ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಮುಸ್ಲಿಮರ ಅಂಗಡಿಗಳಲ್ಲಿ ವ್ಯಾಪಾರ ಮಾಡ್ಬೇಡಿ: ಮುತಾಲಿಕ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮುಸ್ಲಿಮರ ಅಂಗಡಿಗಳಲ್ಲಿ ವ್ಯಾಪಾರ ಮಾಡ್ಬೇಡಿ: ಮುತಾಲಿಕ್
NRB
ಹಿಂದುಗಳು ಮುಸ್ಲಿಮರ ಅಂಗಡಿಗಳಿಗೆ ಹೋಗಿ ವ್ಯಾಪಾರ ಮಾಡಬಾರದು ಎಂದು ಶ್ರೀರಾಮಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಅವರು ಹಿಂದೂ ಧರ್ಮ ಸಂರಕ್ಷಣಾ ವೇದಿಕೆಯ ಬೆಂಗಳೂರು ಶಾಖೆಯನ್ನು ಸೋಮವಾರ ಉದ್ಘಾಟಿಸಿ ಮಾತನಾಡುತ್ತ, ಈ ದೇಶದಲ್ಲಿ ಸಮಾನ ಕಾನೂನು ಜಾರಿ, ಗೋ ಹತ್ಯೆ ನಿಷೇಧ, ರಾಮಮಂದಿರ ನಿರ್ಮಾಣ ಜಾರಿಯಾಗಬೇಕಾದರೆ ಎಲ್ಲಾ ಹಿಂದೂಗಳು ಮುಸ್ಲಿಮರ ಅಂಗಡಿಗಳಲ್ಲಿ ವ್ಯಾಪಾರ ಮಾಡುವುದನ್ನು ನಿಲ್ಲಿಸಬೇಕು. ಸಮಾಜದ ಹಿತಕ್ಕಾಗಿ ಇದರ ಅಗತ್ಯವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಚುನಾವಣೆಯಲ್ಲಿ ಜಾತಿ ಪ್ರಮುಖವಾಗುತ್ತಿರುವುದು ವಿಷಾದನೀಯ ಎಂದ ಮುತಾಲಿಕ್, ಪುರುಷರು ಮತ್ತು ಮಹಿಳೆಯರು ಇಬ್ಬರೂ ಪಬ್‌‌ಗೆ ಹೋಗುವುದು ತಪ್ಪು, ಇದು ನಮ್ಮ ಸಂಸ್ಕೃತಿಯಲ್ಲ ಎಂದರು. ನಮ್ಮ ಸರ್ಕಾರ ಪ್ರೇಮಿಗಳ ದಿನಾಚರಣೆಯನ್ನು ಅಧಿಕೃತವಾಗಿ ಬೆಂಬಲಿಸಿದೆ. ನಾವು ಪ್ರೇಮದ ವಿರೋಧಿಗಳಲ್ಲ, ಆದರೆ ಕೇವಲ ಒಂದು ದಿನ ಮಾತ್ರ ಪ್ರೇಮಿಗಳ ದಿನ ಆಚರಿಸುವುದಕ್ಕೆ ತಮ್ಮ ವಿರೋಧ ಇದೆ ಎಂದು ಸ್ಪಷ್ಟಪಡಿಸಿದರು.

ಮಂಗಳೂರಿನ ಎಮ್ನೇಶಿಯ ಪಬ್ ಮೇಲಿನ ದಾಳಿ, ಪ್ರೇಮಿಗಳ ದಿನಾಚರಣೆಯಂದು ಸೆರೆ ಸಿಗುವ ಜೋಡಿಗಳಿಗೆ ಸ್ಥಳದಲ್ಲೇ ಮದುವೆ ಮಾಡಿಸುವುದಾಗಿ ಹೇಳುವ ಮೂಲಕ ಶ್ರೀರಾಮಸೇನೆ ರಾಷ್ಟ್ರದ್ಯಾಂತ ವ್ಯಾಪಕ ಟೀಕೆಗೆ ಒಳಗಾಗಿತ್ತು.

