ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಯುಪಿಎ ಬಿರುಕು ಸರಿಪಡಿಸಿಕೊಳ್ಳಿ: ದೇವೇಗೌಡ ತಿರುಗೇಟು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಯುಪಿಎ ಬಿರುಕು ಸರಿಪಡಿಸಿಕೊಳ್ಳಿ: ದೇವೇಗೌಡ ತಿರುಗೇಟು
ತೃತೀಯ ರಂಗದ ಅಸ್ತಿತ್ವದ ಬಗ್ಗೆ ವಾಗ್ದಾಳಿ ನಡೆಸಿರುವ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿಗೆ ತಿರುಗೇಟು ನೀಡಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಯುಪಿಯ ಬಿರುಕನ್ನು ಮೊದಲು ಸರಿಪಡಿಸಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ.

ದಾವಣಗೆರೆಯಲ್ಲಿ ಸೋಮವಾರ ಕಾಂಗ್ರೆಸ್‌ನ ಭಾರತ್ ನಿರ್ಮಾಣ್ ಬೃಹತ್ ಸಮಾವೇಶದಲ್ಲಿ ಕಾಂಗ್ರೆಸ್ ವರಿಷ್ಠೆ ಸೋನಿಯಾ ಅವರು, ಬಿಜೆಪಿ ಹಾಗೂ ತೃತೀಯ ರಂಗದ ಬಗ್ಗೆ ಕಿಡಿಕಾರಿದ್ದರು. ತೃತೀಯರಂಗದ ನಾಯಕರು ಮತ್ತು ಪ್ರಧಾನಿ ಆಕಾಂಕ್ಷಿಗಳ ಗುದ್ದಾಟದ ವಿರುದ್ಧ ವಾಗ್ದಾಳಿ ನಡೆಸಿದ್ದರು.

ಈ ಟೀಕೆಗೆ ಪ್ರತಿಕ್ರಿಯೆ ನೀಡಿದ ಗೌಡರು, ತೃತೀಯರಂಗವನ್ನು ನಿರ್ಲಕ್ಷಿಸಬೇಡಿ ಎಂದು ಸೋನಿಯಾಗೆ ಎಚ್ಚರಿಕೆ ನೀಡಿದ ಅವರು, ಕಳೆದ ಐದು ವರ್ಷಗಳ ಕಾಲ ಆಡಳಿತ ನಡೆಸಿದ ಯುಪಿಎನಲ್ಲೇ ಬಿರುಕು ಮೂಡಿದೆ, ಮೊದಲು ಅದನ್ನು ಸರಿಪಡಿಸಿಕೊಳ್ಳಿ, ಅಲ್ಲದೇ ಯುಪಿಎನಲ್ಲಿ ಎಷ್ಟು ಮಂದಿ ಇರುತ್ತಾರೆ ಅಂತಲೂ ಕಾದು ನೋಡಬೇಡವೇ?ಎಂದು ಪ್ರಶ್ನಿಸಿದರು.

ಲೋಕಸಭಾ ಚುನಾವಣೆಯಲ್ಲಿ ಯುಪಿಎ ವೈಫಲ್ಯ ಹಾಗೂ ಕೋಮುವಾದಿಗಳ ಅಟ್ಟಹಾಸವನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸುವುದಾಗಿ ಈ ಸಂದರ್ಭದಲ್ಲಿ ತಿಳಿಸಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮುಸ್ಲಿಮರ ಅಂಗಡಿಗಳಲ್ಲಿ ವ್ಯಾಪಾರ ಮಾಡ್ಬೇಡಿ: ಮುತಾಲಿಕ್
ಚಿಕ್ಕಬಳ್ಳಾಪುರದಿಂದ ಭವಾನಿ ರೇವಣ್ಣ ಕಣಕ್ಕೆ?
ಪ್ರತಿಕಾರಕ್ಕಾಗಿ ಚರ್ಚ್ ಮೇಲೆ ದಾಳಿ: ಆಯೋಗಕ್ಕೆ ಹೇಳಿಕೆ
ಕಾಂಗ್ರೆಸ್‌‌ಗೆ ಇಂಥ ದುರ್ಗತಿ ಬರಬಾರದಿತ್ತು: ಯಡಿಯೂರಪ್ಪ
ಚುನಾವಣೆ ಖರ್ಚಿಗೆ ಹಣ ನೀಡಿ-ಯಡಿಯೂರಪ್ಪ ಬೆದರಿಕೆ
ಬಿಜೆಪಿ ಕೊಲೆಗಡುಕ ಸರ್ಕಾರ: ಗುಲಾಂ ನಬಿ