ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಚಿಕ್ಕಬಳ್ಳಾಪುರದಿಂದ ಭವಾನಿ ರೇವಣ್ಣ ಕಣಕ್ಕೆ?
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಚಿಕ್ಕಬಳ್ಳಾಪುರದಿಂದ ಭವಾನಿ ರೇವಣ್ಣ ಕಣಕ್ಕೆ?
ಮಾಜಿ ಪ್ರಧಾನಿ ದೇವೇಗೌಡರ ಕುಟುಂಬ ರಾಜಕಾರಣ ಮುಂದುವರಿದಿದ್ದು, ಗೌಡರ ಮತ್ತೊಬ್ಬ ಸೊಸೆ ಭವಾನಿ ರೇವಣ್ಣ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವರೆಂಬ ವದಂತಿ ರಾಜಕೀಯ ಪಡಸಾಲೆಯಲ್ಲಿ ಹರಿದಾಡತೊಡಗಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಚಾಮುಂಡೇಶ್ವರಿ ಉಪಚುನಾವಣೆಯಲ್ಲಿ ಸಿದ್ದರಾಮಯ್ಯ ಸ್ಪರ್ಧಿಸಿದ್ದಾಗ ಭವಾನಿ ಅಲ್ಲಿಂದ ಸ್ಪರ್ಧಿಸಬೇಕಿತ್ತು. ಆದರೆ ಕೊನೆ ಕ್ಷಣದಲ್ಲಿ ಅವರ ಹೆಸರು ಕೈ ಬಿಡಲಾಗಿತ್ತು.

ಮೈಸೂರು ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನವರಾದ ಭವಾನಿ ಅವರಿಗೆ ಮೈಸೂರು ಪ್ರಾಂತದಿಂದ ಕಣಕ್ಕಿಳಿಯುವ ಬಯಕೆ ಕೈಗೂಡಿಲ್ಲ. ಕೆಲ ತಿಂಗಳ ಹಿಂದೆ ಎಂಟು ವಿಧಾನಸಭಾ ಕ್ಷೇತ್ರಗಳ ಮರು ಚುನಾವಣೆ ಸಂದರ್ಭದಲ್ಲೂ ಭವಾನಿಯವರ ಹೆಸರು ಕೇಳಿ ಬಂದಿತ್ತು. ಆದರೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪತ್ನಿ ಅನಿತಾ ಮಧುಗಿರಿ ಕ್ಷೇತ್ರದಿಂದ ಕಣಕ್ಕಿಳಿದು ಅನಾಯಾಸವಾಗಿ ಗೆದ್ದು ಬಂದಿದ್ದರು.

ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಸೂಕ್ತ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಆಡಳಿತಾರೂಢ ಬಿಜೆಪಿ ಜಾಲಾಡುತ್ತಿದೆ. ಅರ್ಹ ಅಭ್ಯರ್ಥಿಯನ್ನು ನಿಲ್ಲಿಸುವ ಮೂಲಕ ಈ ಸ್ಥಾನ ಕಸಿದುಕೊಳ್ಳುವ ಯೋಚನೆ ಜೆಡಿಎಸ್‌‌ನದ್ದು. ಅಲ್ಲದೇ ಭವಾನಿಯವರನ್ನು ಕಣಕ್ಕಿಳಿಸಿ ಗೆಲ್ಲಿಸಿದಲ್ಲಿ, ಕಳೆದ ಚುನಾವಣೆಯಲ್ಲಿ ಜೆಡಿಎಸ್‌‌ನಿಂದ ದೂರವಾಗಿ ಕುಟುಂಬದ ಮಾನ ಹರಾಜು ಹಾಕಿದ ಬಚ್ಚೇಗೌಡರಿಗೆ ತಕ್ಕ ಪಾಠ ಕಲಿಸಲು ದೇವೇಗೌಡರು ಮತ್ತೊಂದು ರಣತಂತ್ರ ರೂಪಿಸುತ್ತಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪ್ರತಿಕಾರಕ್ಕಾಗಿ ಚರ್ಚ್ ಮೇಲೆ ದಾಳಿ: ಆಯೋಗಕ್ಕೆ ಹೇಳಿಕೆ
ಕಾಂಗ್ರೆಸ್‌‌ಗೆ ಇಂಥ ದುರ್ಗತಿ ಬರಬಾರದಿತ್ತು: ಯಡಿಯೂರಪ್ಪ
ಚುನಾವಣೆ ಖರ್ಚಿಗೆ ಹಣ ನೀಡಿ-ಯಡಿಯೂರಪ್ಪ ಬೆದರಿಕೆ
ಬಿಜೆಪಿ ಕೊಲೆಗಡುಕ ಸರ್ಕಾರ: ಗುಲಾಂ ನಬಿ
ಭಾರತದಲ್ಲಿ ಹಿಂದೂಗಳು ಮಾತನಾಡುವುದು ತಪ್ಪಾ?: ಮುತಾಲಿಕ್
ಕೋಮುವಾದಿ ಪಕ್ಷವನ್ನು ದೂರವಿಡಿ: ಸೋನಿಯಾ ಕರೆ