ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಮುಖ್ಯಮಂತ್ರಿಯಿಂದ ಕೀಳುಮಟ್ಟದ ರಾಜಕೀಯ: ಕುಮಾರಸ್ವಾಮಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮುಖ್ಯಮಂತ್ರಿಯಿಂದ ಕೀಳುಮಟ್ಟದ ರಾಜಕೀಯ: ಕುಮಾರಸ್ವಾಮಿ
ಉತ್ತರ ಕರ್ನಾಟಕಕ್ಕೆ ನಿರಂತರ ವಿದ್ಯುತ್ ಪೂರೈಕೆ ಮಾಡುವಂತೆ ಸೂಚನೆ ನೀಡುವ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕರ್ನಾಟಕವನ್ನು ವಿಭಜಿಸುವ ರಾಜಕಾರಣ ಮಾಡುತ್ತಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ಅಧಿಕಾರಿಗಳೊಂದಿಗೆ ಸಭೆ ಬಡೆಸಿದ್ದ ಯಡಿಯೂರಪ್ಪ ಅವರು ಉತ್ತರ ಕರ್ನಾಟಕಕ್ಕೆ ಮಾತ್ರದ ದಿನದ 24 ಗಂಟೆ ಕಾಲ ವಿದ್ಯುತ್ ನೀಡುವಂತೆ ಸೂಚನೆ ನೀಡಿದ್ದರು. ಈ ಮೂಲಕ ಹಳೆಯ ಕರ್ನಾಟಕ ಮತ್ತು ಉತ್ತರ ಕರ್ನಾಟಕ ಎಂದು ರಾಜ್ಯವನ್ನು ಇಬ್ಬಾಗ ಮಾಡಲು ಹೊರಟ್ಟಿದ್ದಾರೆ ಎಂದು ಕಿಡಿಕಾರಿದರು.

ಕೇವಲ ಏಪ್ರಿಲ್‌‌ವರೆಗೆ ವಿದ್ಯುತ್ ನೀಡಿ ಎಂದೂ ಹೇಳಿದ್ದಾರೆ. ಚುನಾವಣೆಯಲ್ಲಿ ಮತ ಗಳಿಕೆಗೆ ಈ ತಂತ್ರ ರೂಪಿಸಲಾಗಿದ್ದು, ಚುನಾವಣೆ ನಂತರ ರಾಜ್ಯವನ್ನು ಮತ್ತೆ ಕಗ್ಗತ್ತಲಿಗೆ ಕೊಂಡೊಯ್ಯಲಿದ್ದಾರೆ ಎಂದು ಟೀಕಿಸಿದರು.

ಬಳ್ಳಾರಿ ಲೋಕಸಭೆ ಕ್ಷೇತ್ರದಲ್ಲಿ ಓಬಳಾಪುರ ಗಣಿ ಧಣಿಗಳಲ್ಲಿ ಒಬ್ಬರಾದ ಶ್ರೀರಾಮುಲು ಸೋದರಿಯನ್ನು ಕಣಕ್ಕಿಳಿಸಿದ್ದರೆ, ಅತ್ತ ಕರ್ನಾಟಕ-ಆಂಧ್ರ ಗಡಿ ಭಾಗದ ರಾಯದುರ್ಗ ಕ್ಷೇತ್ರದಲ್ಲಿ ಇದೇ ಕಂಪೆನಿಯ ನಿರ್ದೇಶಕ ರಾಮಚಂದ್ರ ರೆಡ್ಡಿ ಕಣಕ್ಕಿಳಿದಿದ್ದಾರೆ. ಈ ಮೂಲಕ ಗಣಿ ಭಾಗದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಸಮ್ಮಿಶ್ರವಾಗಿ ಸ್ಪರ್ಧೆಗಿಳಿದಿದೆ ಎಂದು ಆರೋಪಿಸಿದರು,.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸರ್ಕಾರಿ ನೌಕರರು ಪ್ರಚಾರಕ್ಕೆ ಹೋದ್ರೆ ಎಚ್ಚರ: ವಿದ್ಯಾಶಂಕರ್
ಯುಪಿಎ ಬಿರುಕು ಸರಿಪಡಿಸಿಕೊಳ್ಳಿ: ದೇವೇಗೌಡ ತಿರುಗೇಟು
ಮುಸ್ಲಿಮರ ಅಂಗಡಿಗಳಲ್ಲಿ ವ್ಯಾಪಾರ ಮಾಡ್ಬೇಡಿ: ಮುತಾಲಿಕ್
ಚಿಕ್ಕಬಳ್ಳಾಪುರದಿಂದ ಭವಾನಿ ರೇವಣ್ಣ ಕಣಕ್ಕೆ?
ಪ್ರತಿಕಾರಕ್ಕಾಗಿ ಚರ್ಚ್ ಮೇಲೆ ದಾಳಿ: ಆಯೋಗಕ್ಕೆ ಹೇಳಿಕೆ
ಕಾಂಗ್ರೆಸ್‌‌ಗೆ ಇಂಥ ದುರ್ಗತಿ ಬರಬಾರದಿತ್ತು: ಯಡಿಯೂರಪ್ಪ