ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಆಡಳಿತಾರೂಢ ಬಿಜೆಪಿ ವಿರುದ್ಧ ನಿಗಾ ಇಡಿ: ಕಾಂಗ್ರೆಸ್-ಜೆಡಿಎಸ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆಡಳಿತಾರೂಢ ಬಿಜೆಪಿ ವಿರುದ್ಧ ನಿಗಾ ಇಡಿ: ಕಾಂಗ್ರೆಸ್-ಜೆಡಿಎಸ್
ಚುನಾವಣಾ ಆಯೋಗಕ್ಕೆ ಕಾಂಗ್ರೆಸ್-ಜೆಡಿಎಸ್ ದೂರು...
ಲೋಕಸಭಾ ಚುನಾವಣೆಗಳ ಸಿದ್ದತೆಗಳ ಅವಲೋಕನ ನಡೆಸಲು ರಾಜ್ಯಕ್ಕೆ ಮಂಗಳವಾರ ಭೇಟಿ ನೀಡಿರುವ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ಗೋಪಾಲಸ್ವಾಮಿ ಅವರನ್ನು ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು ಭೇಟಿಯಾಗಿ, ರಾಜ್ಯದ ಆಡಳಿತರೂಢ ಬಿಜೆಪಿ ಸರ್ಕಾರ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಳ್ಳುವ ಹಾಗೂ ದುಷ್ಕೃತ್ಯ ಎಸಗುವ ಸಾಧ್ಯತೆ ಇರುವುದಾಗಿ ಆತಂಕ ವ್ಯಕ್ತಪಡಿಸಿ ಮನವಿ ಸಲ್ಲಿಸಿ, ಕರ್ನಾಟಕದ ಮೇಲೆ ಚುನಾವಣಾ ಆಯೋಗ ವಿಶೇಷ ನಿಗಾ ವಹಿಸಬೇಕೆಂದು ತಿಳಿಸಿದ್ದಾರೆ.

ರಾಜ್ಯದ ಕರಾವಳಿ ಪ್ರದೇಶವಾದ ಮಂಗಳೂರು, ಉಡುಪಿಯಲ್ಲಿ 'ನೈತಿಕ ಪೊಲೀಸರು' ದಾಳಿ ನಡೆಸುವ ಮೂಲಕ ಕೋಮುದಳ್ಳುರಿಯನ್ನು ಹುಟ್ಟುಹಾಕುತ್ತಿರುವುದಾಗಿ ಜೆಡಿಎಸ್ ಮತ್ತು ಕಾಂಗ್ರೆಸ್ ಮುಖಂಡರು ಗೋಪಾಲಸ್ವಾಮಿ ಅವರಿಗೆ ವಿವರಣೆ ನೀಡಿದ್ದು, ಆಡಳಿತರೂಢ ಪಕ್ಷ ಬಳ್ಳಾರಿಯಲ್ಲಿ ಅಧಿಕ ಸಂಖ್ಯೆ ನಕಲಿ ಮತದಾರರನ್ನು ಸೃಷ್ಟಿಸುತ್ತಿರುವುದಾಗಿಯೂ ಆರೋಪಿಸಿದರು.

ಸರ್ಕಾರದ ಬೆಂಬಲದೊಂದಿಗೆ ನಡೆಯುವ ಹಿಂದೂ ಸಮಾಜೋತ್ಸವದ ಕುರಿತು ಚುನಾವಣಾ ಆಯೋಗ ಕಠಿಣ ಕ್ರಮ ಕೈಗೊಳ್ಳಬೇಕೆಂದು ಜೆಡಿಎಸ್ ಈ ಸಂದರ್ಭದಲ್ಲಿ ಆಗ್ರಹಿಸಿದೆ. ಹಾಗೇ ಕೋಮುಸೂಕ್ಷ್ಮ ಪ್ರದೇಶವಾಗಿರುವ ಭಟ್ಕಳ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿನ ಅಲ್ಪಸಂಖ್ಯಾತರ ಹೆಸರನ್ನು ಮತದಾರರ ಪಟ್ಟಿಯಿಂದ ಉದ್ದೇಶಪೂರ್ವಕವಾಗಿ ತೆಗೆದುಹಾಕಲಾಗಿದೆ ಎಂದು ಕಾಂಗ್ರೆಸ್‌ನ ಎಂ.ಪಿ.ಪ್ರಕಾಶ್ ದೂರಿದ್ದಾರೆ.

