ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಕಾಂಗ್ರೆಸ್‌‌ಗೆ ಇಂಥ ದುರ್ಗತಿ ಬರಬಾರದಿತ್ತು: ಯಡಿಯೂರಪ್ಪ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಾಂಗ್ರೆಸ್‌‌ಗೆ ಇಂಥ ದುರ್ಗತಿ ಬರಬಾರದಿತ್ತು: ಯಡಿಯೂರಪ್ಪ
ಒಂದು ಶತಮಾನಗಳ ಇತಿಹಾಸ ಹೊಂದಿರುವ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲು ಇನ್ನೂ ಸಾಧ್ಯವಾಗಿಲ್ಲ ಎಂದು ಟೀಕಿಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕಾಂಗ್ರೆಸ್‌ಗೆ ಇಂಥ ದುರ್ಗತಿ ಹಿಂದೆಂದೂ ಬಂದಿಲ್ಲ ಎಂದರು.

ಅವರು ಸೋಮವಾರ ಹುಬ್ಬಳ್ಳಿಯಲ್ಲಿ ಬಿಜೆಪಿಯ ವಿಜಯ ಸಂಕಲ್ಪ ಭವನ ಪ್ರಚಾರ ಕಾರ್ಯಾಲಯ ಉದ್ಘಾಟಿಸಿ ಮಾತನಾಡುತ್ತ, ಬಿಜೆಪಿ ಬೆಳವಣಿಗೆಯಿಂದ ಕಾಂಗ್ರೆಸ್ ಮುಖಂಡರು ದಿಗಿಲುಗೊಂಡಿದ್ದಾರೆ ಎಂದು ಹೇಳಿದರು.

ಬಂಗಾರಪ್ಪ, ಎಸ್.ಎಂ.ಕೃಷ್ಣ, ಧರಂಸಿಂಗ್, ಖರ್ಗೆಯಂಥ ಯುವಕರಿಗೆ ಕಾಂಗ್ರೆಸ್ ಅಖಾಡಕ್ಕೆ ಇಳಿಸುತ್ತಿದೆ. ಆದರೆ ಬಿಜೆಪಿ ರಾಘವೇಂದ್ರ, ಶಿವಕುಮಾರ್ ಉದಾಸಿ, ಪ್ರಹ್ಲಾದ ಜೋಶಿಯಂಥ ಹಿರಿಯರನ್ನು ಕಣಕ್ಕೆ ಇಳಿಸಿದೆ ಎಂದು ಚುಚ್ಚಿ ಲೇವಡಿ ಮಾಡಿದರು. ಇದು ಎರಡು ಪಕ್ಷಗಳಲ್ಲಿರುವ ಭಿನ್ನತೆ. ರಾಜ್ಯ ಸರ್ಕಾರದ ಸಾಧನೆ ಮತ್ತು ಕೇಂದ್ರದ ವೈಫಲ್ಯಗಳೇ ಪ್ರಸಕ್ತ ಚುನಾವಣೆಯಲ್ಲಿ ಬಿಜೆಪಿಯ ಪ್ರಮುಖ ಅಸ್ತ್ರ ಎಂದರು.

ರಸಗೊಬ್ಬರ ಕೊರತೆ, ಕೇಂದ್ರ ಗ್ರಿಡ್‌ನಿಂದ ವಿದ್ಯುತ್ ನೀಡುವಲ್ಲಿ ತಾರತಮ್ಯ, ನೆರೆಯ ರಾಜ್ಯಗಳಿಗೆ ಹೋಲಿಸಿದರೆ ಅನುದಾನ ಹಂಚಿಕೆಯಲ್ಲಿ ಮಲತಾಯಿ ಧೋರಣೆ ಮೂಲಕ ಕಾಂಗ್ರೆಸ್ ಪಕ್ಷ ರಾಜ್ಯವನ್ನು ನಿರ್ಲಕ್ಷಿಸಿದೆ ಎಂದು ದೂರಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಚುನಾವಣೆ ಖರ್ಚಿಗೆ ಹಣ ನೀಡಿ-ಯಡಿಯೂರಪ್ಪ ಬೆದರಿಕೆ
ಬಿಜೆಪಿ ಕೊಲೆಗಡುಕ ಸರ್ಕಾರ: ಗುಲಾಂ ನಬಿ
ಭಾರತದಲ್ಲಿ ಹಿಂದೂಗಳು ಮಾತನಾಡುವುದು ತಪ್ಪಾ?: ಮುತಾಲಿಕ್
ಕೋಮುವಾದಿ ಪಕ್ಷವನ್ನು ದೂರವಿಡಿ: ಸೋನಿಯಾ ಕರೆ
ಹುಬ್ಬಳ್ಳಿ: ಯಡಿಯೂರಪ್ಪಗೆ ಕರವೇ ಘೇರಾವ್
ಕಾಂಗ್ರೆಸ್‌‌ ಶಾಸಕ ಸೋಮಣ್ಣ ಬಿಜೆಪಿಗೆ ?