯಡಿಯೂರಪ್ಪ ಸಾಧನೆ ನಮಗೆ ಶ್ರೀರಕ್ಷೆ: ಶೋಭಾ