ಬಳ್ಳಾರಿ ಲೋಕಸಭಾ ಕ್ಷೇತ್ರವನ್ನು ಸೂಕ್ಷ್ಮ ಪ್ರದೇಶ ಎಂದು ಪರಿಗಣಿಸಬೇಕು ಮತ್ತು ಮುಕ್ತ ಚುನಾವಣೆ ನಡೆಯುವಂತೆ ಅನುಕೂಲವಾಗುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂದು ಎಂ.ಪಿ.ಪ್ರಕಾಶ್ ಮತ್ತು ಜೆಡಿಎಸ್‌ನ ವೈ.ಎಸ್.ವಿ.ದತ್ತ ಅವರು ಗೋಪಾಲಸ್ವಾಮಿ ಅವರಲ್ಲಿ ಮನವಿ ಮಾಡಿಕೊಂಡರು.

ಈ ಸಂದರ್ಭದಲ್ಲಿ ಬಿಜೆಪಿ ಪ್ರತಿನಿಧಿಯಾದ ಶಾಸಕ ಸಿ.ಟಿ.ರವಿ, ರೈತರ ಕಲ್ಯಾಣಾರ್ಥವಾಗಿ ಸರ್ಕಾರ ರೈತರಿಗೆ ನೀಡಲು ಉದ್ದೇಶಿಸಿರುವ 1ಸಾವಿರ ರೂ.ಗಳ ಸಬ್ಸಿಡಿಯನ್ನು ನೀಡಲು ಚುನಾವಣಾ ಆಯೋಗ ಅನುಮತಿ ನೀಡಬೇಕು. ಅದೇ ರೀತಿ ವಿದ್ಯಾರ್ಥಿಗಳಿಗೆ ಸೈಕಲ್ ವಿತರಿಸಲು ಕೂಡ ಅವಕಾಶ ಕಲ್ಪಿಸಿಕೊಡಬೇಕು. ಯಾಕೆಂದರೆ ವಿದ್ಯಾರ್ಥಿಗಳು ಮತದಾರರಲ್ಲ ಎಂದು ರವಿ ಗೋಪಾಲಸ್ವಾಮಿ ಅವರಲ್ಲಿ ಮನವಿ ಮಾಡಿಕೊಂಡರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಬೆಳಗಾವಿ: ಚುನಾವಣಾ ಪ್ರಚಾರಕ್ಕೆ ಬಂದ್ರೆ ಜಾಗ್ರತೆ !
ಭಾರತ್ ನಿರ್ಮಾಣ್ ಅಲ್ಲ,ನಿರ್ನಾಮ: ಬಿ.ವೈ.ರಾಘವೇಂದ್ರ
ಮುಖ್ಯಮಂತ್ರಿಯಿಂದ ಕೀಳುಮಟ್ಟದ ರಾಜಕೀಯ: ಕುಮಾರಸ್ವಾಮಿ
ಸರ್ಕಾರಿ ನೌಕರರು ಪ್ರಚಾರಕ್ಕೆ ಹೋದ್ರೆ ಎಚ್ಚರ: ವಿದ್ಯಾಶಂಕರ್
ಯುಪಿಎ ಬಿರುಕು ಸರಿಪಡಿಸಿಕೊಳ್ಳಿ: ದೇವೇಗೌಡ ತಿರುಗೇಟು
ಮುಸ್ಲಿಮರ ಅಂಗಡಿಗಳಲ್ಲಿ ವ್ಯಾಪಾರ ಮಾಡ್ಬೇಡಿ: ಮುತಾಲಿಕ್