PTI
ವರುಣ್‌‌ಗೆ ಸತ್ಯ ಹೇಳುವ ಎದೆಗಾರಿಕೆ ಇದೆ: ಫಿಲಿಬಿಟ್‌ನ ಚುನಾವಣಾ ಪ್ರಚಾರದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿರುವ ಬಿಜೆಪಿಯ ವರುಣ್ ಗಾಂಧಿಗೆ ಶ್ರೀರಾಮಸೇನೆಯ ಪ್ರಮೋದ್ ಮುತಾಲಿಕ್ ಬೆಂಬಲ ಸೂಚಿಸಿದ್ದು, ಆತ ನೆಹರು ವಂಶದ ಗಂಡುಗಲಿ, ಸತ್ಯ ಹೇಳುವ ಎದೆಗಾರಿಕೆ ಆತನಿಗಿದೆ ಎಂದು ಈ ಸಂದರ್ಭದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವರುಣ್ ಗಾಂಧಿಗೆ ಸತ್ಯ ಹೇಳುವ ಧೈರ್ಯ ಇದೆ, ಶ್ರೀರಾಮಸೇನೆ ವರುಣ್‌ಗೆ ಬೆಂಬಲ ಸೂಚಿಸುವುದಾಗಿಯೂ ಹೇಳಿದರು. ಆ ನಿಟ್ಟಿನಲ್ಲಿ ಪ್ರತಿಯೊಬ್ಬ ಹಿಂದೂವು ವರುಣ್‌ಗೆ ಬೆಂಬಲ ನೀಡಬೇಕಾಗಿದೆ ಎಂದರು.

ನೆಹರು ವಂಶದ ಗಂಡುಗಲಿಯಾಗಿರುವ ವರುಣ್ ನಿಜವಾದ ಹೀರೋ ಎಂದು ಬಣ್ಣಿಸಿದ ಮುತಾಲಿಕ್, ದೇಶದಲ್ಲಿ ಹಿಂದೂಗಳು ಅನುಭವಿಸುತ್ತಿರುವ ವಾಸ್ತವಾಂಶವನ್ನು ಆತ ಬಿಚ್ಚಿಟ್ಟಿದ್ದಾನೆ. ಇದರಿಂದ ಹಿಂದೂಗಳಿಗೆ ಸತ್ಯದ ದರ್ಶನವಾದಂತಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಬ್ರಹ್ಮತಂತ್ರ ಸ್ವತಂತ್ರ ಪರಕಾಲ ಸ್ವಾಮೀಜಿ, ನಾಗರಾಜ ಅಯ್ಯಂಗಾರ್ ಸ್ವಾಮೀಜಿ, ಚಂದ್ರಶೇಖರಾನಂದ ಸ್ವಾಮೀಜಿ, ಶಿವಪಂಚಾಕ್ಷರಿ ದೇಶಿಕೇಂದ್ರ ಸ್ವಾಮೀಜಿ, ಕೊಳದ ಮಠದ ಸ್ವಾಮೀಜಿ, ಸಂಘಟನೆಯ ರಾಜ್ಯಾಧ್ಯಕ್ಷ ಶ್ರೀನಿವಾಸ್ ನರಸಿಂಹನ್ ಉಪಸ್ಥಿತರಿದ್ದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಚಿಕ್ಕಬಳ್ಳಾಪುರದಿಂದ ಭವಾನಿ ರೇವಣ್ಣ ಕಣಕ್ಕೆ?
ಪ್ರತಿಕಾರಕ್ಕಾಗಿ ಚರ್ಚ್ ಮೇಲೆ ದಾಳಿ: ಆಯೋಗಕ್ಕೆ ಹೇಳಿಕೆ
ಕಾಂಗ್ರೆಸ್‌‌ಗೆ ಇಂಥ ದುರ್ಗತಿ ಬರಬಾರದಿತ್ತು: ಯಡಿಯೂರಪ್ಪ
ಚುನಾವಣೆ ಖರ್ಚಿಗೆ ಹಣ ನೀಡಿ-ಯಡಿಯೂರಪ್ಪ ಬೆದರಿಕೆ
ಬಿಜೆಪಿ ಕೊಲೆಗಡುಕ ಸರ್ಕಾರ: ಗುಲಾಂ ನಬಿ
ಭಾರತದಲ್ಲಿ ಹಿಂದೂಗಳು ಮಾತನಾಡುವುದು ತಪ್ಪಾ?: ಮುತಾಲಿಕ್