ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಬೆಳಗಾವಿ: ಚುನಾವಣಾ ಪ್ರಚಾರಕ್ಕೆ ಬಂದ್ರೆ ಜಾಗ್ರತೆ !
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬೆಳಗಾವಿ: ಚುನಾವಣಾ ಪ್ರಚಾರಕ್ಕೆ ಬಂದ್ರೆ ಜಾಗ್ರತೆ !
ಚುನಾವಣೆಯ ಪ್ರಚಾರಕ್ಕಾಗಿ ಗ್ರಾಮಕ್ಕೆ ಕಾಲಿಟ್ಟರೆ ಜಾಗ್ರತೆ ಎಂದು ಬೆಳಗಾವಿಯ ಕಾಡೋಳಿ, ಕೆಡ್ನೂರ್ ಹಾಗೂ ಸುತ್ತಮುತ್ತಲ ಗ್ರಾಮದ ರೈತರು ಆಡಳಿತರೂಢ ಬಿಜೆಪಿ ಸೇರಿದಂತೆ ಎಲ್ಲಾ ರಾಜಕೀಯ ಪಕ್ಷಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಅಲ್ಲದೇ ಆಲೂಗಡ್ಡೆ ಬೆಳೆ ನಾಶಕ್ಕೆ ಪರಿಹಾರ ಎಂಬಂತೆ ಸರ್ಕಾರ ನೀಡಿರುವ ಚೆಕ್ ಅನ್ನು ಬೆಂಕಿ ಹಾಕಿ ಸುಟ್ಟುಹಾಕುವುದಾಗಿಯೂ ರೈತರು ಕಿಡಿಕಾರಿದ್ದಾರೆ. ಯಾವ ರಾಜಕೀಯ ಪಕ್ಷಗಳಿಗೂ ರೈತರ ಬಗ್ಗೆ ಕಾಳಜಿ ಇಲ್ಲ, ಕೇವಲ ವೋಟಿಗಾಗಿ ಮಾತ್ರ ರೈತರ ಕುರಿತು ಮೊಸಳೆ ಕಣ್ಣೀರು ಸುರಿಸುತ್ತಾರೆ ವಿನಃ, ರೈತರ ಕಷ್ಟದ ಪರಿಹಾರಕ್ಕಾಗಿ ಯಾರೂ ಮುಂದಾಗಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆಲೂಗಡ್ಡೆ ಬೆಳೆ ನಾಶಕ್ಕೆ ಪರಿಹಾರಾರ್ಥವಾಗಿ ಸರ್ಕಾರ ನೀಡಿರುವ ಪರಿಹಾರ ಮೊತ್ತದ ವಿರುದ್ಧ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೆರವಿನೊಂದಿಗೆ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.

ಕಳೆದ ಜೂನ್-ಜುಲೈ ಮಳೆಯಿಂದಾಗಿ ಬಟಾಟೆ ಬೆಳೆಗಾರರು ಬೆಳೆ ನಾಶದಿಂದಾಗಿ ಸಂಪೂರ್ಣ ಕಂಗಾಲಾಗಿದ್ದಾರೆ ಎಂದು ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಅಪ್ಪಾಸಾಬ್ ದೇಸಾಯ್ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ್ದು, ಲೋಕಸಭಾ ಚುನಾವಣಾ ದಿನಾಂಕ ಘೋಷಣೆಯಾದ ನಂತರವಷ್ಟೇ ರಾಜ್ಯ ಸರ್ಕಾರ ಬೆಳೆ ನಾಶಕ್ಕೆ ಪರಿಹಾರ ನೀಡಲು ಮುಂದಾಗಿದೆ ಎಂದು ದೂರಿದರು. ಒಂದು ಎಕರೆ ಆಲೂಗಡ್ಡೆ ಬೆಳೆ ಬೆಳೆಯಲು ಕನಿಷ್ಠ 25ಸಾವಿರ ರೂ.ಖರ್ಚಾಗುತ್ತದೆ. ಆದರೆ ಬೆಳೆ ನಾಶಕ್ಕೆ ಸರ್ಕಾರ ನೀಡಿರುವ ಪರಿಹಾರದ ಮೊತ್ತ ಎಕರೆಗೆ 400ರೂಪಾಯಿ ಎಂದು ದೇಸಾಯ್ ಆಪಾದಿಸಿದರು.

ಸರ್ಕಾರ ಹಾಗೂ ರಾಜಕೀಯ ಪಕ್ಷಗಳು ರೈತರ ಕಷ್ಟಗಳನ್ನು ನಿರ್ಲಕ್ಷಿಸುವುದನ್ನು ಮುಂದುವರಿಸಿದ್ದೇ ಆದಲ್ಲಿ, ಚುನಾವಣಾ ಪ್ರಚಾರಕ್ಕೆ ಗ್ರಾಮಗಳಿಗೆ ಕಾಲಿಡಲು ಬಿಡುವುದಿಲ್ಲ ಎಂದು ಎಚ್ಚರಿಕೆಯನ್ನೂ ಈ ಸಂದರ್ಭದಲ್ಲಿ ನೀಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಭಾರತ್ ನಿರ್ಮಾಣ್ ಅಲ್ಲ,ನಿರ್ನಾಮ: ಬಿ.ವೈ.ರಾಘವೇಂದ್ರ
ಮುಖ್ಯಮಂತ್ರಿಯಿಂದ ಕೀಳುಮಟ್ಟದ ರಾಜಕೀಯ: ಕುಮಾರಸ್ವಾಮಿ
ಸರ್ಕಾರಿ ನೌಕರರು ಪ್ರಚಾರಕ್ಕೆ ಹೋದ್ರೆ ಎಚ್ಚರ: ವಿದ್ಯಾಶಂಕರ್
ಯುಪಿಎ ಬಿರುಕು ಸರಿಪಡಿಸಿಕೊಳ್ಳಿ: ದೇವೇಗೌಡ ತಿರುಗೇಟು
ಮುಸ್ಲಿಮರ ಅಂಗಡಿಗಳಲ್ಲಿ ವ್ಯಾಪಾರ ಮಾಡ್ಬೇಡಿ: ಮುತಾಲಿಕ್
ಚಿಕ್ಕಬಳ್ಳಾಪುರದಿಂದ ಭವಾನಿ ರೇವಣ್ಣ ಕಣಕ್ಕೆ?